»   » 'ರೈ' ರಾಮಾಯಣಕ್ಕೆ ಒನ್ ಇಂಡಿಯಾ ಓದುಗರಿಂದ ಪರ-ವಿರೋಧ ಕಾಮೆಂಟ್

'ರೈ' ರಾಮಾಯಣಕ್ಕೆ ಒನ್ ಇಂಡಿಯಾ ಓದುಗರಿಂದ ಪರ-ವಿರೋಧ ಕಾಮೆಂಟ್

Posted By: Sony
Subscribe to Filmibeat Kannada

ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಿರುವ ಪ್ರಕಾಶ್ ರೈ ಅವರು ಒಬ್ಬ ಅತ್ಯದ್ಭುತ ನಟ ಅನ್ನೋದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದದ್ದು. ಜೊತೆಗೆ ಕನ್ನಡದ ಬಗ್ಗೆ, ಸಾಮಾನ್ಯ ಜನರ ಬಗ್ಗೆ ಅಪಾರ ಅಭಿಮಾನ-ಗೌರವ ಇಟ್ಟುಕೊಂಡಿರುವ ಬಹುಭಾಷಾ ನಟ ಇಲ್ಲಿಯವರೆಗೂ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ.

ಇಂತಹ ಅಪರೂಪದ ನಟ ಇತ್ತೀಚೆಗೆ ಕಾವೇರಿ ನೀರು ವಿವಾದದ ಬಗ್ಗೆ ಮಾತನಾಡುವಾಗ ಮಾತ್ರ ಅಸಡ್ಡೆ ತೋರಿ, ಮೈಕ್ ಕಿತ್ತು ಎದ್ದು ಹೋಗಿದ್ದು, ಹಲವರಿಗೆ ಸರಿ ಕಾಣಲಿಲ್ಲ.[ರೈಗಳ 'ಕಾವೇರಿ' ರಾಮಾಯಣ: ಕನ್ನಡಿಗರಾಗಿ ಪ್ರಕಾಶ್ ಹೀಗಾ ಮಾಡೋದು?]

ರೈಗಳ ವರ್ತನೆಗೆ ಇಡೀ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಲವರು ಪ್ರಕಾಶ್ ರೈ ಅವರ ನಿಲುವು ಸರಿಯಾಗಿದೆ ಅಂದ್ರೆ, ಇನ್ನೂ ಕೆಲವರು ತಪ್ಪು ಎಂದು ಉಗಿದಿದ್ದಾರೆ.

ಪ್ರಕಾಶ್ ಅವರ ಬಗ್ಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ಕೂಡ ವರದಿ ಮಾಡಿತ್ತು. ಈ ವರದಿಗೆ ಫಿಲ್ಮಿಬೀಟ್ ಕನ್ನಡ ಓದುಗರಿಂದ ಭಾರಿ ಪ್ರತಿಕ್ರಿಯೆ ಬಂದಿದ್ದು, ಪರ-ವಿರೋದದ ಕಂಪ್ಲೀಟ್ ರಿಪೋರ್ಟ್ ನೀಡ್ತೀವಿ. ಮುಂದೆ ಓದಿ....

ಪ್ರಕಾಶ್ ರಾಜ್ ಅವರೇ ಸರಿ

'ಈ ವಿಷಯದಲ್ಲಿ ಪ್ರಕಾಶ್ ರಾಜ್ ಅವರೇ ಸರಿ. ಚಾನೆಲ್ ನವರು ಎಲ್ಲವನ್ನು TRP ಗಾಗಿ ಮಾಡುತ್ತಾರೆ. ಈ TRPಗಾಗಿ ಚಾನೆಲ್ ನವರು ಎಷ್ಟು ಕೆಳಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಅವರು ಸಿನಿಮಾದ ಬಗ್ಗೆ ಮಾತನಾಡಲು ಕರೆದು, ಅದರ ಬಗ್ಗೆ ಮಾತಾಡೋದು ಬಿಟ್ಟು ಬೇರೆ ಮಾತಾಡುತ್ತಾರೆ. ಕಾವೇರಿ ಬಗ್ಗೆ ಚಾನೆಲ್ ಅಷ್ಟು ಮಿಡಿಯೋದಾದ್ರೆ, ತಮಿಳುನಾಡಿಗೆ ಹೋಗಿ ರಹಸ್ಯ ಕಾರ್ಯಾಚರಣೆ ಕೈಗೊಳ್ಳಲಿ. ಡಾಟಾ ಕಲೆಕ್ಟ್ ಮಾಡಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಿ' ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾವೇರಿ ಬಗ್ಗೆ ಇನ್ಯಾವಾಗ ಕೇಳಬೇಕು

'ಪ್ರಕಾಶ್ ರಾಜ್ ಅವರೇ, ಟಿವಿ ಸಂದರ್ಶಕಿ ಮಾಡಿದ್ದು ತಪ್ಪು ಅಂತ ನೀವು ಹೇಳುವುದಾದ್ರೆ, ನೀವು ಮಾಡಿದ್ದು ಸರಿನಾ?. ಓಕೆ ಯಾವಾಗ ನೀವು ಕಾವೇರಿ ವಿಚಾರದಲ್ಲಿ ನಿಮ್ಮ ಆಸಕ್ತಿ ತೋರಿಸಿದ್ದೀರಿ. ನೀವು ಸಿಕ್ಕಾಗ ಕೇಳದೇ ಇನ್ಯಾವಗ ಕೇಳಬೇಕು' ಎಂದು ಒಬ್ಬ ಕನ್ನಡಿಗ ಪ್ರಕಾಶ್ ಅವರಿಗೆ ಖಡಕ್ ಪ್ರಶ್ನೆ ಮಾಡಿದ್ದಾರೆ.

ವಿವಾದ ಮಾಡಿ TRP ಗಿಟ್ಟಿಸಿಕೊಳ್ಳೋದು

'ಈ ಚಾನೆಲ್ ಗಳಿಗೆ ಬರಿ TRP ಬೇಕು ಅಷ್ಟೇ...ಪ್ರಕಾಶ್ ರಾಜ್ ಅವರು ಹೇಳಿದ್ದು ಸರಿ ಇದೆ...ಅವರನ್ನ ಮೂವಿ ಬಗ್ಗೆ ಇಂಟರ್ ವ್ಯೂಗೆ ಕರೆಸಿ, ಯಾಕ್ರೀ ಕಾವೇರಿ ವಿಷಯ ಕೇಳ್ಬೇಕು...ಸುಮ್ನೆ ಇವರು Controvercy ಕ್ರಿಯೇಟ್ ಮಾಡಿ TRP ಜಾಸ್ತಿ ಮಾಡ್ಕೊಳಕೆ...ಇತರ ನ್ಯೂಸ್ ಚಾನೆಲ್ಸ್ ಇಂದ ಯಾವ ಪ್ರಯೋಜನ ಇಲ್ಲ ...ಜನರು ಇದನ್ನ ಅರ್ಥ ಮಾಡ್ಕೊಂಡು, ಈ ತರ ಚಾನೆಲ್ಸ್ ನೋಡೋದು ಸ್ಟಾಪ್ ಮಾಡಬೇಕು.' ಈ ತರ ಪ್ರಕಾಶ್ ಅವರ ಪರ ಕಾಮೆಂಟ್ ಕೂಡ ಬಂದಿದೆ.

ಪ್ರಕಾಶ್ ಅವರ ತಪ್ಪು ಇಲ್ವೇ ಇಲ್ಲ

ಇದರಲ್ಲಿ ಪ್ರಕಾಶ್ ರೈ ತಪ್ಪೇನಿದೆ? ಇದು ರಾಜಕೀಯದವರು ಬಗೆ ಹರಿಸಬೇಕಾದ ಸಮಸ್ಯೆ. ಪ್ರಕಾಶ್ ರಾಜ್ ಸರಿಯಾಗಿ ಹೇಳಿದ್ದಾರೆ. ಬಾಯಿಗೆ ಬಂದ ಪ್ರಶ್ನೆ ಕೇಳಿದ್ದು ಟಿವಿಯವರು' ಅಂತ ಕೆಲವರು ಪ್ರಕಾಶ್ ರೈ ಅವರನ್ನು ವಹಿಸಿಕೊಂಡು ಮಾತಾಡಿದ್ದಾರೆ.

'ರೈ'ಯಿಂದ 'ರಾಜ್' ಆದಾಗ ತಿಳಿಯಲೇ ಇಲ್ಲ

ನಾವು ಈ ಪ್ರಕಾಶ್ "ರೈ" ಇಂದ "ರಾಜ್" ಎಂದು ಮಾಡ್ಕೊಂಡಾಗ್ಲೇ ತಿಳ್ಕೊಬೇಕಿತ್ತು ಇವರು ಎಂಥ ಮನುಷ್ಯ ಅಂತ. ಈ ಟೈಂ ನಲ್ಲಿ ಇಂತಹ ಪ್ರಶ್ನೆ ಯಾಕೆ ಅಂತ ಕೇಳೋ ಪ್ರಕಾಶ್ "ರಾಜ್"ಗೆ ಈ ಟೈಂಲಿ ಇವನ ಚಿತ್ರ ಬಿಡುಗಡೆ ಮಾಡೋದಕ್ಕೆ ಒಳ್ಳೆ ಟೈಮ್ ಅಂತ ಹೇಗೆ ಅನಿಸಿತೋ. ಎಲ್ಲ ದುಡ್ಡ್ ಮಾಡೋ ತಂತ್ರ. ಇಂಥವರಿಗೆಲ್ಲ ಪ್ರೋತ್ಸಹ ಕೊಡ್ತಿರೋ ನಮ ಜನ ಪೆದ್ದರಷ್ಟೇ. ಇಂತವರು, ಯಾರ್ ಹೇಗಾದ್ರೂ ಹಾಳಾಗ್ ಹೋಗ್ಲಿ ನಾವು ಚೆನ್ನಾಗಿದ್ರೆ ಸಾಕು ಅನ್ನೋ ಜನ'. ಹೀಗೂ ಅಭಿಪ್ರಾಯ ಬಂದಿದೆ.

ಪ್ರಕಾಶ್ ರೈ ಹಾರಿದ್ದು ಸರಿಯಲ್ಲ

'ಅಲ್ಲಾ ಕಣಯ್ಯಾ, ಸುಮ್ಮನೆ ತಮಿಳುನಾಡು ಹಾಗೂ ಕರ್ನಾಟಕ ಕೂತು ಬಗೆಹರಿಸಿಕೊಳ್ಳಬೇಕು ಅಂತ ಹೇಳೋದು ಬಿಟ್ಟು, ನೀನು ಹಿಂಗಾ ಹಾರಾಡೋದು?' ಅಂತ ಅಪ್ಪಟ ಕನ್ನಡಿಗರೊಬ್ಬರು ಪ್ರಕಾಶ್ ಅವರಿಗೆ ತಿರುಗೇಟು ನೀಡಿದ್ದಾರೆ. ಇನ್ನೊಬ್ಬರು ಪ್ರಕಾಶ್ ಅವರನ್ನು ವಹಿಸಿಕೊಂಡಿದ್ದು, 'ಎಸ್ ಅವರು 100% ಸರಿ. ಏನಾದ್ರೂ ಹೇಳಿದ್ರೂ ಕಷ್ಟ, ಹೇಳದಿದ್ದರೂ ಕಷ್ಟ ಅಲ್ವೆ'?. ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ನಟನ ತಪ್ಪಿಲ್ಲ

ಪ್ರಕಾಶ್ ರೈ ಅವರು ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲಿ ಸಂದರ್ಶನ ಮಾಡುತ್ತಿದ್ದ ನಿರೂಪಕಿ ಈ ವಿವಾದದ ಬಗ್ಗೆ ಹೆಚ್ಚಿನ ಮಾಹಿತಿ ಅರಿತುಕೊಳ್ಳಬೇಕಿತ್ತು. ರಾಜಕೀಯ ವ್ಯಕ್ತಿಗಳು ಮತ್ತು ವಕೀಲರನ್ನು ಈ ಬಗ್ಗೆ ಕೇಳುವುದು ಬಿಟ್ಟು, ನಟನನ್ನು ಕೇಳಿದ್ದು, ಚಾನೆಲ್ ನವರ ಮೂರ್ಖತನ. ಜವಾಬ್ದಾರಿಯುತ ನಟನಾಗಿ ಪ್ರಕಾಶ್ ರೈ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಇದ್ರಲ್ಲಿ ಸುಮನಾ ಕಿತ್ತೂರು ಅವರು ಏನು ತಪ್ಪು ಕಂಡರು ಅಂತ ಗೊತ್ತಿಲ್ಲ'.

English summary
Actor Prakash Rai's Kannada News Channel Janashri Controversy about Cauvery Water. Here is the reaction about Oneindia kannada readers.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X