For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ಘಮಘಮ ಅಂತಿದ್ದಾಳಾ? ಸಂಜನಾ ಹೆಸರೇಳಿ ಬಾಯಿ ಗಲೀಜು ಮಾಡಿಕೊಳ್ಳಲ್ಲ: ಪ್ರಶಾಂತ್ ಸಂಬರ್ಗಿ

  |

  ಸ್ಯಾಂಡಲ್ ವುಡ್ ಡ್ರಗ್ ವಿವಾದಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ, ಸಿನಿಮಾ ವಿತರಕ ಪ್ರಶಾಂತ್ ಸಂಬರ್ಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಕರ್ನಾಟಕದ ಕೆಲವು ರಾಜಕಾರಣಿ ಹಾಗೂ ಕನ್ನಡ ಸಿನಿಮಾ ಕಲಾವಿದರಿಗೂ ಬಾಲಿವುಡ್ ಡ್ರಗ್ ಕಿಂಗ್‌ಪಿನ್ ಇಂಮ್ತಿಯಾಜ್ ಖಾತ್ರಿ ಜೊತೆ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ.

  Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Filmibeat Kannada

  ಜೊತೆಗೆ ಕನ್ನಡ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ಯಾರು? ಚಿತ್ರರಂಗಕ್ಕೆ ಅವರ ಕೊಡುಗೆ ಏನು ಎಂದು ಫಿಲ್ಮ್ ಚೇಂಬರ್ ಸದಸ್ಯರ ಪ್ರಶ್ನೆಗೆ ತಿರುಗೇಟು ನೀಡುವ ಸಂದರ್ಭಲ್ಲಿ ಈ ಇಬ್ಬರು ನಟಿಯರ ಬಗ್ಗೆ ಪ್ರಶಾಂತ್ ಸಂಬರ್ಗಿ ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ...

  ಇಂದ್ರಜಿತ್ ಲಂಕೇಶ್ ವಿಚಾರಣೆ ಅಂತ್ಯ: ನಾನೊಬ್ಬ ಮೆಸೆಂಜರ್ ಅಷ್ಟೇಇಂದ್ರಜಿತ್ ಲಂಕೇಶ್ ವಿಚಾರಣೆ ಅಂತ್ಯ: ನಾನೊಬ್ಬ ಮೆಸೆಂಜರ್ ಅಷ್ಟೇ

   ರಾಗಿಣಿ ಏನ್ ಘಮಘಮ ಅಂತ ಸ್ಮೆಲ್ ಬರ್ತಿದ್ದಾಳಾ?

  ರಾಗಿಣಿ ಏನ್ ಘಮಘಮ ಅಂತ ಸ್ಮೆಲ್ ಬರ್ತಿದ್ದಾಳಾ?

  ಪತ್ರಿಕಾಗೋಷ್ಠಿಯಲ್ಲಿ ನಟಿ ಸಂಜನಾ ಮತ್ತು ನಟಿ ರಾಗಿಣಿ ಬಗ್ಗೆ ಮಾತನಾಡಿರುವ ಸಂಬರ್ಗಿ "ನಟಿ ರಾಗಿಣಿ ಏನು ತುಂಬಾ ಘಮಘಮ ಅಂತ ಸ್ಮೆಲ್ ಬರ್ತಿದ್ದಾಳಾ? ಎಂದು ಕೇಳಿದ್ದಾರೆ. ಯುಬಿ ಸಿಟಿಯಲ್ಲಿ RTO ಅಧಿಕಾರಿ ರಿವಿಶಂಕರ್ ಜೊತೆ ಓಡಾಡುತ್ತಿರುವುದನ್ನು ನೋಡಿದ್ದೇನೆ, ಮದುವೆ ಆಗ್ತಾರೆ ಅಂತ ಹೇಳಲಾಗಿತ್ತು" ಎಂದು ರಾಗಿಣಿ ಬಗ್ಗೆ ಮಾತನಾಡಿದ್ದಾರೆ.

   ಸಂಜನಾ ಹೆಸರು ಹೇಳಿ ಬಾಯಿ ಗಲೀಜು ಮಾಡಿಕೊಳ್ಳಲ್ಲ

  ಸಂಜನಾ ಹೆಸರು ಹೇಳಿ ಬಾಯಿ ಗಲೀಜು ಮಾಡಿಕೊಳ್ಳಲ್ಲ

  ಇನ್ನೂ ನಟಿ ಸಂಜನಾ ಬಗ್ಗೆ ಮಾತನಾಡಿದ ಸಂಬರ್ಗಿ, "ಗಬ್ಬುನಾಥ, ಸಂಜನಾ ಯಾವ ಮಟ್ಟಕ್ಕೆ ಇದ್ದಾರೆ ಎನ್ನುವುದು ಇಡೀ ಇಂಡಸ್ಟ್ರಿಗೆ ಗೊತ್ತಿದೆ, ಅವರ ಹೆಸರನ್ನು ಹೇಳಿ ನನ್ನ ಬಾಯಿ ಗಲೀಜು ಮಾಡಿಕೊಳ್ಳಲು ಇಷ್ಟವಿಲ್ಲ. ದಯವಿಟ್ಟು ಬಿಡಿ" ಎಂದಿದ್ದಾರೆ.

  ಸಿಸಿಬಿ ವಿಚಾರಣೆಗೆ ಗೈರಾದ ನಟಿ ರಾಗಿಣಿಸಿಸಿಬಿ ವಿಚಾರಣೆಗೆ ಗೈರಾದ ನಟಿ ರಾಗಿಣಿ

   ಸಂಬರ್ಗಿ, ಸಂಜನಾರನ್ನು ಮೊದಲು ಭೇಟಿಯಾಗಿದ್ದೆಲ್ಲಿ

  ಸಂಬರ್ಗಿ, ಸಂಜನಾರನ್ನು ಮೊದಲು ಭೇಟಿಯಾಗಿದ್ದೆಲ್ಲಿ

  ಇದೇ ಸಮಯದಲ್ಲಿ ನಟಿ ಸಂಜನಾ ಅವರನ್ನು ಮೊದಲ ಬಾರಿಗೆ ಭೇಟಿಯಾದ ಬಗ್ಗೆಯೂ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ. "2005ರಲ್ಲಿ ಬಂದ ರಮೇಶ್ ಅರವಿಂದ ನಟನೆಯ 'ಬಿಸಿಬಿಸಿ' ಸಿನಿಮಾ ಸಮಯದಲ್ಲಿ ನಾಯಕಿಗಾಗಿ ನಟಿ ಸಂಜನಾ ಅವರನ್ನು ಸಿಂದ್ ಶಾಲೆಯಲ್ಲಿ ಭೇಟಿ ಮಾಡಿದೆವು. ಸಂಜನಾ ಅವರನ್ನು ಸಿನಿಮಾರಂಗಕ್ಕೆ ಮೊದಲು ಪರಿಚಯಿಸಬೇಕೆನ್ನುವುದು ಇತ್ತು. ಸಂಜನಾ ಇನ್ನೂ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ಹೋಗಿ ಕರೆದುಕೊಂಡು ಬಂದ್ವಿ. ಆದರೆ ಚಿಕ್ಕವಳು ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಅವಕಾಶ ಕೊಟ್ಟಿಲ್ಲ" ಎಂದು ಹೇಳಿದ್ದಾರೆ.

   ರಾಗಿಣಿಗೆ ನೋಟಿಸ್

  ರಾಗಿಣಿಗೆ ನೋಟಿಸ್

  ಚಿತ್ರರಂಗಕ್ಕೆ ನಶೆಯ ಜಾಲದ ನಂಟು ಆರೋಪದಡಿ ಸಿಸಿಬಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈಗಾಗಲೇ ಸಿಸಿಬಿ ಇಬ್ಬರನ್ನು ವಶಕ್ಕೆ ಪಡೆದಿದ್ದು, ನಟಿ ರಾಗಿಣಿಗೆ ನೋಟಿಸ್ ನೀಡಿದೆ. ಇಂದು (ಸೆಪ್ಟಂಬರ್ 3) ರಾಗಿಣಿ ಸಿಸಿಬಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಸೋಮವಾರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ. ಇನ್ನೂ ನಟಿ ಸಂಜನಾ ಸ್ನೇಹಿತ ಎನ್ನಲಾಗಿರುವ ರಾಹುಲ್‌ನನ್ನು ಸಹ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

  English summary
  Social Activist Prashanth Sambargi speak about Actress Sanjana And Ragini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X