For Quick Alerts
  ALLOW NOTIFICATIONS  
  For Daily Alerts

  ಬಡವರ ಬಗ್ಗೆ ಪ್ರಕಾಶ್ ರೈ ಹೊಂದಿರುವ ಕಾಳಜಿಗೆ ಇಲ್ಲಿದೆ ಮತ್ತೊಂದು ಉದಾಹರಣೆ

  |

  ನಟ ಪ್ರಕಾಶ್ ರೈ ಅವರ ರಾಜಕೀಯ ಆಲೋಚನೆಗಳಿಗೆ ಅವರೊಂದಿಗೆ ಭಿನ್ನಾಭಿಪ್ರಾಯವಿಟ್ಟುಕೊಳ್ಳಬಹುದೇ ವಿನಃ ಅವರ ಅದ್ಭುತ ನಟನೆ ಮತ್ತು ಸಮಾಜದ ಬಗ್ಗೆ, ಬಡ ಜನರ ಬಗ್ಗೆ ಇರುವ ಕಾಳಜಿಯನ್ನು ಅನುಮಾನಿಸುವಂತಿಲ್ಲ.

  ಜನಪ್ರಿಯ ನಟರಾಗಿರುವ ಪ್ರಕಾಶ್ ರೈ ತಮ್ಮನ್ನು ಸಮಾಜ ಸೇವೆಗೆ ಸದಾ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ಅಗತ್ಯ ಸೇವೆಗಳನ್ನು ಮಾಡಿರುವ ಪ್ರಕಾಶ್ ರೈ ಇದೀಗ ಬಡ ಕುಟುಂಬವೊಂದಕ್ಕೆ ದೊಡ್ಡ ಮಟ್ಟದ ಸಹಾಯವನ್ನೇ ಮಾಡಿದ್ದಾರೆ.

  ಬಡ ಕುಟುಂಬವೊಂದಕ್ಕೆ ಹೊಸ ಜೆಸಿಬಿ ವಾಹವನ್ನು ಪ್ರಕಾಶ್ ರೈ ಉಚಿತವಾಗಿ ನೀಡಿದ್ದಾರೆ. ಜೆಸಿಬಿ ವಾಹವನ್ನು ಬಳಸಿ ದುಡಿದು ಜೀವನ ನಡೆಸಲು ದಾರಿಯೊಂದನ್ನು ಪ್ರಕಾಶ್ ರೈ ಮಾಡಿಕೊಟ್ಟಿದ್ದಾರೆ.

  ಬಡ ಕುಟುಂಬಕ್ಕೆ ಜೆಸಿಬಿ ನೀಡಿದ್ದಾರೆ

  ಬಡ ಕುಟುಂಬಕ್ಕೆ ಜೆಸಿಬಿ ನೀಡಿದ್ದಾರೆ

  ಮೈಸೂರಿನ, ಶ್ರೀರಂಗಪಟ್ಟಣದ ಬಡ ಕುಟುಂಬಕ್ಕೆ ಜೆಸಿಬಿ ನೀಡಿದ್ದಾರೆ. ಜೆಸಿಬಿ ಹಸ್ತಾಂತರ ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪ್ರಕಾಶ್ ರೈ. ''ಜೆಸಿಬಿ ನೀಡುವ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಸಬಲ ಮಾಡುವ ಯತ್ನ. ಮೈಸೂರಿನ, ಶ್ರೀರಂಗಪಟ್ಟಣದ ಬಳಿಕ ಕುಟುಂಬಕ್ಕೆ ಜೆಸಿಬಿಯನ್ನು ಪ್ರಕಾಶ್‌ರಾಜ್ ಫೌಂಡೇಶನ್ ಮೂಲಕ ನೀಡಲಾಯಿತು. ಗಳಿಸಿದ್ದನ್ನು ಮರಳಿ ನೀಡುವ ಖುಷಿ'' ಎಂದಿದ್ದಾರೆ ಪ್ರಕಾಶ್ ರೈ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

  ಹಳ್ಳಿ ದತ್ತು ಪಡೆದಿರುವ ಪ್ರಕಾಶ್ ರಾಜ್

  ಹಳ್ಳಿ ದತ್ತು ಪಡೆದಿರುವ ಪ್ರಕಾಶ್ ರಾಜ್

  ಪ್ರಕಾಶ್ ರೈ ತಮ್ಮ ಪ್ರಕಾಶ್‌ರಾಜ್ ಫೌಂಡೇಶನ್ ಮೂಲಕ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ, ಮಾಡುತ್ತಲಿದ್ದಾರೆ. ಈ ಹಿಂದೆ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಜನರ ಜೀವನಾಭಿವೃದ್ಧಿಗೆ ಶ್ರಮಿಸಿದ್ದರು. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯಲ್ಲಿ ಹಳ್ಳಿಯೊಂದನ್ನು ದತ್ತು ಪಡೆದಿದ್ದರು ಪ್ರಕಾಶ್ ರೈ.

  ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಪ್ರಕಾಶ್ ರೈ

  ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಪ್ರಕಾಶ್ ರೈ

  ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಶ್ ರೈ, ಇದೀಗ ತೆಲುಗು ಚಿತ್ರರಂಗದ ಪ್ರತಿಷ್ಠಿತ ಎಂಎಎ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಎಂಎಎಯ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ ಸ್ಪರ್ಧಿಸುತ್ತಿದ್ದು, ಪ್ರಕಾಶ್ ರೈಗೆ ನಟ ಚಿರಂಜೀವಿ ಮತ್ತು ಮೆಗಾಸ್ಟಾರ್ ಕುಟುಂಬದ ಬೆಂಬಲ ದೊರಕಿದೆ. ಪ್ರಕಾಶ್ ರೈ ಎದುರಾಗಿ ಮಂಚು ವಿಷ್ಣು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಮಂಚು ವಿಷ್ಣುಗೆ ಬಾಲಕೃಷ್ಣ ಬೆಂಬಲ ದೊರಕುವ ಸಾಧ್ಯತೆ ಇದೆ. ಮಂಚು ವಿಷ್ಣು, ತೆಲುಗಿನ ಹಿರಿಯ ನಟ, ನಿರ್ಮಾಪಕ ಮೋಹನ್‌ಬಾಬು ಪುತ್ರ.

  ಪ್ರಕಾಶ್ ರೈ ಬಳಗದಲ್ಲಿ ಯಾರ್ಯಾರಿದ್ದಾರೆ?

  ಪ್ರಕಾಶ್ ರೈ ಬಳಗದಲ್ಲಿ ಯಾರ್ಯಾರಿದ್ದಾರೆ?

  ಚುನಾವಣೆ ಬಹಳ ರಂಗೇರಿದ್ದು, ಸಿಂಡಿಕೇಟ್ ಮಾದರಿಯಲ್ಲಿ ನಡೆಯುವ ಈ ಚುನಾವಣೆಯಲ್ಲಿ ಎರಡು ಬಣಗಳು ಪರಸ್ಪರ ಎದುರು ಬದುರು ಸ್ಪರ್ಧಿಸಲಿವೆ. ಪ್ರಕಾಶ್ ರೈ ಬಣದಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ರೈ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನಕ್ಕೆ ಮೇಕಾ ಶ್ರೀಕಾಂತ್, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾ ಮತ್ತು ಬ್ಯಾನರ್ಜಿ, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಜೀವಿತಾ ರಾಜಶೇಖರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಉತ್ತೇಜ್, ಅನಿತಾ ಚೌಧರಿ, ಖಜಾಂಚಿ ಸ್ಥಾನಕ್ಕೆ ನಾಗಿನೇಡು ಸ್ಪರ್ಧಿಸುತ್ತಿದ್ದಾರೆ. ಸಮಿತಿ ಸದಸ್ಯರ ಸ್ಥಾನಕ್ಕೆ, ಅನುಸೂಯಾ, ಅಜಯ್, ಭೂಪಾಲ್, ಬ್ರಹ್ಮಾಜಿ, ಈಟಿವಿ ಪ್ರಭಾಕರ್, ಗೋವಿಂದ ರಾವ್, ಖಾಯುಮ್, ಕೌಶಿಕ್, ಪ್ರಗತಿ, ರಮಣ ರೆಡ್ಡಿ, ಶ್ರೀಧರ್ ರಾವ್, ಶಿವಾ ರೆಡ್ಡಿ, ಸುಡಿಗಾಲಿ ಸುಧೀರ್, ಡಿ ಸುಬ್ಬರಾಜು, ಸುರೇಶ್ ಕೊಂಡೇಟಿ, ತನಿಶ್ ಮತ್ತು ತರ್ಜಾನ್ ಅವರುಗಳು ಸ್ಪರ್ಧಿಸುತ್ತಿದ್ದಾರೆ.

  English summary
  Prakash Raj gifted a JCB vehicle to a poor family. Prakash Raj shared picture and said empowering a family with a JCB near Srirangapattana Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X