For Quick Alerts
  ALLOW NOTIFICATIONS  
  For Daily Alerts

  ನಾನು ಹೇಳಿದ್ದೇ ಒಂದು, ಆಗಿದ್ದೇ ಇನ್ನೊಂದು: ವಿವಾದದ ಬಗ್ಗೆ ಪ್ರಕಾಶ್ ರೈ ಸ್ಪಷ್ಟನೆ

  By Naveen
  |

  ನಟ ಪ್ರಕಾಶ್ ರೈ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಒಂದು ಹೇಳಿಕೆಯಿಂದ ಸುದ್ದಿ ಮಾಡುತ್ತಿದ್ದಾರೆ.

  ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಮಾತನಾಡಿದ ಪ್ರಕಾಶ್ ರೈ, ಪ್ರಧಾನಿ ಮೋದಿ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದರು. ಜೊತೆಗೆ ''ಯೋಗಿ ಆದಿತ್ಯನಾಥ್ ನನಗಿಂತ ಒಳ್ಳೆಯ ನಟರು. ನನಗೆ ಬಂದಿರುವ 5 ರಾಷ್ಟ್ರ ಪ್ರಶಸ್ತಿಗಳನ್ನು ಅವರಿಗೇ ಕೊಟ್ಟು ಬಿಡೋಣ ಅನ್ನಿಸಿದೆ'' ಎಂದು ಹೇಳಿದ್ದರು.

  ಪ್ರಕಾಶ್ ರೈ ಅವರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ ಐ)ನ 11ನೇ ರಾಜ್ಯ ಸಮ್ಮೇಳನ ಸಮಾರಂಭದಲ್ಲಿ ನೀಡಿದ ಈ ಹೇಳಿಕೆ ಈಗ ದೊಡ್ಡ ಸುದ್ದಿ ಆಗಿದೆ. ಟ್ವಿಟ್ಟರ್ ನಲ್ಲಿ ಅನೇಕರು ಈ ಬಗ್ಗೆ ಟೀಕೆ ಮಾಡಿದ್ದಾರೆ.

  ಈಗ ಇದೇ ಹೇಳಿಕೆ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ಸುದ್ದಿ ನೋಡಿ ನಗು ಬಂತು

  ಸುದ್ದಿ ನೋಡಿ ನಗು ಬಂತು

  ''ಸುದ್ದಿ ವಾಹಿನಿಗಳಲ್ಲಿ ಪ್ರಕಾಶ್ ರಾಜ್ ತಮ್ಮ ರಾಷ್ಟ್ರ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಾರೆ ಎಂಬ ಸುದ್ದಿಯನ್ನು ನೋಡಿ ನನಗೆ ನಗು ಬಂತು. ನಾನು ಪ್ರಶಸ್ತಿಗಳನ್ನು ಹಿಂತಿರುಗಿಸುವಷ್ಟು ಮೂರ್ಖನಲ್ಲ. ಅದು ನನ್ನ ಕೆಲಸಕ್ಕೆ ನೀಡಿದ್ದು, ಅದರ ಬಗ್ಗೆ ನನಗೆ ಗೌರವ ಇದೆ'' - ಪ್ರಕಾಶ್ ರೈ, ನಟ

  ಪ್ರಧಾನಿ ಅವರನ್ನು ಪ್ರಶ್ನೆ ಮಾಡಿದೆ

  ಪ್ರಧಾನಿ ಅವರನ್ನು ಪ್ರಶ್ನೆ ಮಾಡಿದೆ

  "ಪ್ರಶಸ್ತಿಗಳನ್ನು ವಾಪಸ್ ನೀಡುವ ಬಗ್ಗೆ ನಾನು ಹೇಳಿಯೇ ಇಲ್ಲ. ಆ ಸುದ್ದಿ ಕೇಳಿದಾಗ ನನಗೆ ಆಶ್ಚರ್ಯ ಆಯಿತು. ಗೌರಿ ಅವರ ಹತ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ನಾನು ಪ್ರಧಾನ ಮಂತ್ರಿ ಅವರನ್ನು ಪ್ರಶ್ನೆ ಮಾಡಿದೆ'' - ಪ್ರಕಾಶ್ ರೈ, ನಟ

  ನಾನು ಒಬ್ಬ ಭಾರತದ ಪ್ರಜೆಯಷ್ಟೆ

  ನಾನು ಒಬ್ಬ ಭಾರತದ ಪ್ರಜೆಯಷ್ಟೆ

  ''ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿರುವ ಹಲವರು ಪ್ರಧಾನಿ ಮೋದಿಯವರ ಫಾಲೋವರ್ ಗಳಾದರೂ ನಮ್ಮ ಪ್ರಧಾನಿ ಯಾಕೆ ಸುಮ್ಮನಿದ್ದಾರೆ ಎಂದಷ್ಟೇ ನಾನು ಪ್ರಶ್ನಿಸಿದ್ದು. ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ, ನಾನು ಭಾರತದ ಒಬ್ಬ ಪ್ರಜೆಯಷ್ಟೆ'' - ಪ್ರಕಾಶ್ ರೈ, ನಟ

  ಟೀಕೆಗಳನ್ನು ಸ್ವೀಕರಿಸುತ್ತೇನೆ

  ಟೀಕೆಗಳನ್ನು ಸ್ವೀಕರಿಸುತ್ತೇನೆ

  ಗೌರಿ ಲಂಕೇಶ್, ಕಲಬುರ್ಗಿ ರೀತಿಯ ಹತ್ಯೆಗಳ ಬಗ್ಗೆ ಪ್ರಧಾನ ಮಂತ್ರಿ ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ. ಒಬ್ಬ ಪ್ರಜೆಯಾಗಿ ಇದನ್ನು ಪ್ರಶ್ನೆ ಮಾಡುವ ಹಕ್ಕು ನನಗೆ ಇದೆ. ಜೊತೆಗೆ ನನ್ನ ಈ ಹೇಳಿಕೆ ಬಗ್ಗೆ ಬರುವ ಅನೇಕ ಟೀಕೆಗಳನ್ನು ನಾನು ಸ್ವೀಕರಿಸುತ್ತೇನೆ'' - ಪ್ರಕಾಶ್ ರೈ, ನಟ

  ಪ್ರಕಾಶ್ ರೈ ಬಗ್ಗೆ ಗೊಂದಲ ಸೃಷ್ಟಿಸಿದ ರಾಷ್ಟ್ರೀಯ ಸುದ್ದಿವಾಹಿನಿಗಳು.!

  ಫಟನೆಯ ಬಗ್ಗೆ

  ಫಟನೆಯ ಬಗ್ಗೆ

  ಗೌರಿ ಲಂಕೇಶ್ ಹತ್ಯೆಯ ವಿರುದ್ಧ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ''ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ನಟನೆ ನೋಡಿ ನನ್ನ 5 ರಾಷ್ಟ್ರ ಪ್ರಶಸ್ತಿಗಳನ್ನು ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು'' ಎಂದು ಹೇಳಿದ್ದರು. ಜೊತೆಗೆ ಪ್ರಧಾನಿ ಮೋದಿ ಅವರ ಮೌನದ ಬಗ್ಗೆ ಪ್ರಶ್ನಿಸಿದ್ದರು. ಪ್ರಕಾಶ್ ರೈ ಅವರ ಈ ಹೇಳಿಕೆಗೆ ದೊಡ್ಡ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ಬಗ್ಗೆ ಅವರ ಸ್ಪಷ್ಟನೆಯನ್ನು ನೀಡಿದರು.

  English summary
  Actor Prakash Rai has taken his twitter account to clarify the controversy surrounding the return of National Awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X