»   » ನಟ-ನಟಿಯರು ರಾಜಕೀಯ ಪ್ರವೇಶ ಮಾಡೋದು ದುರಂತ ಎಂದ ಪ್ರಕಾಶ್ ರೈ

ನಟ-ನಟಿಯರು ರಾಜಕೀಯ ಪ್ರವೇಶ ಮಾಡೋದು ದುರಂತ ಎಂದ ಪ್ರಕಾಶ್ ರೈ

Posted By:
Subscribe to Filmibeat Kannada

ಅದ್ಯಾಕೋ ಗೊತ್ತಿಲ್ಲ..... ಇವರು ಬಾಯಿ ಬಿಟ್ಟರೆ ವಿವಾದ ಶುರುವಾಗುತ್ತೆ. ಸ್ವತಂತ್ರವಾಗಿ ತಮ್ಮ ಅಭಿಪ್ರಾಯ ಹೇಳಿದ್ರೆ, ಅದಕ್ಕೆ ರೆಕ್ಕೆ-ಪುಕ್ಕ ಹುಟ್ಟಿಕೊಂಡು ಊರೆಲ್ಲ ಹಾರಾಡುತ್ತೆ. ಅಷ್ಟಕ್ಕೂ, ನಾವು ಹೇಳುತ್ತಿರುವುದು ನಟ, ನಿರ್ಮಾಪಕ ಪ್ರಕಾಶ್ ರೈ ಬಗ್ಗೆ. ಇವರು ಏನೇ ಮಾತನಾಡಿದರೂ, ಅದು ವಿವಾದಕ್ಕೆ ನಾಂದಿ ಹಾಡುತ್ತೆ.

ಇದನ್ನೆಲ್ಲ ಗಮನಿಸಿರುವ ಪ್ರಕಾಶ್ ರೈ, ''ಮಾತನಾಡಿದನ್ನೆಲ್ಲಾ ಸುಮ್ಮನೆ ವಿವಾದ ಮಾಡಬೇಡಿ, ನಾನೇ ಎಲ್ಲಾ ವಿಚಾರಗಳಿಗೂ ಅಂತ್ಯ ಹಾಡುತ್ತೇನೆ'' ಎಂದು ಇಂದು ಮಾಧ್ಯಮಗಳ ಮುಂದೆ ಪ್ರಕಾಶ್ ಹೇಳಿದ್ದಾರೆ.

ನಟರು 'ರಾಜಕೀಯ'ಕ್ಕೆ ಬರಬಾರರು

ಇತ್ತೀಚಿನ ಬೆಳವಣಿಗೆಯನ್ನ ಗಮನಿಸಿರುವ ಪ್ರಕಾಶ್ ರೈ ಚಿತ್ರ ನಟ-ನಟಿಯರು ರಾಜಕೀಯ ಪ್ರವೇಶ ಮಾಡೋದು ದುರಂತ ಎಂದಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಹಾಗೂ ಉಪೇಂದ್ರ ಅವರ ನಡೆಯನ್ನ ಪ್ರಶ್ನೆ ಮಾಡಿದ್ದಾರೆ.

ರಾಜಕೀಯಕ್ಕೆ ಬದ್ದತೆ ಬೇಕು

''ಪ್ರಸಿದ್ಧಿ ಪಡೆಯಬಹುದು ಎಂದ ಮಾತ್ರಕ್ಕೆ ರಾಜಕೀಯ ಪ್ರವೇಶ ಮಾಡೋದು ತಪ್ಪು. ನಾನು ಯಾವುದೇ ರಾಜಕೀಯ ಅಜೆಂಡಾ ಇಟ್ಟುಕೊಂಡು ಮಾತನಾಡುತ್ತಿಲ್ಲ. ರಾಜಕೀಯ ಮಾಡೋದಕ್ಕೆ ಬದ್ದತೆ ಇರಬೇಕು'' ಎಂದಿದ್ದಾರೆ ನಟ ಪ್ರಕಾಶ್ ರೈ.

ರಾಜಕೀಯಕ್ಕೆ ಬರೋದು ಅಜೆಂಡಾ ಅಲ್ಲ

ಪ್ರಕಾಶ್ ರೈ ಅವ್ರ ಮಾತಿನಿಂದ ಸಾಕಷ್ಟು ಜನ ಪ್ರಕಾಶ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ದತೆ ಮಾಡಿಕೊಳ್ತಿದ್ದಾರೆ ಅನ್ನೋ ಮಾತುಗಳನ್ನಾಡಿದ್ರು, ಆದ್ರೆ ರೈ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಸಮಾಜದ ಬಗ್ಗೆ ಚಿಂತಿಸುವ ಸಮಯ

ಚಿತ್ರರಂಗದಿಂದ ಸಾಕಷ್ಟು ಗಳಿಸಿರುವ ಪ್ರಕಾಶ್ ರೈ ಸಮಾಜದ ಒಳಿತಿಗಾಗಿ ಚಿಂತಿಸೋದಕ್ಕೆ ಪ್ರಾರಂಭ ಮಾಡಿದ್ದಾರಂತೆ. ಸದ್ಯ ಗಳಿಸಿರೋದರ ಮೇಲೆ ಯಾವುದೇ ವ್ಯಾಮೋಹ ಇಲ್ಲ ನನಗೆ ಎಂದಿದ್ದಾರೆ.

'ಕರಕುಶಲ'ಕರ್ಮಿಗಳಿಗೆ ಹೊರೆ

ಜಿ.ಎಸ್.ಟಿ' ಬಗ್ಗೆ ತಮ್ಮ ಅಭಿಪ್ರಾಯ ಹೇಳಿರುವ ಪ್ರಕಾಶ್ ರೈ ಕೇಂದ್ರ ಸರ್ಕಾರದ ವಿರುದ್ಧ ಕೊಟ್ಟ ಹೇಳಿಕೆ ಅಲ್ಲ.. ಜಿ.ಎಸ್.ಟಿ ಹೊರೆ ನನ್ನ ಮೇಲೆ ಬಿದ್ದಿದೆ ಎಂಬ ಕಾರಣಕ್ಕೆ ಕೊಟ್ಟ ಹೇಳಿಕೆಯೂ ಅಲ್ಲ.. ಕರಕುಶಲ ಉದ್ಯಮದ ಮೇಲೆ ಹೊರೆಯಾಗುತ್ತಿದೆ ಎಂಬುದು ನನ್ನ ಅಭಿಪ್ರಾಯ. ಕಂಬಾರ, ಜೇನು ಕುರುಬ ಇವರನ್ನೂ ಜಿ.ಎಸ್.ಟಿ ಒಳಗೆ ತರುವುದು ಅವರಿಗೆ ಹೊರೆಯಾಗುತ್ತೆ ಎಂದಿದ್ದಾರೆ.

ಯಾರ ಮೇಲೂ ಯಾವುದು ಹೊರೆ ಆಗಬಾರದು

''ಸುಮ್ಮನೆ ಕೂರುವುದು ಸತ್ತಂತೆ.. ನನಗೆ ಆಸ್ತಿ ಮನೆ ಎಲ್ಲವೂ ಆಯ್ತು, ಜೀವನಪೂರ್ತಿ ಕೂತು ತಿನ್ನುವಷ್ಟು ಮಾಡಿದ್ದೀನಿ.. ಈಗ ಸಮಾಜಕ್ಕೆ ಏನಾದರೂ ಮರಳಿ ಕೊಡುವ ಸಮಯ ಬಂದಿದೆ.. ತೇಜಸ್ವಿ, ಲಂಕೇಶ್ ಅವರೂ ಕೂಡ ಸುಮ್ಮನೆ ಕೂರಲಿಲ್ಲ.. ನಾನು ಸುಮ್ಮನೆ ಕೂರುವುದಿಲ್ಲ. ಮಾತೃಭಾಷೆ ಎಲ್ಲರಿಗೂ ಮುಖ್ಯ.. ಆದ್ರೆ ಅದನ್ನ ಬೇರೆಯವರ ಮೇಲೆ ಹೇರಬಾರದು.. ನನಗೆ ನನ್ನ ಕನ್ನಡ ಭಾಷೆ ಚೆನ್ನಾಗಿ ಗೊತ್ತಿರುವುದರಿಂದ, ಬೇರೆ ಭಾಷೆಯನ್ನ ಗೌರವಿಸುತ್ತೇನೆ'' - ಪ್ರಕಾಶ್ ರೈ ನಟ

English summary
Kannada Actor Prakash Rai expressed his displeasure about Stars entering Politics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X