»   » 'ಪ್ರಸಿದ್ಧಿ ಚಿಟ್ ಫಂಡ್'ನಿಂದ ನಟಿ ಸಂಜನಾಗೆ 28 ಲಕ್ಷ ವಂಚನೆ.!

'ಪ್ರಸಿದ್ಧಿ ಚಿಟ್ ಫಂಡ್'ನಿಂದ ನಟಿ ಸಂಜನಾಗೆ 28 ಲಕ್ಷ ವಂಚನೆ.!

Posted By:
Subscribe to Filmibeat Kannada

'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಎಂಬ ಕಂಪನಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದೆ ಎಂದು ನಟಿ ಸಂಜನಾ ಆರೋಪಿಸಿದ್ದಾರೆ. ಸುಮಾರು 26 ರಿಂದ 28 ಲಕ್ಷ ಹಣ ವಂಚನೆ ಮಾಡಿದ್ದಾರೆ ಎಂದು ಸಂಜನಾ ಹೇಳುತ್ತಿದ್ದಾರೆ.

ಮಲ್ಲೇಶ್ವರಂನಲ್ಲಿರುವ 'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಕಂಪನಿಯನ್ನ ಮಹೇಶ್ ಮತ್ತು ದಂಪತಿ ನಡೆಸುತ್ತಿದ್ದರು. ಸುಮಾರು 2 ವರ್ಷದಿಂದ ನಮ್ಮ ತಂದೆ-ತಾಯಿಯ ಹೆಸರಿನಲ್ಲಿ ಹಣ ಕಟ್ಟುತ್ತಿದ್ದೇನೆ. ತಿಂಗಳಿಗೆ 50 ರಿಂದ 60 ಸಾವಿರ ಹಣ ಕಟ್ಟಿದ್ದೇನೆ. ಈಗ ಅದರ ಮೊತ್ತ ಸುಮಾರು 26 ರಿಂದ 28 ಲಕ್ಷ ಆಗಿದೆ. ಆದ್ರೆ, ಈ ಹಣವನ್ನ ವಾಪಸ್ ಕೊಡದೆ ಚಿಟ್ ಫಂಡ್ ಮಾಲೀಕರು ಮೋಸ ಮಾಡುತ್ತಿದ್ದಾರೆ ಎಂದು ಸಂಜನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Prasiddhi Chit Funds Cheats to Actress Sanjjana

ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳ ಹಿಂದಯೇ ದೂರು ದಾಖಲಿಸಲಾಗಿದೆ. ಆದ್ರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಚಿಟ್ ಫಂಡ್ ಮಾಲೀಕರಿಗೆ ಸಮಯಾವಕಾಶ ನೀಡಿದ್ದರು. ಈಗ ಅವರು ನಾಪತ್ತೆಯಾಗಿದ್ದಾರೆ ಎಂದು ಸಂಜನಾ ತಿಳಿಸಿದ್ದಾರೆ.

ಸಂಜನಾ ಸೇರಿದಂತೆ ಸುಮಾರು 300 ಹೂಡಿಕೆದಾದರು ಈ ಚಿಟ್ ಪಂಡ್ ನಲ್ಲಿ ಹಣ ಕಟ್ಟಿದ್ದರು. ಈಗ ಎಲ್ಲರೂ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದ್ರೆ, 'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಮಾಲೀಕರಾದ ನಿರೂಪಮ ಮಹೇಶ್ ದಂಪತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಎಫ್.ಐ.ಆರ್ ದಾಖಲಿಸಿಕೊಂಡಿರುವ ಪೊಲೀಸರು ಚಿಟ್ ಫಂಡ್ ಮಾಲೀಕರಿಗಾಗಿ ಹುಡುಕಾಟ ಆರಂಭಿಸಿದೆ.

English summary
Kannada actress Sanjjana has alleged that a Chit fund company named Prasiddhi in Malleshwaram, Bengaluru has cheated her Rs. 28 lakhs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada