For Quick Alerts
  ALLOW NOTIFICATIONS  
  For Daily Alerts

  'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ

  By Pavithra
  |
  ಇರಲಾರ್ದೆ ಇರುವೆ ಬಿಟ್ಕೊಳ್ತಾರೆ ಪ್ರಕಾಶ್ ರೈ | Filmibeat Kannada

  ಕರ್ನಾಟಕದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹೆಸರು ಕೇಳಿದರೆ ಸಾಕು ಜನರು ಕೆಂಡ ಮಂಡಲವಾಗುತ್ತಿದ್ದಾರೆ. ಇನ್ನು ಕೆಲವರು ನಮಗ್ಯಾಕೆ ಅವರ ವಿಚಾರ ಅಂತ ಸುಮ್ಮನೆ ಸೈಲೆಂಟ್ ಆಗಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ರಜನಿಕಾಂತ್ .

  ಹೌದು ರಜನಿಕಾಂತ್ ಕನ್ನಡದವರಾಗಿದ್ದುಕೊಂಡು ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಪರವಾಗಿ ಮಾತನಾಡುತ್ತಿದ್ದಾರೆ ಎನ್ನುವ ಕೋಪ ರಾಜ್ಯದ ಜನತೆಗೆ. ಇದೇ ಉದ್ದೇಶದಿಂದ ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೋರಾಟಗಾರರು ನಿರ್ಧರಿಸಿದ್ದಾರೆ.

  "ಕಾಲಾ" ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ

  ಆದರೆ ಇತ್ತ ನಟ ಪ್ರಕಾಶ್ ರಾಜ್ ಕಾಲಾ ಸಿನಿಮಾ ಪರವಾಗಿ ಮಾತನಾಡಿದ್ದಾರೆ. ಕಾಲಾ ಸಿನಿಮಾಗೂ ಕಾವೇರಿ ವಿಚಾರಕ್ಕೂ ಯಾವ ಸಂಬಂದ ಎಂದು ಜಸ್ಟ್ ಆಸ್ಕಿಂಗ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಪ್ರಕಾಶ್ ರೈ ಕಾಲಾ ಚಿತ್ರದ ಬಗ್ಗೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಕಾವೇರಿಗೂ ಕಾಲನಿಗೂ ಯಾವ ರೀತಿಯ ಸಂಬಂಧ

  ಕಾವೇರಿಗೂ ಕಾಲನಿಗೂ ಯಾವ ರೀತಿಯ ಸಂಬಂಧ

  ನಟನೊಬ್ಬನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ನಿರ್ಮಾಪಕನ ಬಂಡವಾಳ ಗತಿ ಏನಾಗಬೇಕು? ನೂರಾರು ತಂತ್ರಜ್ಞರ ಸಹಕಲಾವಿದರ ಸಾವಿರಾರು ಕಾರ್ಮಿಕರ ದುಡಿಮೆಯ ಪ್ರತಿಭೆಯ ಪ್ರತಿಫಲ, ಪೋಸ್ಟರ್ ನಟಿಸುವವರಿಂದ ಹಿಡಿದು ಸೈಕಲ್ ಸ್ಟ್ಯಾಂಡ್ ನಡೆಸುವ ಕ್ಯಾಂಟೀನ್ ನಡೆಸುವ ಮಂದಿಯ ಪರಿಸ್ಥಿತಿ ಏನು? ಹಣ ಹೂಡಿದ ಹಂಚಿಕೆದಾರ, ಥಿಯೇಟರ್ ಮಾಲೀಕರ ಅವರನ್ನು ಅವಲಂಬಿಸಿದ ನೌಕರ ಗತಿ ಏನಾಗಬೇಕು?

  ಚಿತ್ರದ ಪ್ರದರ್ಶನವನ್ನು ತಡೆಯುವುದು ಏಕೆ?

  ಚಿತ್ರದ ಪ್ರದರ್ಶನವನ್ನು ತಡೆಯುವುದು ಏಕೆ?

  ಈಗ ಕಾಲ ಎನ್ನುವ ಚಿತ್ರದ ಪ್ರದರ್ಶನವನ್ನು ತಡೆಯುವುದರಿಂದ ನಾವು ಸಾಧಿಸುವುದು ಏನನ್ನು ಎಂದು ಒಮ್ಮೆ ಯೋಚಿಸೋಣ ರಜನಿಕಾಂತ್ ಎನ್ನುವ ನಟ ನಟರ ಹೇಳಿಕೆಯಿಂದಾಗಿ ನಮಗೆ ಬೇಸರ ಆಗಿರುವುದು ನಿಜ ತಮ್ಮ ಬೇಸರವನ್ನು ವಿರೋಧವನ್ನು ವ್ಯಕ್ತಪಡಿಸಲು ಕರ್ನಾಟಕದಲ್ಲಿ ಅವರ ಚಿತ್ರ ಬಹಿಷ್ಕರಿಸಬೇಕು ಎಂದು ಕೆಲವರು ನಿರ್ಧರಿಸಿದ್ದಾರೆ ಇದು ಸಮಸ್ತ ಕನ್ನಡಿಗರ ಆಶಯವೇ ಗೊತ್ತಿಲ್ಲ?

  ಸೌಹಾರ್ದತೆ ಹಾಳಾಗುತ್ತದೆ

  ಸೌಹಾರ್ದತೆ ಹಾಳಾಗುತ್ತದೆ

  ಈ ಕೃತ್ಯಗಳಿಂದ ಅತ್ತ ತಮಿಳುನಾಡಿನ ಇತ್ತ ಕರ್ನಾಟಕದ ಜನರ ಮನಸ್ಸಿನಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಬೆಳೆಸಿಕೊಳ್ಳುತ್ತಾ ಹೋಗುತ್ತದೆ. ಹದಗೆಡುವುದು ಸಮಾಜದಲ್ಲಿನ ಸೌಹಾರ್ದತೆಗೆ ಏನು ಬೆಲೆ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕೊಡದೆ ನಮ್ಮ ಭಾವುಕತೆಯನ್ನು ದುರುಪಯೋಗಪಡಿಸಿಕೊಂಡ ಎರಡೂ ರಾಜ್ಯದ ಚಳವಳಿಗಾರರು ಎಲ್ಲಿ ಹೋಗುತ್ತಾರೆ. ಯಾವುದೇ ಪರಿಹಾರವನ್ನು ನೀಡದೆ ಮುಂದೊಂದು ದಿನ ಇಂಥದ್ದೇ ಮತ್ತೊಂದು ಅವಕಾಶಕ್ಕೆ ಕಾಯುತ್ತಿದ್ದಾರೆ ಅಷ್ಟೇ ಕೊನೆಗೂ ಹೊಡೆತ ಬಿಡುವುದು ಜನಸಾಮಾನ್ಯರಾದ ನಮಗೆ ಮಾತ್ರ.

  ಕನ್ನಡ ದ್ರೋಹಿ ಪಟ್ಟ ಕಟ್ಟಿದರೂ ಬೇಸರವಿಲ್ಲ

  ಕನ್ನಡ ದ್ರೋಹಿ ಪಟ್ಟ ಕಟ್ಟಿದರೂ ಬೇಸರವಿಲ್ಲ

  ಇವು ನನ್ನ ಅಂತಃಕರಣದ ಪ್ರಶ್ನೆಗಳು ಈ ಪ್ರಶ್ನೆಗಳಿಗಾಗಿ ನನ್ನನ್ನು ಕೆಲವರು ಕನ್ನಡ ದ್ರೋಹಿ ಎಂದು ಇಂದು ಪಟ್ಟ ಕಟ್ಟಿದರೂ ಆಶ್ಚರ್ಯ ಪಡಬೇಕಾಗಿಲ್ಲ ಇತ್ತೀಚೆಗೆ ನಾನು ಪ್ರಶ್ನಿಸಿದ್ದಕ್ಕೆ ಹಿಂದೂ ದ್ರೋಹಿ ದೇಶದ್ರೋಹಿ ಎಂದು ಪಟ್ಟ ಕಟ್ಟಿದವರನ್ನು ಕಂಡಿದ್ದೇನೆ ಆದರೆ ಹೇಳಬೇಕಾದ್ದನ್ನು ಹೇಳಿಯೇ ತೀರಬೇಕು ಉಳಿದಿದ್ದನ್ನು ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ. ಹೀಗೆ ಕಾಲಾ ಸಿನಿಮಾ ಬಗ್ಗೆ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

  English summary
  Actor Prakash rai has spoken on behalf of Kaala Tamil movie. Prakash Rai update his twitter status about cauvery and Kaala issues

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X