twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಇದ್ದಿದ್ರೆ ಗಂಧದ ಗುಡಿ ಅಲ್ಲ ಆ ಸಿನಿಮಾವನ್ನು ಹೊಗಳುತ್ತಿದ್ರು: ಪ್ರಕಾಶ್ ರಾಜ್

    |
    Prakash Raj praised Kantara on behalf of Puneeth Rajkumar at Gandhada Gudi pre release event

    ಅಕ್ಟೋಬರ್ 21ರ ಶುಕ್ರವಾರದಂದು ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಚಿತ್ರ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮಕ್ಕೆ ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗದ ಹಲವರು ತಾರೆಯರು ಆಗಮಿಸಿದ್ದರು. ವೇದಿಕೆಯನ್ನೇರಿ ಪುನೀತ್ ರಾಜ್ ಕುಮಾರ್ ಹಾಗೂ ಗಂಧದ ಗುಡಿ ಕುರಿತಾಗಿ ಯಶ್ ಹಾಗೂ ತಮಿಳು ನಟ ಸೂರ್ಯ ಆಡಿದ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಇನ್ನು ಪುನೀತ್ ರಾಜ್ ಕುಮಾರ್ ಜೊತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಹಾಗೂ ಪುನೀತ್ ರಾಜ್ ಕುಮಾರ್ ಜತೆ ತೆರೆ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಸಮಯ ಕಳೆದಿರುವ ಪ್ರಕಾಶ್ ರಾಜ್ ಕೂಡ ಗಂಧದಗುಡಿ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿ ಅಪ್ಪು ಹಾಗೂ ಗಂಧದ ಗುಡಿ ಸಿನಿಮಾ ಬಗ್ಗೆ ಮಾತನಾಡಿದರು.

    ಅಪ್ಪು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ ಅಪ್ಪು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ

    ಅಪ್ಪು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ ಅಪ್ಪು ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ

    ವೇದಿಕೆಯ ಮೇಲೆ ಮೈಕ್ ಹಿಡಿದು ಎಲ್ಲರಿಗೂ ನಮಸ್ಕಾರ ಹಾಗೂ ಅಪ್ಪು ಅವರಿಗೂ ಸಹ ನನ್ನ ನಮಸ್ಕಾರ ಎಂದು ಮಾತು ಆರಂಭಿಸಿದ ಪ್ರಕಾಶ್ ರಾಜ್ ಅಪ್ಪು ಇಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಹೀಗಾಗಿಯೇ ಅಪ್ಪು ಅವರಿಗೂ ಸಹ ನಮಸ್ಕಾರವನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿಕೆ ನೀಡಿದರು.

    ಅಪ್ಪು ಇದ್ದಿದ್ರೆ ಈ ಸ್ಟೇಜ್ ಮೇಲೆ ಏನು ಹೇಳ್ತಿದ್ರು

    ಅಪ್ಪು ಇದ್ದಿದ್ರೆ ಈ ಸ್ಟೇಜ್ ಮೇಲೆ ಏನು ಹೇಳ್ತಿದ್ರು

    ಮಾತು ಮುಂದುವರಿಸಿದ ಪ್ರಕಾಶ್ ರಾಜ್ ಅಪ್ಪು ಇದ್ದಿದ್ರೆ ಈ ವೇದಿಕೆ ಮೇಲೆ ಏನು ಹೇಳ್ತಿದ್ರು ಎಂಬುದನ್ನು ಊಹಿಸಿದರು. ಅಪ್ಪುವಿನ ಸೌಹಾರ್ದತೆ ಹಾಗೂ ಹೃದಯವಂತಿಕೆ ನೆನಪಿಗೆ ಬಂತು, ಅಪ್ಪು ಇಂದು ಏನಾದರೂ ಇದ್ದಿದ್ದರೆ ಈ ವೇದಿಕೆ ಮೇಲೆ ಮೊದಲು ಕಾಂತಾರ ಎನ್ನುತ್ತಿದ್ದರು ಎಂದು ಪ್ರಕಾಶ್ ರಾಜ್ ಹೇಳಿದರು. ಯಾಕಂದ್ರೆ ಕನ್ನಡದಲ್ಲಿ ಒಳ್ಳೆ ಸಿನಿಮಾ ಮಾಡಿದ್ರೆ, ಒಳ್ಳೆ ಪ್ರತಿಭೆಗಳಿದ್ದರೆ ಅಪ್ಪುಗೆ ತುಂಬಾ ಇಷ್ಟ, ತುಂಬಾ ಪ್ರೀತಿಸುತ್ತಿದ್ದ ರಿಷಬ್ ಶೆಟ್ಟಿ ಅವರನ್ನು ವೇದಿಕೆ ಮೇಲೆ ಅಪ್ಪಿಕೊಳ್ತಿದ್ರು, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಅವರನ್ನು ಅಪ್ಪು ಅಪ್ಪಿಕೊಂಡು ಅಭಿನಂದನೆ ಸಲ್ಲಿಸುತ್ತಿದ್ದರು ಎಂದು ಪ್ರಕಾಶ್ ರಾಜ್ ಹೇಳಿದರು.

    ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ

    ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ

    ಇನ್ನು ಅಪ್ಪು ನೆನಪಿನಲ್ಲಿ ಪ್ರಕಾಶ್ ರಾಜ್ ಅವರು ಈಗಾಗಲೇ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ. 'ಅಪ್ಪು ಎಕ್ಸ್‌ಪ್ರೆಸ್‌' ಎಂಬ ಹೆಸರಿನಡಿಯಲ್ಲಿ ಮೈಸೂರಿನಲ್ಲಿ ಪ್ರಕಾಶ್ ರಾಜ್ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು, ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ಈ ಸೇವೆ ಇರಬೇಕು ಎಂಬ ಕನಸು ಕಂಡಿದ್ದರು. ಇನ್ನು ಪ್ರಕಾಶ್ ರಾಜ್ ಅವರ ಈ ಸೇವೆಗೆ ತಮಿಳು ನಟ ಸೂರ್ಯ, ತೆಲುಗಿನ ಚಿರಂಜೀವಿ ಹಾಗೂ ಶಿವರಾಜ್ ಕುಮಾರ್ ಕೂಡ ಕೈಜೋಡಿಸಿದ್ದು ತಲಾ ಒಂದೊಂದು ಆ್ಯಂಬ್ಯುಲೆನ್ಸ್ ನೀಡುವುದಾಗಿ ಹೇಳಿದ್ದಾರೆ ಎಂಬುದನ್ನು ಪ್ರಕಾಶ್ ರಾಜ್ ವೇದಿಕೆ ಮೇಲೆ ಬಿಚ್ಚಿಟ್ಟರು.

    ಪ್ರಕಾಶ್ ರಾಜ್ ಕನಸಿಗೆ ಯಶ್ ಸಾಥ್

    ಪ್ರಕಾಶ್ ರಾಜ್ ಕನಸಿಗೆ ಯಶ್ ಸಾಥ್

    ಹೀಗೆ ಇಡೀ ಕರ್ನಾಟಕಕ್ಕೆ ಆಂಬ್ಯುಲೆನ್ಸ್ ಸೇವೆ ಒದಗಿಸಬೇಕು ಎಂಬ ಪ್ರಕಾಶ್ ರಾಜ್ ಅವರ ಕನಸಿಗೆ ಯಶ್ ಸಾಥ್ ನೀಡಿದರು. ಅಪ್ಪು ಹೆಸರಿನಡಿಯಲ್ಲಿ ರಾಜ್ಯದ ಪೂರ್ತಿ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿರುವ ಪ್ರಕಾಶ್ ರಾಜ್ ಅವರ ಯೋಜನೆಗೆ ಸ್ಪಂದಿಸಿದ ಯಶ್ ಗಂಧದಗುಡಿ ವೇದಿಕೆ ಮೇಲೆ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಘೋಷಿಸಿದರು. 'ಅನ್ಯತಾ ಭಾವಿಸಬೇಡಿ, ನನ್ನದು ಯಶೋಮಾರ್ಗ ಎಂಬ ಫೌಂಡೇಶನ್ ಇದೆ, ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸುವ ಸೇವೆಯನ್ನು ನಾನು ನನ್ನ ಸ್ನೇಹಿತ ಮಾಡುತ್ತೇವೆ. ನಮ್ಮ ಅಪ್ಪು ಅವರ ಹೆಸರಿನಲ್ಲಿ ನೀವು ಈ ಯೋಜನೆ ಆರಂಭಿಸಿದ್ದೀರಾ, ಆ ಕನಸು ಈ ಕ್ಷಣದಿಂದಲೇ ನನಸಾಗಬೇಕು, ಉಳಿದ 25 ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತೇನೆ' ಎಂದು ಹೇಳಿಕೆ ನೀಡುವುದರ ಮೂಲಕ ಯಶ್ ಅಪ್ಪು ಎಕ್ಸ್‌ಪ್ರೆಸ್‌ ಯೋಜನೆಗೆ ಬೃಹತ್ ಕೊಡುಗೆಯನ್ನು ನೀಡಿದರು. ಹೀಗೆ ಯಶ್ ಹೇಳಿಕೆ ನೀಡುತ್ತಿದ್ದಂತೆ ಭಾವುಕರಾದ ಪ್ರಕಾಶ್ ರಾಜ್ ತಮ್ಮ ಸೀಟಿನಿಂದ ಎದ್ದು ನಿಂತು ಯಶ್ ಅವರಿಗೆ ಕೈಮುಗಿದು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು ಹಾಗೂ ವೇದಿಕೆಗೆ ಓಡಿಹೋಗಿ ಯಶ್ ಅವರನ್ನು ಅಪ್ಪಿಕೊಂಡರು.

    English summary
    Prakash Raj praised Kantara on behalf of Puneeth Rajkumar at Gandhada Gudi pre release event
    Sunday, October 23, 2022, 8:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X