Don't Miss!
- News
Aero India 2023: 'ಇಂಡಿಯಾ ಪೆವಿಲಿಯನ್' ಮಧ್ಯದಲ್ಲಿ ಭಾರತದ ಈ ಪ್ರತಿಷ್ಠಿತ ವಿಮಾನ ಪ್ರದರ್ಶನ- ವಿನ್ಯಾಸ, ತೂಕ, ಮಾಹಿತಿ
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Prakash Raj: ಯಶ್ ಅಭಿಮಾನಿಗಳಿಗೆ ಪ್ರಕಾಶ್ ರಾಜ್‌ರದ್ದೇ ಚಿಂತೆ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ.
Recommended Video

ಜೊತೆಗೆ ಒಂದಿಷ್ಟು ವಿವಾದ ಕೂಡ ಹುಟ್ಟಿಕೊಂಡಿದೆ. ಕೋಟಿ ಕೋಟಿ ಗಳಿಕೆ ಮಾಡುತ್ತಾ, ಯಶಸ್ವಿಯಾಗಿ ಮುನ್ನುಗ್ಗುತ್ತಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.
Kabza:
'ಕಬ್ಜ'
ಅಡ್ಡಕ್ಕೆ
ಎಂಟ್ರಿ
ಕೊಟ್ಟ
ತೆಲುಗು
ನಟರು!
1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ಬಗ್ಗೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಈ ಸಿನಿಮಾದ ವಿರುದ್ಧ ನಟ ಪ್ರಕಾಶ್ ರಾಜ್ ತಿರುಗಿಬಿದ್ದಿದ್ದಾರೆ. ಇದು ಈಗ ಕೆಜಿಎಫ್ ಸಿನಿಮಾದ ಮೇಲೆ ಪ್ರಭಾವ ಬೀರುತ್ತಿದೆಯಂತೆ.

ಸಿನಿಮಾದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ
'ಕೆಜಿಎಫ್ 2' ಏಪ್ರಿಲ್ 14 ರಂದು ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾದ ಬಗ್ಗೆ ಸಾಕಷ್ಟು ಅಭಿಮಾನಿಗಳು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ವರ್ಷಗಳಿಂದಲೂ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಹೀಗಿರಬೇಕಾದರೇ 'ಕೆಜಿಎಫ್ 2' ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಪ್ರಕಾಶ್ ರಾಜ್ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಿಲೀಸ್ ಆಗುವವರೆಗೂ ನಟ ಪ್ರಕಾಶ್ ರಾಜ್ ಅವರನ್ನು ಕಂಟ್ರೋಲ್ ಮಾಡಿ ಎಂದು ಫ್ಯಾನ್ಸ್ 'ಕೆಜಿಎಫ್ 2' ಚಿತ್ರತಂಡವನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ.
The
Kashmir
Files:
'ದಿ
ಕಾಶ್ಮೀರ್
ಫೈಲ್ಸ್'
ನೋಡಲು
ಎದೆಗಾರಿಕೆ
ಬೇಕು:
ಸಂಸದ
ಪ್ರತಾಪ
ಸಿಂಹ
ಟಾಂಗ್

ಹಳೆಯ ಗಾಯವನ್ನು ವಾಸಿ ಮಾಡಿದ್ಯಾ, ಕೆದಕಿದೆಯಾ?
ಕಳೆದೆರೆಡು ದಿನಗಳ ಹಿಂದೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನಟ ಪ್ರಕಾಶ್ ರಾಜ್ ವೀಕ್ಷಿಸಿದ್ದರು. ಅಷ್ಟೇ ಅಲ್ಲದೇ ಈ ಸಿನಿಮಾ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ ಕೂಡ ಮಾಡಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿಡಿಯೋ ತುಣುಕೊಂದನ್ನು ಶೇರ್ ಮಾಡಿದ್ದ ಪ್ರಕಾಶ್ ರಾಜ್ ಈ ಸಿನಿಮಾ ಹಳೆಯ ಗಾಯವನ್ನು ವಾಸಿ ಮಾಡಿದೆಯಾ ಅಥವಾ ಕೆದಕಿದಿಯಾ ಎಂದು ಪ್ರಶ್ನೆ ಕೇಳಿದ್ದಾರೆ. 'ಇದೊಂದು ಪ್ರಚಾರದ ಸಿನಿಮಾವಾಗಿದೆ. ಈ ಸಿನಿಮಾ ಗಾಯವನ್ನು ಗುಣಪಡಿಸಿದ್ಯಾ ಅಥವಾ ಕೆದಕಿದ್ಯಾ. ಇಲ್ಲಾ ದ್ವೇಷದ ಬೀಜವನ್ನು ಬಿತ್ತುತ್ತಿದೆಯಾ ?' ಎಂದು ಪ್ರಶ್ನೆ ಮಾಡಿದ್ದರು. ಪ್ರಕಾಶ್ ರಾಜ್ ಈ ಹೇಳಿಕೆಗಳು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ನೆಟ್ಟಿಗರ ಕೆಂಗಣ್ಣಿಗೆ ಪ್ರಕಾಶ್ ರಾಜ್ ಬಿದ್ದಿದ್ದರು.
ವಿಡಿಯೋ:
'ದಿ
ಕಾಶ್ಮೀರ್
ಫೈಲ್ಸ್'
ಪ್ರದರ್ಶನದ
ವೇಳೆ
ಪಾಕ್
ಪರ
ಘೋಷಣೆ

