Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' ಚಿತ್ರದ 'ಬೇಷರಂ' ಹಾಡಿಗೆ ಮುತಾಲಿಕ್ ಗರಂ!
ಶಾರುಖ್ ಖಾನ್-ದೀಪಿಕಾ ಪಡುಕೋಣೆ ನಟಿಸಿರುವ 'ಪಠಾಣ್' ಸಿನಿಮಾದ 'ಬೇಷರಮ್' ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಸಖತ್ ಹಾಟ್ ಆಗಿರುವ ಈ ಹಾಡಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ ಕೆಲವು ಹಿಂದೂಪರ ಸಂಘಟನೆಗಳವರು ಈ ಹಾಡನ್ನು ಮಾತ್ರವೇ ಅಲ್ಲದೆ ಒಟ್ಟಾರೆ ಸಿನಿಮಾವನ್ನೇ ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿಯೂ 'ಪಠಾಣ್' ಸಿನಿಮಾ ಬ್ಯಾನ್‌ಗೆ ಒತ್ತಾಯ ಕೇಳಿಬಂದಿದ್ದು, ಶಾರುಖ್ ಖಾನ್ ಹಾಗೂ ದೀಪಿಕಾ ಪಡಕೋಣೆ ಅಭಿನಯದ ಪಠಾಣ್ ಚಿತ್ರದಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿ ಹಾಡಲಾಗಿರುವ ಬೇಷರಂ ಹಾಡಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಈ ಹಾಡು ಅಶ್ಲೀಲ ಹಾಗೂ ಅಸಭ್ಯವಾಗಿದೆ. ಈ ಚಿತ್ರದ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣದ ಬಗ್ಗೆ ನಾಚಿಕೆಗೇಡು ಎಂಬ ಅರ್ಥದಲ್ಲಿ ಹಾಡಲಾಗಿದೆ. ಅದಕ್ಕಾಗಿ ದೇಶದಾದ್ಯಂತ ಈ ಸಿನಿಮಾ ಬಾಯ್‌ಕಾಟ್ ಅಭಿಯಾನ ಆರಂಭಿಸಿದ್ದು, ಇದಕ್ಕೆ ಶ್ರೀರಾಮ ಸೇನೆ ಕೂಡ ಬೆಂಬಲ ಸೂಚಿಸುತ್ತದೆ ಎಂದರು.

'ಹಿಂದಿ ಚಿತ್ರರಂಗ ದಾವುದ್ ಹಾಗೂ ಇಸ್ಮಾಂ ಕೈಯಲ್ಲಿದೆ'
ಹಿಂದಿ ಚಿತ್ರರಂಗ ಮುಂಬೈನಲ್ಲಿ ದಾವುದ್ ಹಾಗೂ ಇಸ್ಮಾಂ ಕೈಯಲ್ಲಿದೆ. ಕಮ್ಯುನಿಸ್ಟರ ಹಾಗೂ ನಾಸ್ತಿಕವಾದಿಗಳ ಹಿಡಿತದಲ್ಲಿದೆ. ಇಲ್ಲಿಯವರೆಗೆ ನಿರಂತರವಾಗಿ ಹಿಂದೂಗಳ ಮೇಲೆ ಟಾರ್ಗೆಟ್ ಮಾಡಿ ಕೆಡಿಸುವ ಹಾಗೂ ನಂಬಿಕೆ ಹಾಳು ಮಾಡವ ಪ್ರವೃತ್ತಿ ಬೆಳೆದುಕೊಂಡೇ ಬಂದಿದೆ. ಈ 'ಪಠಾಣ್' ಸಿನಿಮಾದಲ್ಲಿ ಕೇಸರಿ ಬಣ್ಣ ಟಾರ್ಗೆಟ್ ಮಾಡಿ 'ಬೇಷರಂ' ಹಾಡು ಹಾಕಲಾಗಿದೆ. ಇದು ಅಶ್ಲೀಲ ಹಾಡು. ಲಿವಿಂಗ್ ಟುಗೆದರ್, ಲವ್ ಜಿಹಾದ್ ಹಾಗೂ ರೇಪ್ ಆಗಲು ಈ ರೀತಿಯ ಮಾನಸಿಕತೆಯ ಚಲನಚಿತ್ರಗಳಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ. ಸೆನ್ಸಾರ್ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಾಜ ಹಾಳು ಮಾಡುವ ಇಂತಹ ಚಲನಚಿತ್ರಗಳನ್ನು ಬ್ಯಾನ್ ಮಾಡಬೇಕು ಎಂದರು.

