For Quick Alerts
  ALLOW NOTIFICATIONS  
  For Daily Alerts

  ಟಬು ಜೊತೆ ಪ್ರಕಾಶ್ ರೈ ಹುರುಳಿಸಾರು ಬಿರಿಯಾನಿ

  By ಅನಂತರಾಮು, ಹೈದರಾಬಾದ್
  |

  ನಟ, ನಿರ್ದೇಶಕ ಪ್ರಕಾಶ್ ರೈ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಅವರು 'ಧೋನಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

  ಈ ಬಾರಿ ನಿರ್ದೇಶನದ ಜೊತೆಗೆ ನಟನೆ ಅದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಂದಹಾಗೆ ಇದು ತೆಲುಗು, ತಮಿಳು ಹಾಗೂ ಹಿಂದಿ ಚಿತ್ರ. ಚಿತ್ರದ ಟೈಟಲ್ ಕೂಡ ವಿಭಿನ್ನವಾಗಿದೆ. ಚಿತ್ರಕ್ಕೆ ತೆಲುಗಿನಲ್ಲಿ 'ಉಲವಚಾರು ಬಿರಿಯಾನಿ' (ಹುರುಳಿಸಾರು ಬಿರಿಯಾನಿ) ಎಂದು ಹೆಸರಿಡಲಾಗಿದೆ. ಉಳಿದೆರಡು ಭಾಷೆಗಳ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ.

  ಅಂದಹಾಗೆ ಇದೇನು ಸ್ವಮೇಕ್ ಚಿತ್ರವಲ್ಲ ಬಿಡಿ. ಮಲಯಾಳಂನ 'ಸಾಲ್ಟ್ ಅಂಡ್ ಪೆಪ್ಪರ್' ಚಿತ್ರವನ್ನು ರೀಮೇಕ್ ಮಾಡುತ್ತಿದ್ದಾರೆ ಪ್ರಕಾಶ್. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಒಟ್ಟಿಗೆ ಸೆಟ್ಟೇರಿ ಬಿಡುಗಡೆಯೂ ಆಗಲಿದೆಯಂತೆ. 'Love is cooking' ಎಂಬುದು ಚಿತ್ರದ ಅಡಿಬರಹ.

  ಚಿತ್ರದ ನಾಯಕಿ ಟಬು. ಇದೊಂದು ಮಧ್ಯ ವಯಸ್ಕರ ಲವ್ ಸ್ಟೋರಿ. ಹಾಗಾಗಿ ಚಿತ್ರಕ್ಕೆ ನಡುವಯಸ್ಸಿನ ಪ್ರಕಾಶ್ ಹಾಗೂ ಟಬು ಪ್ರಮುಖ ಪಾತ್ರಧಾರಿಗಳು. ಚಿತ್ರದ ಪ್ರಮುಖ ಭಾಗ ಊಟ. ಊಟವೇ ಇಲ್ಲಿ ಕಥಾವಸ್ತು. ಇಳಯರಾಜ ಸಂಗೀತ ಸಂಯೋಜನೆಯ ಈ ಚಿತ್ರ 2013ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ.

  English summary
  After Dhoni debut directional actor Prakash Raj is all set to direct his second film. His next film is 'Ulavacharu Biryani'. The movie is a remake of Salt & Pepper, a Malayalam hit. Prakash Raj plans to make this film in Telugu, Tamil and Hindi simultaneously.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X