»   » 'ಕತ್ರಿಗುಪ್ಪೆ ಕಟಿಂಗ್ ಶಾಪ್'ನಲ್ಲಿ ನಟ ಪ್ರಕಾಶ್ ರೈಗೆ ಏನು ಕೆಲಸ.?

'ಕತ್ರಿಗುಪ್ಪೆ ಕಟಿಂಗ್ ಶಾಪ್'ನಲ್ಲಿ ನಟ ಪ್ರಕಾಶ್ ರೈಗೆ ಏನು ಕೆಲಸ.?

Posted By:
Subscribe to Filmibeat Kannada

ಹುಟ್ಟಿ ಬೆಳೆದದ್ದೆಲ್ಲ ಕರ್ನಾಟಕದಲ್ಲಿ ಆದರೂ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಸೆಟಲ್ ಆಗಿರುವುದು ಪರರಾಜ್ಯದಲ್ಲಿ.! ಹೀಗಿರುವಾಗ, ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಇರುವ ಕಟಿಂಗ್ ಶಾಪ್ ನಲ್ಲಿ ನಟ ಪ್ರಕಾಶ್ ರೈ ರವರು ಏನು ಮಾಡುತ್ತಿರಬಹುದು ಎಂಬ ಕುತೂಹಲ ಶೀರ್ಷಿಕೆ ನೋಡಿದ ತಕ್ಷಣ ನಿಮಗೆ ಕಾಡಬಹುದು.

'ಕತ್ರಿಗುಪ್ಪೆ ಕಟಿಂಗ್ ಶಾಪ್'ಗೂ.. ಎಂ.ಜಿ.ರೋಡ್ ನಲ್ಲಿ ಇರುವ ಅಡಿಡಾಸ್ ಶೋ ರೂಮ್ ಗೂ.. ನಟ ಪ್ರಕಾಶ್ ರೈ ರವರಿಗೂ ಒಂದು ಸಂಬಂಧ ಇದೆ. ಅದೇನು ಅಂತ ಡೀಟೇಲ್ ಆಗಿ ಹೇಳ್ತೀವಿ.... ಮುಂದೆ ಓದಿ....

ಪ್ರಕಾಶ್ ರೈ ರವರ ಮುಂದಿನ ಸಿನಿಮಾ.!

ಪ್ರಕಾಶ್ ರೈ ರವರ ಮುಂದಿನ ಸಿನಿಮಾದ ಹೆಸರೇ 'ಕತ್ರಿಗುಪ್ಪೆ ಕಟಿಂಗ್ ಶಾಪ್'. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಏಕಕಾಲಕ್ಕೆ ತಯಾರಾಗಲಿದೆ.[ಪ್ರಕಾಶ್ ರೈ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ..]

ನೈಜ ಘಟನೆ ಆಧಾರಿತ ಚಿತ್ರ

ಕತ್ರಿಗುಪ್ಪೆಯ ಕಟ್ಟಿಂಗ್ ಶಾಪ್ ಒಂದರಲ್ಲಿ ನಡೆದ ನೈಜ ಘಟನೆಯೊಂದನ್ನಿಟ್ಟುಕೊಂಡು 'ಕತ್ರಿಗುಪ್ಪೆ ಕಟಿಂಗ್ ಶಾಪ್' ಚಿತ್ರಕಥೆ ಹೆಣೆಯಲಾಗಿದೆ. ಹೀಗಾಗಿ ಅದೇ ಶೀರ್ಷಿಕೆ ಇಡಲಾಗಿದೆ.[ಪ್ರಕಾಶ್ ರೈ 2ನೇ ಲವ್ ಸ್ಟೋರಿ ಬಿಚ್ಚಿಟ್ಟ ಪೋನಿ ವರ್ಮಾ]

ನೈಜ ಕಥೆ ಕುರಿತು

ಎಂ.ಜಿ.ರೋಡ್ ನಲ್ಲಿ ಅಡಿಡಾಸ್ ಶೋ ರೂಮ್ ಹೊಂದಿದ್ದ ಕೇರಳ ಮೂಲಕ ಶ್ರೀಮಂತ ಕ್ರಿಶ್ಚಿಯನ್ ಒಬ್ಬರ ಮಗಳು ಕತ್ರಿಗುಪ್ಪೆಯಲ್ಲಿದ್ದ ಕಟಿಂಗ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನ ಪ್ರೀತಿಸುತ್ತಿದ್ದಳಂತೆ. ಆ ಲವ್ ಸ್ಟೋರಿ... ಮತ್ತದರ ರೌಡಿಸಂ ಹಿನ್ನಲೆಯೇ 'ಕತ್ರಿಗುಪ್ಪೆ ಕಟಿಂಗ್ ಶಾಪ್' ಚಿತ್ರದ ಕಥಾಹಂದರ.

ಶೋ ರೂಮ್ ಓನರ್ ಪಾತ್ರದಲ್ಲಿ ಪ್ರಕಾಶ್ ರೈ

ಅಡಿಡಾಸ್ ಶೋ ರೂಮ್ ಓನರ್ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ತೆಲುಗಿನ ಖ್ಯಾತ ನಟ ಜಗಪತಿ ಬಾಬು, ಚರಣ್ ರಾಜ್, ಕರಿಸುಬ್ಬು, ಪದ್ಮಜಾ ರಾವ್ ಸಟಿಸಲಿದ್ದಾರೆ.

ಸಿನಿಮಾದಲ್ಲಿ ಮಾಜಿ ಡಾನ್.?

ರೌಡಿಸಂ ಬ್ಯಾಕ್ ಡ್ರಾಪ್ ಇರುವ ಈ ಚಿತ್ರದಲ್ಲಿ ಬೆಂಗಳೂರಿನ ಮಾಜಿ ಡಾನ್ ಗಳು ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಹೀರೋ, ಹೀರೋಯಿನ್ ಯಾರು.?

'ಕತ್ರಿಗುಪ್ಪೆ ಕಟಿಂಗ್ ಶಾಪ್' ಚಿತ್ರಕ್ಕಿನ್ನೂ ಹೀರೋ ಆಯ್ಕೆ ನಡೆದಿಲ್ಲ. ಶಿವಮೊಗ್ಗ ಮೂಲದ ಕ್ಯಾಥರಿನ್ ಎಂಬ ಯುವತಿಯನ್ನ ಹೀರೋಯಿನ್ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಈ ಚಿತ್ರಕ್ಕೆ ಪ್ರಖ್ಯಾತ್ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ.

English summary
Multi-lingual Actor Prakash Rai starrer next movie titled as 'Katriguppe Cutting Shop'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada