For Quick Alerts
  ALLOW NOTIFICATIONS  
  For Daily Alerts

  ಡೆವಿಲ್ ಈಸ್ ಬ್ಯಾಕ್: ಸರ್ಜರಿ ಬಳಿಕ ಮೊದಲ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್

  |

  ಚಿತ್ರೀಕರಣ ವೇಳೆ ಗಾಯಗೊಂಡು ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಆಸ್ಪತ್ರೆಯಿಂದ ಮೊದಲ ಫೋಟೋ ಹಂಚಿ ಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರಿಗೆ ಏಟಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಇದೀಗ ಸರ್ಜರಿ ಬಳಿಕ ಫೋಟೋ ಶೇರ್ ಮಾಡಿರುವ ಪ್ರಕಾಶ್ ರಾಜ್ ನೋಡಿ ಅಭಿಮಾನಿಗಳು ಸಮಾಧಾನ ಪಟ್ಟಿದ್ದಾರೆ.

  ಪ್ರಕಾಶ್ ರಾಜ್ ತಮಿಳು ನಟ ಧನುಷ್ ನಟನೆಯ 'D44' ಚಿತ್ರೀಕರಣದಲ್ಲಿ ನಿರತರಾಗಿದ್ದರು. ನಿನ್ನೆ (ಆಗಸ್ಟ್ 10) ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಅಲ್ಲೇ ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೈದರಾಬಾದ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಚಿತ್ರೀಕರಣ ವೇಳೆ ಪ್ರಕಾಶ್ ರಾಜ್‌ಗೆ ಪೆಟ್ಟು: ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆ ಚಿತ್ರೀಕರಣ ವೇಳೆ ಪ್ರಕಾಶ್ ರಾಜ್‌ಗೆ ಪೆಟ್ಟು: ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆ

  ಪ್ರಕಾಶ್ ರಾಜ್ ಗೆ ಪೆಟ್ಟಾಗಿದೆ ಎನ್ನುವ ವಿಚಾರ ಗೊತ್ತಾಗುತ್ತಿದಂತೆ ಅಭಿಮಾನಿಗಳ ಆತಂಕ ಮನೆಮಾಡಿತ್ತು. ಬಳಿಕ ಸ್ವತಃ ಪ್ರಕಾಶ್ ರಾಜ್ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿ, ''ಆತಂಕ ಪಡುವ ಅಗತ್ಯವಿಲ್ಲ, ಸಣ್ಣ ಮುರಿತ. ನನ್ನ ಸ್ನೇಹಿತ ಡಾ ಗುರುವರೆಡ್ಡಿ ಜೊತೆ ಹೈದರಾಬಾದ್‌ಗೆ ತೆರಳುತ್ತಿದ್ದೇನೆ. ಅಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತೇನೆ. ನಾನು ಉತ್ತಮವಾಗಿದ್ದೇನೆ'' ಎಂದು ಪೋಸ್ಟ್ ಹಾಕಿದ್ದರು. ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.

  ಇದೀಗ ಸರ್ಜರಿ ಬಳಿಕ ಮೊದಲ ಫೋಟೋ ಶೇರ್ ಮಾಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಪ್ರಕಾಶ್ ರಾಜ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಒಂದು ಕೈಗೆ ಸರ್ಜರಿ ಆಗಿರುವುದು ಗೊತ್ತಾಗುತ್ತಿದೆ. ಫೋಟೋ ಜೊತೆಗೆ ಪ್ರಕಾಶ್ ರಾಜ್ 'ಡೆವಿಲ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ.

  "ಡೆವಿಲ್ ಈಸ್ ಬ್ಯಾಕ್. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ನನ್ನ ಆತ್ಮೀಯ ಸ್ನೇಹಿತ ಡಾ.ಗುರುವರೆಡ್ಡಿ ಮತ್ತು ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆಗೆ ಧನ್ಯವಾದಗಳು. ಸದ್ಯದಲ್ಲೇ ಕೆಲಸಕ್ಕೆ ಮರಳುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.

  ಇತ್ತೀಚಿಗಷ್ಟೆ (ಆಗಸ್ಟ್ 5) ಧನುಷ್ ನಟನೆಯ ಹೊಸ ಸಿನಿಮಾ ಸೆಟ್ಟೇರಿತ್ತು. ಮಿಥುನ್ ಆರ್ ಜವಾಹರ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎಂದು ಹೇಳಲಾಗಿದೆ. ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತ್ಯಾ ಮೆನನ್, ರಾಶಿ ಖನ್ನಾ, ಪ್ರಿಯಾ ಭವಾನಿ ಶಂಕರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ.

  English summary
  Actor Prakash Raj shares first photo from hospital after surgery, says devil is back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X