ಪವರ್ ಸ್ಟಾರ್ 25ನೇ ಸಿನಿಮಾ ಯಾವುದು ಗೊತ್ತಾ?
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯರ್ರಾಬಿರ್ರಿ ಸಿನಿಮಾ ಮಾಡಲ್ಲ. ಶಿವಣ್ಣನ ಹಾಗೆ ಇಷ್ಟವಾದವ್ರಿಗೆಲ್ಲ ಇಷ್ಟವಾದಷ್ಟು ದಿನದ ಕಾಲ್ ಶೀಟ್ ಕೊಡಲ್ಲ. ಹತ್ತು ವರ್ಷದಲ್ಲಿ ಐವತ್ತರವತ್ತು ಸಿನಿಮಾ ಮಾಡಿರೋರ ಮುಂದೆ 12 ವರ್ಷಗಳಲ್ಲಿ ಪುನೀತ್ ಮಾಡಿರೋ ಸಿನಿಮಾಗಳ ಸಂಖ್ಯೆ ಕೇವಲ 23 ಅಂದ್ರೆ ಎಲ್ಲರಿಗೂ ಅಚ್ಚರಿಯಾಗುತ್ತೆ.
ಆದರೆ ಈಗ ಶುರುವಾಗಿರೋ ಕುತೂಹಲ ಅಂದ್ರೆ ಪುನೀತ್ 25ನೇ ಸಿನಿಮಾ ಯಾವುದು ಅನ್ನೋದು. ಸಿಲ್ವರ್ ಜ್ಯುಬಿಲಿ, ಗೋಲ್ಡನ್ ಜ್ಯುಬಿಲಿ ಪ್ಲಾಟಿನಂ ಜ್ಯುಬಿಲಿ ಅನ್ನೋ ಮೈಲಿಗಲ್ಲುಗಳಲ್ಲಿ ಪುನೀತ್ ಮೊದಲ ಮೈಲುಗಲ್ಲು ತಲುಪಿದ್ದಾರೆ.

ಈಗಿರೋ ಲೆಕ್ಕಾಚಾರದ ಪ್ರಕಾರ ಪುನೀತ್ ಒಪ್ಪಿಕೊಂಡಿರೋದು 'ಉಗ್ರಂ' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನ. ಚಿತ್ರಕ್ಕೆ 'ಆಹ್ವಾನ' ಅನ್ನೋ ಟೈಟಲ್ ಇಟ್ಟಿದ್ದಾಗಿದೆ. ಪ್ರಶಾಂತ್ ನೀಲ್ ನಿರ್ದೇಶಕನಾಗಿ ಈಗಾಗಲೆ ಗಾಂಧಿನಗರದ ಗಮನಸೆಳೆದವರು.
ಆದರೆ ಇದರ ನಡುವೆ ಪುನೀತ್ 25ನೇ ಸಿನಿಮಾಗೆ ಹೊಸಬರಿಗೆ ಅವಕಾಶ ಕೊಡ್ತಾರಾ ಅನ್ನೋ ಕುತೂಹಲವೂ ಗಾಂಧಿನಗರದಲ್ಲಿದೆ. ಇನ್ನು 25ನೇ ಸಿನಿಮಾ ಹೋಂ ಪ್ರೊಡಕ್ಷನ್ ವಜ್ರೇಶ್ವರಿ ಕಂಬೈನ್ಸ್ ನಲ್ಲೇ ಬರೋದು ಪಕ್ಕಾ.


Click it and Unblock the Notifications