ಪಿಕೆ ಸಿನಿಮಾದಲ್ಲಿ ದೇವರುಗಳಿಗೆ ಅಪಮಾನ: ಮುತಾಲಿಕ್
'ಪಿಕೆ' ಎಂಬ ಸಿನಿಮಾದಲ್ಲಿ ನಮ್ಮ ದೇವರುಗಳನ್ನು ಎಷ್ಟು ಅಸಭ್ಯವಾಗಿ ತೋರಿಸಿದ್ದಾರೆ. ಪಾಕಿಸ್ತಾನದ ಹುಡುಗ ಹಾಗೂ ಭಾರತ ದೇಶದ ಹುಡುಗಿಯ ಜೊತೆ ಪ್ರೀತಿ-ಪ್ರೇಮ ಆಗುವುದನ್ನು ತೋರಿಸಿದ್ದಾರೆ. ಪಾಕಿಸ್ತಾನದ ಹುಡುಗನೇ ಯಾಕೆ ಆಗಬೇಕು? ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಪ್ರಕಾಶ್ ರೈ ಟ್ವೀಟ್
ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆಂಬ ಎಂಬ ಕಾರಣಕ್ಕೆ ಸಿನಿಮಾವನ್ನು ಬ್ಯಾನ್ ಮಾಡಲು ಒತ್ತಾಯಿಸುತ್ತಿರುವುದನ್ನು ಹಲವರು ವಿರೋಧಿಸಿದ್ದು ನಟ ಪ್ರಕಾಶ್ ರೈ ಸಹ ಈ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದು, ''ಕೇಸರಿ ಬಣ್ಣದ ಬಟ್ಟೆ ಹಾಕಿ ಸಣ್ಣ ಮಕ್ಕಳನ್ನು ರೇಪ್ ಮಾಡುತ್ತಿರುವ ಸ್ವಾಮೀಜಿಗಳಿಗೆ ಏನೂ ಅನ್ನದವರಿಗೆ, ಕೇಸರಿ ಶಾಲು ಹೊದ್ದು ರೌಡಿಸಂ ಮಾಡುವವರು, ಕೇಸರಿ ಟೋಪಿ ಹಾಕಿ ಎಂಎಲ್‌ಎ ಖರೀದಿಸುವವರಿಗೆ ಏನೂ ಇಲ್ಲ, ಆದರೆ ಸಿನಿಮಾದಲ್ಲಿ ಕೇಸರಿ ಬಟ್ಟೆ ಹಾಕಿದ್ದಕ್ಕೆ ವಿರೋಧವೇ? ಇನ್ನೂ ಎಷ್ಟು ದಿನ ಇದನ್ನೆಲ್ಲ ಸಹಿಸಿಕೊಳ್ಳಬೇಕು ಎಂದಿದ್ದಾರೆ ನಟ ಪ್ರಕಾಶ್ ರೈ.

ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ
'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ನಟಿಸಿದ್ದಾರೆ. ಸಿನಿಮಾದ 'ಬೇಷರಮ್' ಹಾಡು ಇತ್ತೀಚೆಗೆ ಬಿಡುಗಡೆ ಆಗಿದ್ದು, ಹಾಡಿನ ಒಂದು ದೃಶ್ಯದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಮಾದರಿಯ ಉಡುಗೆ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ ಇದಕ್ಕೆ ಕೆಲವರು ಆಕ್ಷೇಪ ಎತ್ತಿದ್ದು, ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ.