»   » ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಫೋಟಕ ಸುದ್ದಿ!

ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಫೋಟಕ ಸುದ್ದಿ!

Posted By:
Subscribe to Filmibeat Kannada

'ಬಿಗ್ ಬಾಸ್' ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಥಮ್ ಆತ್ಮಹತ್ಯೆಗೆ ಯತ್ನಿಸಲು ಸ್ನೇಹಿತ ಲೋಕೇಶ್ ನೇರ ಕಾರಣ ಎಂಬುದನ್ನ ಪ್ರಥಮ್, ಆತ್ಮಹತ್ಯೆ ಯತ್ನಕ್ಕೂ ಮೊದಲು ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದರು.

ಆದ್ರೆ, ಈ ಆರೋಪವನ್ನ ಪ್ರಥಮ್ ಸ್ನೇಹಿತ ಲೋಕೇಶ್ ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿದ್ದ ನಂತರ ಈ ಕುರಿತು ಟಿವಿ-9 ಕನ್ನಡ ಮಾಧ್ಯಮಕ್ಕೆ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ, ಪ್ರಥಮ್ ಬಗ್ಗೆ ಲೋಕೇಶ್ ಹೇಳಿದ್ದೇನು? ಮುಂದೆ ಓದಿ.....[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

ಲೋಕೇಶ್ ಹೇಳಿದ್ದೇನು?

''ಪ್ರಥಮ್ ಬದುಕಿದ್ದಾನೆ ಎಂಬುದು ನನಗೂ ಗೊತ್ತು. ಅವನು ನನ್ನನ್ನು ಭಯಪಡಿಸುವುದಕ್ಕೆ ಮಾಡಿರುವುದು ಅಷ್ಟೇ. ಇದು ಕೇವಲ ನಾಟಕ. ಕನ್ನಡಿಗರು ಪ್ರಥಮ್ ಅವರ ಒಂದು ಮುಖವನ್ನ ಮಾತ್ರ ನೋಡಿದ್ದೀರಾ. ಅವನು ಏನು ಎಂಬುದು ನಮಗೆ ಗೊತ್ತಿದೆ'' - ಲೋಕೇಶ್, ಪ್ರಥಮ್ ಸ್ನೇಹಿತ.[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ನನ್ನ ಮೇಲೆ ಹಲ್ಲೆ ಮಾಡಿದ್ದ!

''ಪ್ರಥಮ್ ನಿನ್ನೆ ರಾತ್ರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮಾತನಾಡಲು ಕರೆಯಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ'' - ಲೋಕೇಶ್, ಪ್ರಥಮ್ ಸ್ನೇಹಿತ

ಪೊಲೀಸ್ ಠಾಣೆಯಲ್ಲಿ ದೂರು

''ಪ್ರಥಮ್ ನನ್ನ ಮೇಲೆ ಹಲ್ಲೆ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ'' - ಲೋಕೇಶ್, ಪ್ರಥಮ್ ಸ್ನೇಹಿತ

ಅವನ ದುಡ್ಡು, ಅವನ ಇಷ್ಟ!

''ಪ್ರಥಮ್ ಗೆ ನಾನು ಕೂಡ ಹೇಳಿದ್ದೀನಿ. ಪ್ರಥಮ್ ನಿನ್ನ ಗೆಲುವಿಗೆ ಜನರು ಕಾರಣ. ಅವರಿಗೆ ನಿನ್ನ ಕೇಳೊ ಹಕ್ಕು ಕೂಡ ಇದೆ ಅಂತ. ಅದು ಅವನು ಗೆದ್ದಿರುವ ಹಣ. ಅವನ ಇಷ್ಟ. ಅವನು ದುಡಿದಿರುವುದು, ಅವನು ಏನು ಬೇಕಾದ್ರೂ ಮಾಡಬಹುದು''- ಪ್ರಥಮ್ ಸ್ನೇಹಿತ ಲೋಕೇಶ್

ಪ್ರಥಮ್ ಪರ ಪಬ್ಲಿಸಿಟಿ ಕೊಟ್ಟಿದ್ದು ನಾನು!

ಪ್ರಥಮ್ 'ಬಿಗ್ ಬಾಸ್'ಗೆ ಹೋದಾಗ ಪ್ರಥಮ್ ವಿಚಾರದಲ್ಲಿ ಫೇಸ್ ಬುಕ್ ನಲ್ಲಿ ಪಬ್ಲಿಸಿಟಿ ಕೊಟ್ಟಿದ್ದು ನಾನು. ಅವನ ಪರವಾಗಿ ಪ್ರಚಾರ ಮಾಡಿದ್ದು ನಾನು. ಸ್ನೇಹಿತ ಎಂಬ ಕಾರಣದಿಂದ ಇದೆಲ್ಲ ಮಾಡಿದ್ದೆ. ಪ್ರಥಮ್ ಹೆಸರು ಹೇಳಿಕೊಂಡು ಪಬ್ಲಿಸಿಟಿ ಪಡೆದುಕೊಳ್ಳುವ ದುರುದ್ದೇಶ ನನಗಿಲ್ಲ''- ಪ್ರಥಮ್ ಸ್ನೇಹಿತ ಲೋಕೇಶ್

ಬ್ಲ್ಯಾಕ್ ಮೇಲ್ ಮಾಡಿದ್ದ!

''ನಾನು ಫೇಸ್ ಬುಕ್ ನಲ್ಲಿ ಹಾಕಿರುವ ವಿಡಿಯೋವನ್ನ ತೆಗೆಯದೆ ಇದ್ದರೇ ನಾನು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅದರಲ್ಲಿ ನಿನ್ನ ಹೆಸರು ಬರೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿ ಹೋಗಿದ್ದ'' ಎಂದು ಲೋಕೇಶ್ ತಿಳಿಸಿದ್ದಾರೆ.

ಇಬ್ಬರ ಜಗಳಕ್ಕೆ ಕಾರಣವೇನು?

ಪ್ರಥಮ್ ಮತ್ತು ಸ್ನೇಹಿತ ಲೋಕೇಶ್ ಅವರ ಮಧ್ಯೆ ಹಲವು ದಿನಗಳಿಂದ ಮನಸ್ತಾಪ ಉಂಟಾಗಿತ್ತು. ಈ ಸಂಬಂಧ ಫೋನ್ ನಲ್ಲಿ ಕೂಡ ಇಬ್ಬರು ಜಗಳವಾಡಿಕೊಂಡಿದ್ದರು. ಈ ವೇಳೆ ಪ್ರಥಮ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಆಡಿಯೋವನ್ನ ಲೋಕೇಶ್ ಅವರು ಫೇಸ್ ಬುಕ್ ನಲ್ಲಿ ಅಪ್ ಲೌಡ್ ಮಾಡಿದ್ದರು. ಇದರಿಂದ ಪ್ರಥಮ್ ಬೇಸರಗೊಂಡಿದ್ದರು ಎನ್ನಲಾಗಿದೆ.

ಪ್ರಥಮ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತಿಳಿದುಕೊಳ್ಳಲು ಮುಂದೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ....[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

English summary
Pratham Friend Lokesh Gives Reaction on Pratham Suicide Attempt Incident

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada