»   » ದರ್ಶನ್ ಚಿತ್ರದಲ್ಲಿ ಪ್ರಕಾಶ್ ರೈಗೆ ಚಾಲೆಂಜಿಂಗ್ ಪಾತ್ರ

ದರ್ಶನ್ ಚಿತ್ರದಲ್ಲಿ ಪ್ರಕಾಶ್ ರೈಗೆ ಚಾಲೆಂಜಿಂಗ್ ಪಾತ್ರ

Posted By:
Subscribe to Filmibeat Kannada

ತೆಲುಗು, ತಮಿಳು ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ ಕನ್ನಡದ ಪ್ರತಿಭೆ ಪ್ರಕಾಶ್ ರೈ. ಪರಭಾಷಾ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ಪ್ರಕಾಶ್ ರೈ ಇದೀಗ ಕನ್ನಡದಲ್ಲಿ ಖಳನಟನಾಗಿ ತಮ್ಮ ಪ್ರತಿಭೆ ಪ್ರದರ್ಶಿಸಲು ಹೊರಟಿದ್ದಾರೆ. ಅವರು ನಟಿಸಿ, ನಿರ್ದೇಶಿಸಿದ ತ್ರಿಭಾಷಾ ಚಿತ್ರ 'ಒಗ್ಗರಣೆ' ಘಮಲು ಮೂರು ರಾಜ್ಯದ ಅಭಿಮಾನಿಗಳ ಮನಸ್ಸನ್ನು ಪುಳಕಗೊಳಿಸಿದೆ.

ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಐರಾವತ' ಚಿತ್ರದಲ್ಲಿ ಖಳನಟನಾಗಿ ಕಾಣಿಸಲಿದ್ದಾರೆ ಪ್ರಕಾಶ್ ರೈ. ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಚಿತ್ರ ಇದು. [ಒಗ್ಗರಣೆ ಚಿತ್ರ ವಿಮರ್ಶೆ]

Prakash Raj

'ಅಂಬಾರಿ', 'ಅದ್ದೂರಿ' ಚಿತ್ರಗಳ ಬಳಿಕ ಎಪಿ ಅರ್ಜುನ್ ಅವರ ಮತ್ತೊಂದು ಭರ್ಜರಿ ಆಕ್ಷನ್ ಧಮಾಕಾ ಎನ್ನಬಹುದು. ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪ್ರಕಾಶ್ ರೈ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ದರ್ಶನ್ ಅವರು 'ಅಂಬರೀಶ' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಅದಾದ ಕೂಡಲೆ ಅವರು 'ಐರಾವತ'ಏರಲಿದ್ದಾರೆ. ದರ್ಶನ್ ಅವರ ಮೂವತ್ತೇಳನೇ ಹುಟ್ಟುಹಬ್ಬದ (ಫೆಬ್ರವರಿ 16) ದಿನ 'ಐರಾವತ' ಚಿತ್ರ ಸೆಟ್ಟೇರಿದೆ. 'ಇಟ್ಸ್ ಎ ಬ್ರಾಂಡ್' ಎಂಬ ಟ್ಯಾಗ್ ಲೈನ್ ಇದಕ್ಕಿದೆ.

ದರ್ಶನ್ ಅವರ ಪ್ರಿನ್ಸ್ ಚಿತ್ರ ನಿರ್ಮಿಸಿ ಕೈಸುಟ್ಟಿಕೊಂಡಿದ್ದ ಸಂದೇಶ್ ನಾಗರಾಜ್ ಅವರು ಮತ್ತೊಮ್ಮೆ ದರ್ಶನ್ ಮೇಲೆ ನಂಬಿಕೆಯಿಟ್ಟು ಹಣ ಸುರಿಯುತ್ತಿದ್ದಾರೆ. ಅದ್ದೂರಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದರೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಎಂಬ ಮಾತುಗಳು ಕೇಳಿಬರುತ್ತಿವೆ.

ಎಪಿ ಅರ್ಜುನ್ ಮೇಲಿನ ಇಟ್ಟಿರುವ ಅಪಾರ ವಿಶ್ವಾಸವೇ ದರ್ಶನ್ ಈ ಚಿತ್ರದಲ್ಲಿ ಅಭಿನಯಿಸಲು ಕಾರಣ. ಇನ್ನೂ ವಯಸ್ಸಿನಲ್ಲಿ ಅರ್ಜುನ್ ಚಿಕ್ಕವರು. ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಚಿತ್ರ ಮಾಡಕ್ಕೆ ಬರಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡಿದ್ದವು. ಆದರೆ ದರ್ಶನ್ ಮಾತ್ರ ಅವರ ವಯಸ್ಸನ್ನು ಗಮನಿಸದೆ ಟ್ಯಾಲೆಂಟ್ ಗಮನಿಸಿ ಐರಾವತ ಏರುತ್ತಿದ್ದಾರೆ. (ಏಜೆನ್ಸೀಸ್)

English summary
After trilingual 'Oggarane' movie actor Prakash Raj to play a negative role in Challenging Star Darshan's upcoming movie Airavatha. The shooting for 'Airavatha' is likely to start in the month of July.
Please Wait while comments are loading...