For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಗೆ 'ಬಂಗಾರ'ದ ಉಡುಗೊರೆ ನೀಡಿದ ಪ್ರಥಮ

  By Pavithra
  |
  ಪವರ್ ಸ್ಟಾರ್ ಗೆ 'ಬಂಗಾರ'ದ ಉಡುಗೊರೆ ನೀಡಿದ ಪ್ರಥಮ | Oneindia Kannada

  ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರ ಮಧ್ಯೆ ಗುರುತಿಸಿಕೊಂಡಿರುವ ನಟ, ನಿರ್ದೇಶಕ ಪ್ರಥಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲ ಒಂದು ಕೆಲಸದ ಮೂಲಕ ಪ್ರಥಮ್ ಜನರ ಗಮನ ಸೆಳೆಯುತ್ತಲೇ ಇರುತ್ತಾರೆ. ಅದೇ ರೀತಿಯಲ್ಲಿ ಪ್ರಥಮ್ ಇಂದು ಪುನೀತ್ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡುವ ಮೂಲಕ ಹೊಸ ಸುದ್ದಿ ಹುಟ್ಟುಹಾಕಿದ್ದಾರೆ.

  ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸ್ಟಾರ್ ಹುಟ್ಟುಹಬ್ಬವಾದರೇ ಅವರಿಗೆ ಪ್ರಥಮ್ ತಮ್ಮದೇ ಸ್ಟೈಲ್ ನಲ್ಲಿ ವಿಷ್ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಆ ಶುಭಾಶಯದ ಬಗ್ಗೆ ಮಾತನಾಡುವ ಹಾಗೆ ಇರುತ್ತೆ. ಪ್ರಥಮ್ ಪವರ್ ಸ್ಟಾರ್ ಪುನೀತ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದರ ಜೊತೆಗೆ ವಿಭಿನ್ನವಾಗಿರುವ ಉಡುಗೊರೆಯನ್ನ ನೀಡಿದ್ದಾರೆ.

  ಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆ

  ಬಂಗಾರದ ಮನುಷ್ಯನ ಪುತ್ರನಿಗೆ ಪ್ರಥಮ್ ಮತ್ತೆ ಬಂಗಾರದ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ಬಾರಿಯೂ ಪ್ರಥಮ್ ಅಪ್ಪು ಅವರಿಗೆ ಚಿನ್ನ ಉಂಗುರವನ್ನ ನೀಡಿ ಶುಭ ಕೋರಿದ್ದರು. ಈ ಬಾರಿ ಚಿನ್ನದ ಲೇಪಿತ ವೆಂಕಟೇಶ್ವರ ದೇವರ ಫೋಟೋವನ್ನು ಕೊಟ್ಟಿದ್ದಾರೆ. ಪ್ರಥಮ್ ಜೊತೆಯಲ್ಲಿ ಸಾರಾ ಗೋವಿಂದು ಹಾಗೂ ಪುತ್ರ ಅನೂಪ್ ಕೂಡ ಪವರ್ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ.

  ಅಪ್ಪು ಪ್ರಥಮ್ ಅವರ ಉಡುಗೊರೆಯನ್ನ ಸ್ವೀಕರಿಸಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಪುನೀತ್, ಪ್ರಥಮ್ ಅವರಿಗೆ ಶೋ ನಲ್ಲಿ ಹಾಕಿಕೊಂಡಿದ್ದ ಬ್ಲೇಜರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

  English summary
  Kannada actor Pratham has been given gold-plated Venkateswara god photo to Puneeth Rajkumar for his birthday. last year pratham gave gold ring for Appu

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X