For Quick Alerts
  ALLOW NOTIFICATIONS  
  For Daily Alerts

  ಡರ್ಟಿ ಪಿಕ್ಚರ್ ಬಿಡುಗಡೆ; ಪ್ರಮೋದ್ ಮುತಾಲಿಕ್ ಗುಡುಗು

  |
  <ul id="pagination-digg"><li class="next"><a href="/news/veena-malik-pakistan-kannada-movie-dirty-picture-067418.html">Next »</a></li></ul>

  ಪಾಕಿಸ್ತಾನಿ ನಟಿ ವೀಣಾ ಮಲಿಕ್ ನಟನೆಯ ಕನ್ನಡ ಚಿತ್ರ 'ಡರ್ಟಿ ಪಿಕ್ಚರ್- ಸಿಲ್ಕ್ ಸಖತ್ ಹಾಟ್ ಮಗಾ' ಬಿಡುಗಡೆಯನ್ನು ತಾವು ತಡೆಹಿಡಿಯುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದು ಮಂಗಳೂರಿನಲ್ಲಿ (19 ಆಗಸ್ಟ್ 2012) ಮತ್ತೊಮ್ಮೆ ಗುಡುಗಿದ್ದಾರೆ. ಈ ಮೊದಲೊಮ್ಮೆ ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ವಿರುದ್ಧ ಶ್ರೀರಾಮಸೇನೆ ಕಾರ್ಯಕರ್ತರು ಸೋಮವಾರ (ಜು.9, 2012) ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.

  ಮೊದಲಿನ ವಿರೋಧ, ಪ್ರತಿಭಟನೆಯಿಂದ ಏನೂ ಪ್ರಯೋಜನವಾಗಿಲ್ಲ ಎಂಬುದನ್ನು ಮನಗಂಡಂತೆ, ಮತ್ತೆ ಮಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ವೀಣಾ ಮಲಿಕ್ ವಿರುದ್ಧ ಗುಡುಗಿದ್ದಾರೆ. ಪಾಕಿಸ್ತಾನಿ ನಟಿಯರು ಗೂಢಚಾರಿಣಿ ಕೆಲಸ ಮಾಡುತ್ತಾರೆ ಎಂಬುದು ಈ ಮೊದಲಿನ ಸಾಕಷ್ಟು ಘಟನೆಗಳಿಂದ ತಿಳಿದುಬಂದಿದೆ. ಹೀಗಿದ್ದೂ, ಇಲ್ಲಿ ನಟಿಯರೇ ಇಲ್ಲವೆಂಬಂತೆ ಅವರನ್ನು ಕರೆಯುವ ಔಚಿತ್ಯವೇನು ಎಂದವರು ಕಿಡಿ ಕಾರಿದ್ದಾರೆ.

  ಮುಖ್ಯವಾಗಿ ವೀಣಾ ಮಲಿಕ್ ವಿರುದ್ಧ ಯಾವುದೇ ಗೂಡಚಾರದ ಆರೋಪವಿದೆ ಎಂಬುದನ್ನು ಸಾಬೀತುಪಡಿಸದ ಅವರು, "ಪಾಕಿಸ್ತಾನಿ ನಟಿಯರ ಪೈಕಿ ಹಲವರು ಈ ವಿಷಯಕ್ಕೆ ಈಗಾಗಲೇ ಸುದ್ದಿಯಾಗಿದ್ದಾರೆ. ಹೀಗಿರುವಾಗ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳದೇ ಕನ್ನಡ ಚಿತ್ರಕ್ಕೆ ಪಾಕಿಸ್ತಾನಿ ನಟಿಯೊಬ್ಬರನ್ನು ನಾಯಕಿಯನ್ನಾಗಿಸಿದ್ದು ಯಾವುದೇ ಕಾರಣಕ್ಕೂ ಒಪ್ಪತಕ್ಕ ವಿಷಯವಲ್ಲ" ಎಂದು ಪ್ರತಿಪಾದಿಸಿದ್ದಾರೆ.

  ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ಪಾಕಿಸ್ತಾನದ ತಾರೆ ವೀಣಾ ಮಲಿಕ್ ಅಭಿನಯಿಸಿರುವುದು ಶ್ರೀರಾಮಸೇನೆಯನ್ನು ಕೆರಳಿಸಿದೆ. ಚಿತ್ರದಲ್ಲಿ ಪಾಕಿಸ್ತಾನಿ ತಾರೆಗೆ ಬದಲಾಗಿ ಯಾರಾದರೂ ಭಾರತೀಯರು ಅದರಲ್ಲೂ ಕನ್ನಡಿಗರು ಅಭಿನಯಿಸಬಹುದಿತ್ತು. ಇಲ್ಲಿ ಬಹಳಷ್ಟು ಪ್ರತಿಭಾನ್ವಿತ ತಾರೆಗಳಿದ್ದರೂ ಪಾಕಿಸ್ತಾನಿ ತಾರೆಯೊಬ್ಬಳನ್ನು ಹಾಕಿಕೊಂಡಿರುವುದು ಸರಿಯಲ್ಲ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

  ಜುಲೈ 9 ರಂದು ನಡೆಸಿದ ಈ ಮೊದಲಿನ ಅವರ ಪ್ರತಿಭಟನೆಗೆ 'ಡರ್ಟಿ ಪಿಕ್ಚರ್' ಚಿತ್ರತಂಡ ಯಾವುದೇ ಸೊಪ್ಪುಹಾಕಿಲ್ಲ. ಅಷ್ಟೇ ಅಲ್ಲ, ಆ ನಂತರ ವೀಣಾ ಮಲಿಕ್ ಬೆಂಗಳೂರಿನ ಜನನಿಬಿಡ ಮೆಜೆಸ್ಟಿಕ್ ಪ್ರದೇಶಕ್ಕೆ ಚಿತ್ರೀಕರಣಕ್ಕೆಂದು ಬಂದಿಳಿದಾಗ ಅಪಾರ ಜನಸ್ತೋಮ ಜಮಾಯಿಸಿತ್ತು. 'ಡರ್ಟಿ ಪಿಕ್ಚರ್' ಚಿತ್ರೀಕರಣಕ್ಕೆ ಅಡಚಣೆಯುಂಟಾಗಿದ್ದರೂ ಅದು ವೀಣಾ ಜನಪ್ರಿಯತೆಗೆ ಸಾಕ್ಷಿ ಎಂದೇ ಚಿತ್ರತಂಡ ಭಾವಿಸಿತ್ತು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/veena-malik-pakistan-kannada-movie-dirty-picture-067418.html">Next »</a></li></ul>
  English summary
  Srirama Sene chief Pramod Muthalik told that he would not give up to release the Kannada film 'Dirty Picture- Silk Sakhath Hot Maga' acted by Pakistani actress Veena Malik. He added that there are so many good actress in Kannada Industry itself and no need to call Pakistani actors. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X