»   » ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?

ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?

Posted By:
Subscribe to Filmibeat Kannada

ಸೆಟ್ಟೇರುವ ಮುನ್ನವೇ ಗಾಂಧಿನಗರದ ಗಲ್ಲಿಗಳಲ್ಲಿ ಗದ್ದಲ ಸೃಷ್ಟಿ ಮಾಡಿದ ಸಿನಿಮಾ 'ಲೀಡರ್'. ಶೀರ್ಷಿಕೆ ವಿಚಾರವಾಗಿ 'ನಾ ಕೊಡೆ ನೀ ಬಿಡೆ' ಎಂಬಂತಿದ್ದ 'ಲೀಡರ್' ವಿವಾದ ಕಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಗೆಹರಿದಿತ್ತು.

ಅದರ ಪ್ರಕಾರ, 'ಲೀಡರ್' ಶೀರ್ಷಿಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾಲಾಗಿದೆ. ಸುದೀಪ್ ರವರ ಹೊಸ ಚಿತ್ರಕ್ಕೂ ಅದೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದರಿಂದ ನಿರ್ಮಾಪಕರು ವಾಣಿಜ್ಯ ಮಂಡಳಿ ಮೆಟ್ಟಿಲೇರುವಂತಾಗಿತ್ತು.[ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್]

ಈಗ ಟೈಟಲ್ ತಲೆಬಿಸಿಯನ್ನ ಶಮನ ಮಾಡಿಕೊಂಡ ಬಳಿಕ 'ಲೀಡರ್' ಚಿತ್ರದ ಪ್ರೀ-ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗುತ್ತಿದೆ. 'ಲೀಡರ್' ಶಿವರಾಜ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಸೆಲೆಕ್ಷನ್ ಕೆಲಸ ಮುಗಿದಿದೆ. ಮುಂದೆ ಓದಿ.....

'ಲೀಡರ್' ನಾಯಕಿ ಯಾರು.?

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಯಕರಾಗಿ ನಟಿಸುತ್ತಿರುವ 'ಲೀಡರ್' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ಉತ್ತರಕ್ಕಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...[ಸುದೀಪ್, ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ]

ನಾಯಕಿ ಈಕೆಯೇ..!

'ಲೀಡರ್' ಚಿತ್ರಕ್ಕೆ ನಟಿ ಪ್ರಣೀತಾ ಸುಭಾಷ್ ನಾಯಕಿ ಆಗಿ ಆಯ್ಕೆ ಆಗಿರುವುದು ಈಗ ಅಧಿಕೃತವಾಗಿದೆ. [ಹೊಸ ತಿರುವು ಪಡೆದುಕೊಂಡ 'ಲೀಡರ್' ವಿವಾದ]

ಶಿವಣ್ಣ ಜೊತೆ ಮೊಟ್ಟ ಮೊದಲ ಬಾರಿಗೆ....

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ದುನಿಯಾ ವಿಜಯ್, ಅಜೇಯ್ ರಾವ್, ಗಣೇಶ್ ಜೊತೆ ಅಭಿನಯಿಸಿರುವ ಪ್ರಣೀತಾ ಸುಭಾಷ್ ಮೊದಲ ಬಾರಿಗೆ 'ಲೀಡರ್' ಚಿತ್ರದ ಮೂಲಕ ಶಿವರಾಜ್ ಕುಮಾರ್ ಗೆ ಜೋಡಿಯಾಗಲಿದ್ದಾರೆ.

'ಪೊರ್ಕಿ' ಚಿತ್ರದಿಂದ ಪರಿಚಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ಪ್ರಣೀತಾ ಸುಭಾಷ್ 'ಜರಾಸಂಧ', 'ಭೀಮಾ ತೀರದಲ್ಲಿ..', 'ಸ್ನೇಹಿತರು', 'ಮಿಸ್ಟರ್ 420', 'ಅಂಗಾರಕ', 'ಬ್ರಹ್ಮ', 'ಸೆಕೆಂಡ್ ಹ್ಯಾಂಡ್ ಲವ್ವರ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ತೆಲುಗು-ತಮಿಳಿನಲ್ಲೂ ಪ್ರಣೀತಾ ಬಿಸಿ

'ಶಗುನಿ', 'ಅತ್ತಾರಿಂಟಿಕಿ ದಾರೇದಿ', 'ರಭಸ', 'ಮಾಸ್' ಸೇರಿದಂತೆ ಅನೇಕ ತೆಲುಗು-ತಮಿಳಿನ ಹಿಟ್ ಚಿತ್ರಗಳಲ್ಲೂ ಪ್ರಣೀತಾ ನಾಯಕಿ ಆಗಿ ಅಭಿನಯಿಸಿದ್ದಾರೆ.

ಈಗ 'ಲೀಡರ್'

ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಿಜಿ ಇದ್ದರೂ, ನಟಿ ಪ್ರಣೀತಾ 'ಲೀಡರ್' ಚಿತ್ರಕ್ಕಾಗಿ ಕಾಲ್ ಶೀಟ್ ನೀಡಿದ್ದಾರೆ.

'ಲೀಡರ್' ನಲ್ಲಿ ವಿಜಯ್ ರಾಘವೇಂದ್ರ.!

'ಲೀಡರ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ವಿಜಯ ರಾಘವೇಂದ್ರ, ಗುರು ಜಗ್ಗೇಶ್ ಕೂಡ ಅಭಿನಯಿಸುತ್ತಿರುವುದು ವಿಶೇಷ.

ನಿರ್ದೇಶಕ ಯಾರು.?

'ರೋಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಹನಾ ಮೂರ್ತಿ 'ಲೀಡರ್' ಚಿತ್ರದ ನಿರ್ದೇಶಕ. ಅದೇ 'ರೋಸ್' ಚಿತ್ರಕ್ಕೆ ಬಂಡವಾಳ ಹಾಕಿದ್ದ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಈಗ 'ಲೀಡರ್' ಚಿತ್ರ ನಿರ್ಮಿಸುತ್ತಿದ್ದಾರೆ.

ಆಗಸ್ಟ್ ನಲ್ಲಿ ಚಿತ್ರೀಕರಣ

ವೀರ್ ಸಮರ್ಥ್ ಸಂಗೀತ ನೀಡುತ್ತಿರುವ 'ಲೀಡರ್' ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಮುಕ್ತಾಯವಾಗಿದೆ. ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

English summary
Kannada Actress Pranitha Subhash is paired opposite Kannada Actor Shiva Rajkumar in Kannada Movie 'Leader'. The movie is directed by Sahana Murthy of 'Rose' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada