»   » ಇಪ್ಪತ್ತಾರು ಸ್ಪೆಷಲ್ ಕಳ್ಳರ ಬೆನ್ನಟ್ಟಲಿರುವ ಪ್ರಕಾಶ್ ರೈ

ಇಪ್ಪತ್ತಾರು ಸ್ಪೆಷಲ್ ಕಳ್ಳರ ಬೆನ್ನಟ್ಟಲಿರುವ ಪ್ರಕಾಶ್ ರೈ

Posted By:
Subscribe to Filmibeat Kannada

ಸ್ಯಾಂಡಲ್ ವುಡ್, ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಪ್ರಕಾಶ್ ರಾಜ್ ರನ್ನ ನೀವು ಭಿನ್ನ ವಿಭಿನ್ನ ಪಾತ್ರಗಳಲ್ಲಿ ಇಲ್ಲಿವರೆಗೂ ನೋಡಿರ್ತೀರಾ. ಅದ್ರಲ್ಲೂ ಖತರ್ನಾಕ್ ಖೇಡಿಯ ಪಾತ್ರಗಳಲ್ಲೇ ಪ್ರಕಾಶ್ ರಾಜ್ ಹೆಚ್ಚು ಜನಪ್ರಿಯ ಬಿಡಿ. ಇದೀಗ ಅದೇ ಪ್ರಕಾಶ್ ರಾಜ್ 26 ಕಳ್ಳರನ್ನ ಬೆನ್ನಟ್ಟಿ ಗಾಂಧಿನಗರವನ್ನ ಲೂಟಿ ಮಾಡೋಕೆ ಬರ್ತಿದ್ದಾರೆ.

ಇದೇನಪ್ಪಾ ಅಂತ ಗಾಬರಿಯಾಗ್ಬೇಡಿ, ನಾವು ಹೇಳ್ತಾಯಿರೋದು ರೀಲ್ ಮ್ಯಾಟರ್ ಮಾತ್ರ. ಕಳೆದ ವರ್ಷವಷ್ಟೇ ರಿಲೀಸ್ ಆಗಿದ್ದ ಬಾಲಿವುಡ್ ನ ಹಿಟ್ ಸಿನಿಮಾ 'ಸ್ಪೆಷನ್ ಚಬ್ಬೀಸ್' ನೆನಪಿದ್ಯಾ..? ಅಕ್ಷಯ್ ಕುಮಾರ್ ನಟಿಸಿದ್ದ 'ಸ್ಪೆಷಲ್ ಚಬ್ಬೀಸ್' ಚಿತ್ರದ ಕನ್ನಡ ಅವತರಣಿಕೆಯಲ್ಲಿ, ಸಿಬಿಐ ಆಫೀಸರ್ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಳ್ಳೋ ಸಾಧ್ಯತೆ ಇದೆ.

Prakash Raj in special 26 remake

ಈಗಾಗ್ಲೇ 'ಸ್ಪೆಷಲ್ ಚಬ್ಬೀಸ್' ಚಿತ್ರವನ್ನ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಏಕಕಾಲಕ್ಕೆ ರೀಮೇಕ್ ಮಾಡೋಕೆ ಕಾಲಿವುಡ್ ನಟ, ನಿರ್ದೇಶಕ ತ್ಯಾಗರಾಜನ್ ರೈಟ್ಸ್ ಖರೀದಿಸಿದ್ದಾರೆ.

ದಕ್ಷಿಣದ ನಾಲ್ಕೂ ಭಾಷೆಗಳಿಗೆ ತಾವೇ ಖುದ್ದಾಗಿ ನಿರ್ದೇಶನ ಮಾಡ್ಬೇಕು ಅಂತ ಡಿಸೈಡ್ ಮಾಡಿರುವ ತ್ಯಾಗರಾಜನ್, ತಮಿಳು ಅವತರಣಿಕೆಯಲ್ಲಿ ತಮ್ಮ ಪುತ್ರ ಪ್ರಶಾಂತ್ ರನ್ನ ಅಕ್ಷಯ್ ಕುಮಾರ್ ಪಾತ್ರಕ್ಕೆ ಫಿಕ್ಸ್ ಮಾಡಿದ್ದಾರೆ. ಉಳಿದ ಮೂರು ಭಾಷೆಗಳ ತಾರಾಬಳಗ ಇನ್ನೂ ಫೈನಲ್ ಆಗಿಲ್ಲ.

ಕನ್ನಡ ಅವತರಣಿಕೆಯ ಲೀಡ್ ಹೀರೋ ಯಾರಾಗ್ತಾರೆ ಅನ್ನೋದು ಕೂಡ ಸದ್ಯಕ್ಕೆ ಸಸ್ಪೆನ್ಸ್ ಆಗೇ ಇದೆ. ಆದ್ರೆ, ಹಿಂದಿಯಲ್ಲಿ ಮನೋಜ್ ಬಾಜ್ ಪೈ ನಿರ್ವಹಿಸಿದ್ದ ಪಾತ್ರಕ್ಕಾಗಿ ಪ್ರಕಾಶ್ ರಾಜ್, ಶಯ್ಯಾಜಿ ಶಿಂಧೆ, ಸತ್ಯರಾಜ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿದ್ದಾರಂತೆ ನಿರ್ದೇಶಕ ತ್ಯಾಗರಾಜನ್. ಈಗಾಗ್ಲೇ ಪ್ರಕಾಶ್ ರಾಜ್ ಗೆ 'ಸ್ಪೆಷಲ್ ಚಬ್ಬೀಸ್' ಸಿನಿಮಾ ಇಷ್ಟವಾಗಿರೋದ್ರಿಂದ, ಚಿತ್ರದ ಬಗ್ಗೆ ತುಂಬಾ ಇಂಟ್ರೆಸ್ಟ್ ತೋರಿಸಿದ್ದಾರಂತೆ. ಅಂದುಕೊಂಡಂತೆ ಎಲ್ಲವೂ ಆದ್ರೆ, 26 ಕಳ್ಳರ ಬೆನ್ನಿಗೆ ಪ್ರಕಾಶ್ ರಾಜ್ ಬೀಳೋದು ಪಕ್ಕಾ.(ಏಜೆನ್ಸೀಸ್)

English summary
Kollywood actor and director Thiagarajan has acquired the remake rights of the bollywood movie Special 26. Akshay kumar starrer Special 26 will be remade in all four south indian languages which will be directed by Thiagarajan himself. Prakash raj is been considered to play the role of CBI officer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada