»   » 'ನೋಟ್ ಬ್ಯಾನ್' ಬಗ್ಗೆ ನಟ ಪ್ರಕಾಶ್ ರೈ ನೀಡಿದ ಹೇಳಿಕೆ ಕೇಳಿ!

'ನೋಟ್ ಬ್ಯಾನ್' ಬಗ್ಗೆ ನಟ ಪ್ರಕಾಶ್ ರೈ ನೀಡಿದ ಹೇಳಿಕೆ ಕೇಳಿ!

Posted By:
Subscribe to Filmibeat Kannada

ನೋಟ್ ಬ್ಯಾನ್ ಆಗಿ ವರ್ಷಗಳು ಕಳೆದಿದೆ. ಅನೇಕರು ನೋಟು ನಿಷೇಧ ಮಾಡಿದ ಮೋದಿ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಈಗ ನಟ ಪ್ರಕಾಶ್ ರೈ ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಟ ಪ್ರಕಾಶ್ ರೈ "ಸಂಬಂಧಪಟ್ಟವರ ಗಮನಕ್ಕೆ" ಎಂಬ ಶೀರ್ಷಿಕೆ ನೀಡಿ ಅದರಲ್ಲಿ "ಶ್ರೀಮಂತರು ತಮ್ಮ ಕಪ್ಪು ಹಣವನ್ನು ಹೊಳೆಯುವ ಹೊಸ ನೋಟುಗಳಿಗೆ ಬದಲಾಯಿಸಲು ದಾರಿಗಳು ಕಂಡುಕೊಂಡರು. ಇದರಿಂದ ಹತ್ತಾರು ಲಕ್ಷ ಅಸಹಾಯಕ ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಡೋಲಾಯಮಾನ ಆಯಿತು. ನಮ್ಮ ಕಾಲ ಘಟ್ಟದ ಅತಿ ದೊಡ್ಡ ತಪ್ಪು ನಿರ್ಣಯಕ್ಕೆ ಕ್ಷಮೆ ಕೇಳುವ ಮನಸ್ಸು ಮಾಡಿದ್ದಿರಾ?" ಎಂದು ಟ್ವೀಟ್ ಮಾಡಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.

Prakash Raj wants apology for note ban

''ನೋಟು ನಿಷೇಧ ಮಾಡಿ ಅತಿ ದೊಡ್ಡ ತಪ್ಪು ಮಾಡಿರುವ ಕೇಂದ್ರ ಸರ್ಕಾರ ದೇಶದ ಜನರ ಕ್ಷಮೆ ಕೇಳಬೇಕು'' ಎಂದು ಪ್ರಕಾಶ್ ರೈ ಒತ್ತಾಯಿಸಿದ್ದಾರೆ. ಇನ್ನು ಇತ್ತೀಚಿಗಷ್ಟೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿರುವುದಕ್ಕೆ ಅವರು ನನಗಿಂತ ದೊಡ್ಡ ನಟ ಎಂದು ಪ್ರಕಾಶ್ ರೈ ಟೀಕಿಸಿದ್ದರು.

English summary
Actor Prakash Raj wants Narendra Modi to apology for note ban. ನೋಟು ನಿಷೇಧ ಮಾಡಿದ ಕೇಂದ್ರ ಸರ್ಕಾರ ಕ್ಷಮೆ ಕೇಳಬೇಕು ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada