Don't Miss!
- News
ಶಿಕ್ಷಕರಾಗಿ ಆಯ್ಕೆಯಾದರೂ ನೇಮಕಾತಿಯಲ್ಲಿ ಕಾನೂನು ತೊಡಕು, ಭವಿಷ್ಯದ ಆತಂಕದಲ್ಲಿ 13,363 ಅಭ್ಯರ್ಥಿಗಳು
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಈ ತಂಡವೇ ಗೆಲ್ಲಲಿದೆ ಎಂದ ಮೈಕಲ್ ವಾನ್
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೇಶದ ಒಳಗೂ ವೈರಿಗಳಿದ್ದಾರೆ: 'ಹಿಂದೂ ಭಯೋತ್ಪಾದನೆ' ಎಂದವರ ಬಗ್ಗೆ ಪ್ರಣಿತಾ ಕಿಡಿ
ಅಫ್ಘಾನ್ ಬೆಳೆವಣಿಗೆ ಕುರಿತಂತೆ ದೇಶದ ಒಳಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಅಫ್ಘಾನಿಸ್ತಾನದಲ್ಲಿನ ಜನಗಳ ಬಗ್ಗೆ ಕಾಳಜಿ ವಹಿಸಿ ಸಿನಿಮಾ ಸೆಲೆಬ್ರಿಟಿಗಳು ಮರುಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಫ್ಘಾನ್ ಉದಾಹರಣೆಯಾಗಿ ತೆಗೆದುಕೊಂಡು ಯಾವುದೇ ಧರ್ಮದ ಕರ್ಮಠ ಧರ್ಮವಾದಿಗಳು ಯಾವ ದೇಶಕ್ಕೂ ಹಿತವಲ್ಲ ಎನ್ನುತ್ತಾ ಆರ್‌ಎಸ್‌ಎಸ್ ಅನ್ನು ಉದಾಹರಣೆಯಾಗಿ ನೀಡಿ 'ಹಿಂದು ಭಯೋತ್ಪಾದನೆ' ಶಬ್ದಗಳನ್ನು ಬಳಸುತ್ತಿದ್ದಾರೆ. ಇದು ಹಲವರನ್ನು ಕೆರಳಿಸಿದೆ.
ಈ ಬಗ್ಗೆ ಕನ್ನಡದ ನಟಿ ಪ್ರಣಿತಾ ಸುಭಾಷ್ ಟ್ವೀಟ್ ಮಾಡಿದ್ದು, ಅಫ್ಘಾನ್ ಅನ್ನು ಉದಾಹರಣೆಯನ್ನಾಗಿರಿಸಿಕೊಂಡು 'ಹಿಂದು ಭಯೋತ್ಪಾದನೆ' ಬಗ್ಗೆ ಮಾತನಾಡುತ್ತಿರುವವರನ್ನು ಗುರಿಯಾಗಿಸಿ ಕಠುವಾದ ಮಾತುಗಳನ್ನು ಪ್ರಣಿತಾ ಸುಭಾಷ್ ಟ್ವಿಟ್ಟರ್‌ನಲ್ಲಿ ಆಡಿದ್ದಾರೆ.
''ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಹಿಂಸಾಚಾರವನ್ನು ಉದಾಹರಣೆಯಾಗಿ ನೀಡುತ್ತಾ 'ಹಿಂದೂ ಭಯೋತ್ಪಾದನೆ' ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. 'ಹಿಂದು ಭಯೋತ್ಪಾದನೆ' ಎಂಬ ತಮ್ಮ ಕಲ್ಪನೆಯನ್ನು ಸಾರ್ವಜನಿಕಗೊಳಿಸುವ ಯತ್ನ ಮಾಡುತ್ತಿದ್ದಾರೆ. ಭಾರತ ದೇಶವು ಎಚ್ಚರಿಕೆಯಿಂದರಬೇಕು, ವೈರಿಗಳು ದೇಶದ ಗಡಿಗಳ ಹೊರಗೆ ಮಾತ್ರವೇ ಇಲ್ಲ ದೇಶದ ಒಳಗೂ ಇದ್ದಾರೆ'' ಎಂದಿದ್ದಾರೆ ಪ್ರಣಿತಾ.

ಪ್ರಣಿತಾ ಟ್ವೀಟ್‌ಗೆ ಬೆಂಬಲ
ಪ್ರಣಿತಾರ ಈ ಟ್ವೀಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ಪ್ರಣಿತಾ ಧೈರ್ಯವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ. 'ಎಡಪಂಥೀಯರಿಗೆ ತಕ್ಕುದಾದ ಉತ್ತರ ನೀಡಿದ್ದೀರಿ' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಪ್ರಣಿತಾರ ಈ ಟ್ವೀಟ್‌ಗೆ ಬಹಳ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. 'ಮುಸ್ಲಿಂ ಭಯೋತ್ಪಾದನೆ' ವಿಷಯವನ್ನು ಮರೆಮಾಚಲು 'ಹಿಂದು ಭಯೋತ್ಪಾದನೆ' ಪದ ಬಳಸಲಾಗುತ್ತಿದೆ'' ಎಂದು ಸಹ ಕೆಲವರು ಪ್ರಣಿತಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆಯೂ ಟ್ವೀಟ್ ಮಾಡಿದ್ದ ಪ್ರಣಿತಾ
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಣಿತಾ ಸಾಮಾಜಿಕ ಜೀವನದಲ್ಲಿಯೂ ಬಹಳ ಸಕ್ರಿಯರಾಗಿದ್ದಾರೆ. ಈ ಹಿಂದೆ ಕೊರೊನಾ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ ಪ್ರಣಿತಾ, ಸೂಕ್ಷ್ಮ ವಿಷಯಗಳ ಬಗ್ಗೆಯೂ ಅಳುಕಿಲ್ಲದೆ ತಮ್ಮ ಅಭಿಪ್ರಾಯ ಹೇಳುತ್ತಿರುತ್ತಾರೆ. ಬಾಬ್ರಿ ಮಸೀದಿ ತೀರ್ಪು ಬಂದಾಗ ಟ್ವೀಟ್ ಮಾಡಿದ್ದ ಪ್ರಣಿತಾ, ''ಕರಸೇವಕರ ಮೇಲೆ ಪೊಲೀಸ್ ತಂಡ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು. ರಾಜಕೀಯ ನಾಯಕರನ್ನು ಬಂಧಿಸಿದಾಗ ಕಾನೂನಿನ ನಿಯಮ ಎಲ್ಲಿತ್ತು?, ಕ್ಷಮಿಸಿ ಆದರೆ ಮರೆಯಬೇಡಿ'' ಎಂದು ಟ್ವೀಟ್ ಮಾಡಿದ್ದರು. ಡಿಜೆ ಹಳ್ಳಿ ಪ್ರಕರಣವಾದಾಗಲೂ ಟ್ವೀಟ್ ಮಾಡಿದ್ದ ಪ್ರಣಿತಾ, ''ಡಿ.ಜೆ.ಹಳ್ಳಿಯಲ್ಲಿ ನಿನ್ನೆ ನಡೆದ ಘಟನೆಗಳನ್ನು ನಾನು ಖಂಡಿಸುತ್ತೇನೆ. ಪೊಲೀಸ್ ಸ್ಟೇಷನ್ ಹಾಗು ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನಾರ್ಹ!' ಎಂದು ಘಟನೆಯನ್ನು ವಿರೋಧಿಸಿದ್ದರು.

ಕನ್ನಡ ಶಾಲೆ ಉಳಿಸುವ ಅಭಿಯಾನಕ್ಕೆ ಜೊತೆ
ಪ್ರಣೀತಾ ಫೌಂಡೇಶನ್ ನಡೆಸುತ್ತಿರುವ ನಟಿ ಪ್ರಣಿತಾ ಫೌಂಡೇಶನ್ ಮುಖಾಂತರ ಸಾಕಷ್ಟು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಕನ್ನಡ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪ್ರಣಿತಾ ಶಾಲೆ ಉಳಿವಿನ ಅಭಿನಯಾನಕ್ಕೆ ಕೈ ಜೋಡಿಸಿದ್ದಾರೆ. ಇತ್ತೀಚೆಗಷ್ಟೆ ನಟ ವಿಷ್ಣುವರ್ಧನ ಕಲಿತ ಶಾಲೆ ಸಂಕಷ್ಟಕ್ಕೆ ಸಿಲುಕಿದ್ದಾಗ ವಿಷ್ಣುವರ್ಧನ್ ಕಲಿತ ಶಾಲೆ ಉಳಿಸುವಂತೆ ಮನವಿ ಮಾಡಿದ್ದರು. ಕೋವಿಡ್ ಸಂಕಷ್ಟ ಸಮಯದಲ್ಲಿ ಸಾಕಷ್ಟು ನೆರವಿನ ಹಸ್ತವನ್ನು ಈ ನಟಿ ಚಾಚಿದ್ದರು.

ಪ್ರಣಿತಾ ನಟನೆಯ ಹಿಂದಿ ಸಿನಿಮಾಳು ಬಿಡುಗಡೆ
ದರ್ಶನ್ ಅಭಿಯನದ 'ಪೋಕಿರಿ' ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಪ್ರಣಿತಾ, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಪ್ರಣಿತಾ ನಟಿಸಿರುವ ಹಿಂದಿ ಸಿನಿಮಾ 'ಭುಜ್' ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಪ್ರಣಿತಾ ನಟಿಸಿದ್ದ ಮತ್ತೊಂದು ಹಿಂದಿ ಸಿನಿಮಾ 'ಹಂಗಾಮಾ 2' ಸಹ ಕೆಲವೇ ದಿನಗಳ ಹಿಂದೆ ಬಿಡುಗಡೆ ಅಗಿತ್ತು. ಪ್ರಣಿತಾ ಸದ್ಯಕ್ಕೆ ಕನ್ನಡದ 'ರಾಮನ ಅವತಾರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೇ ತಿಂಗಳಲ್ಲಿ ಪ್ರಣಿತಾ ಉದ್ಯಮಿ ನಿತಿನ್ ರಾಜಾ ಎಂಬುವರೊಟ್ಟಿಗೆ ಸರಳವಾಗಿ ವಿವಾಹವಾಗಿದ್ದಾರೆ.