»   » ಭಾವ ಯಶ್ ಗೆ ಬಾಮೈದ ಪ್ರಥಮ್ ನಿಂದ ಸಂತಾನ ಸಲಹೆ

ಭಾವ ಯಶ್ ಗೆ ಬಾಮೈದ ಪ್ರಥಮ್ ನಿಂದ ಸಂತಾನ ಸಲಹೆ

Posted By:
Subscribe to Filmibeat Kannada

ಪ್ರಥಮ್ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಾಮೈದ ಆಗೋದಕ್ಕೆ ಹೇಗೆ ಸಾಧ್ಯ? ಅವರು ಬಿಡಿ.. ಎಲ್ಲರಿಗೂ ನೆಂಟರಾಗಿ ಬಿಡುತ್ತಾರೆ ಅನ್ನೋದು ಗೊತ್ತಿರುವ ವಿಚಾರ. ರಾಧಿಕಾ ಪಂಡಿತ್ ಅವರಿಗೆ ಹುಟ್ಟುಹಬ್ಬದ ದಿನ ಶುಭಾಶಯ ಹೇಳುವಾಗಲೇ ರಾಧಿಕಾ ನನಗೆ ಅಕ್ಕ ಎಂದು ಘೋಷಣೆ ಮಾಡಿದ್ದರು ನಟ ಪ್ರಥಮ್.

ಈಗ ಅದೇ ಪ್ರಥಮ್ ಯಶ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನ ಕೋರಿದ್ದಾರೆ. ತಮ್ಮ ಫೇಸ್ ಬುಕ್ ನಲ್ಲಿ ವಿಭಿನ್ನವಾಗಿ ವಿಷ್ ಮಾಡಿರುವ ಪ್ರಥಮ್ ರಾಧಿಕಾ ಮತ್ತು ರಾಕಿಂಗ್ ಸ್ಟಾರ್ ಗೆ ಕೆಲವು ಸಲಹೆಗಳನ್ನ ನೀಡಿದ್ದಾರೆ.

ಯಶ್ ಹೊಸ ಕಾರನ್ನ ಮೊದಲು ಓಡಿಸೋದು ಇವರೇ

ಸಲಹೆಗಳ ಮೊದಲ ಪಟ್ಟಿಯಲ್ಲಿರುವುದು ಸಂತಾಸ ಸಲಹೆ. ನಿನ್ನೆಯಿಂದ ಎಲ್ಲಾ ವಾಹಿನಿಗಳ ಸಂದರ್ಶನದಲ್ಲಿ ಇದೇ ಪ್ರಶ್ನೆಯನ್ನ ಯಶ್ ಅವರಿಗೆ ಕೇಳಿದ್ದರು. ಈಗ ಪ್ರಥಮ್ ಇಬ್ಬರಿಗೂ ಸ್ಪೆಷಲ್ ಆಗಿ ಸಂತಾನ ಸಲಹೆ ಕೊಟ್ಟಿದ್ದಾರೆ. ಅದು ಹೇಗೆ? ಯಾವ ರೀತಿಯಲ್ಲಿ ಪ್ರಥಮ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಮುಂದೆ ಓದಿ.

ಪ್ರಥಮ್ ರಿಂದ ಯಶ್ ದಂಪತಿಗೆ ಸಂತಾನ ಸಲಹೆ

ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯದ ಜೊತೆ ಪ್ರಥಮ್ ಸಂತಾನ ಸಲಹೆ ನೀಡಿದ್ದಾರೆ. "Happy birthday Yash ಭಾವ. ನೀವ್ ಬರೋ ತನಕ ಮಾತ್ರ ಬೇರೇಯವರ ಹವಾ... ನೀವ್ ಬಂದಮೇಲೆ ನಿಮ್ಮದೇ ಹವಾ... ನಿಮ್ಮ ಜೊತೆಲಿ ನಾನಿದ್ರೆ ನನ್ನದು ಅಲ್ಪಸ್ವಲ್ಪ ಹವಾ... ಆದಷ್ಟು ಬೇಗ ಮರಿ ಯಶ್(junior Yash)
ಅಥವಾ ಜೂನಿಯರ್ Radhika Pandit ಬರಲಿ"

ಅವಳಿ-ಜವಳಿ ಮಕ್ಕಳಾಗಲಿ ಎಂದು ವಿಷ್

ಜ್ಯೂನಿಯರ್ ಯಶ್ ಅಥವಾ ಜ್ಯೂನಿಯರ್ ರಾಧಿಕಾ ಪಂಡಿತ್ ಬರಲಿ. ಇಲ್ಲಾ ಅಂದರೆ ಅವಳಿ-ಜವಳಿ ಮಕ್ಕಳಾದರೂ ಇನ್ನೂ ಖುಷಿ ಎಂದಿದ್ದಾರೆ ನಟ ಪ್ರಥಮ್

ನನಗೊಂದು ಕಾರ್ ಕೊಡಿ ಎಂದ ಪ್ರಥಮ್

ಮೂರು ಕಾರುಗಳನ್ನ ಒಟ್ಟಿಗೆ ಖರೀದಿ ಮಾಡಿದ ಯಶ್ ಅವರಿಗೆ ಒಂದು ಕಾರ್ ನನಗೆ ನೀಡಿ ಎಂದು ಕೇಳಿದ್ದಾರೆ ಪ್ರಥಮ್. "ಅದ್ಸರಿ ಹೊಸ ಕಾರ್ ತಗೊಂಡ್ರಲ್ಲ ಹಳೇ ಕಾರ್ ನನಗೆ ಕೊಟ್ಬಿಡಿ ಭಾವ. ಎಲ್ಲರೂ ಮದರ್ gift ಅಂತ ಹಾಕಿದ್ರೆ ನಾನು "ಭಾವನ ಗಿಫ್ಟ್" ಅಂತ ಹಾಕೊಂಡು ನಿಮ್ಮ ಕಾರ್ ನಾನಿಟ್ಕೋತಿನಿ' ಎಂದಿದ್ದಾರೆ.

ಶಾಕಿಂಗ್ ಸ್ಟಾರ್ ಪ್ರಥಮ್

ಹೊಸ ಕಾರ್ ನಲ್ಲಿ ರಾಕಿಂಗ್ ಸ್ಟಾರ್, ನಿಮ್ಮ ಕಾರು ನನಗೆ ಕೊಟ್ಟರೆ ಅದನ್ನ ನಾನು ಇಟ್ಕೊಂಡು ಶಾಕಿಂಗ್ ಸ್ಟಾರ್ ಆಗುತ್ತೀನಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಪ್ರಥಮ್. ಒಟ್ಟಾರೆ ವಿಭಿನ್ನವಾಗಿ ವಿಷ್ ಮಾಡಿರೋ ಪ್ರಥಮ್ ಸ್ಟೈಲ್ ಸಾಕಷ್ಟು ಜನರಿಗೆ ಇಷ್ಟವಾಗಿದೆ.

English summary
Actor Pratham birthday wishes to Rocking star Yash. Pratham has advised to Yash and Radhika Pandit to have a baby.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X