'ಕೆಜಿಎಫ್ 2'ಸಿನಿಮಾಗೆ ಅಪಾಯ, ಅಭಿಮಾನಿಗಳ ಚಿಂತೆ
ಪ್ರಕಾಶ್ ರಾಜ್ ಈ ಹೇಳಿಕೆ 'ಕೆಜಿಎಫ್ 2' ಸಿನಿಮಾದ ಬಗ್ಗೆ ನೆಗೆಟಿವ್ ಪರಿಣಾಮ ಬೀರುತ್ತಿದೆ. 'ಕೆಜಿಎಫ್ 2' ಸಿನಿಮಾ ಪ್ಯಾನ್ ಇಂಡಿಯಾ ಕಥೆ ಆಗಿದ್ದು, ಹಿಂದಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಹೀಗಾಗಿ ಪ್ರಕಾಶ್ ರಾಜ್ ಟೀಕೆಗಳು, ನೇರ ಮಾತುಗಳು ಹಿಂದಿ ವೀಕ್ಷಕರ ಮೇಲೆ ಪರಿಣಾಮ ಬೀರುವಂತಿದೆ. ಇದರಿಂದ 'ಕೆಜಿಎಫ್ 2' ಸಿನಿಮಾಗೆ ಖಂಡಿತಾ ಅಪಾಯ ಅನ್ನೋದು ಅಭಿಮಾನಿಗಳ ಚಿಂತೆ. ಹೀಗಾಗಿ 'ಕೆಜಿಎಫ್ 2' ಸಿನಿಮಾ ರಿಲೀಸ್‌ವರೆಗೆ ಪ್ರಕಾಶ್ ರಾಜ್‌ಗೆ ಸುಮ್ಮನಿರಲು ಹೇಳಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
|
‘ತೂಫಾನ್’ಲಿರಿಕಲ್ ಸಾಂಗ್ ಬಿಡುಗಡೆ ಮಾಡಲು ಸಕಲ ಸಿದ್ಧತೆ
ಇಂದು (ಮಾ.21)ರಂದು ಕೆಜಿಎಫ್ 2 ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ‘ತೂಫಾನ್' ಎಂಬ ಲಿರಿಕಲ್ ಸಾಂಗ್ ಬಿಡುಗಡೆ ಮಾಲಾಗಿದೆ. ಈ ಮಾಹಿತಿಯನ್ನು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್ ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಮೂಲಕ ಪ್ರಕಟಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆ ಹೆಚ್ಚಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತದಿಂದಾಗಿ ‘ಕೆಜಿಎಫ್ ಚಾಪ್ಟರ್ 1' ಸಿನಿಮಾಗೆ ಹೊಸ ಮೆರುಗು ಬಂದಿತ್ತು. ಈಗ ‘ಕೆಜಿಎಫ್ ಚಾಪ್ಟರ್ 2' ಸಿನಿಮಾದ ಹಾಡುಗಳ ಮೂಲಕ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಈಗಾಗಲೇ ಇಂದು (ಮಾ.21) ಬೆಳಗ್ಗೆ 11.07ಕ್ಕೆ ‘ತೂಫಾನ್' ಸಾಂಗ್ ರಿಲೀಸ್ ಆಗಿದೆ.