»   » ಮಗನ ಪರಿಸ್ಥಿತಿ ಕಂಡು ದುಃಖತಪ್ತರಾದ ಪ್ರಥಮ್ ತಂದೆ ಮಲ್ಲಣ್ಣ

ಮಗನ ಪರಿಸ್ಥಿತಿ ಕಂಡು ದುಃಖತಪ್ತರಾದ ಪ್ರಥಮ್ ತಂದೆ ಮಲ್ಲಣ್ಣ

Posted By:
Subscribe to Filmibeat Kannada

'ಒಳ್ಳೆ ಹುಡುಗ' ಅಂತ ಸ್ವಯಂ ಬಿರುದು ಕೊಟ್ಟುಕೊಂಡಿರುವ ಪ್ರಥಮ್ ಇಂದು ಮುಂಜಾನೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ನೇಹಿತರಿಗೆ ಸುದ್ದಿ ತಲುಪಿ, ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಪ್ರಥಮ್ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು.[ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು]

ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಐಸಿಯು ನಲ್ಲಿ ಪ್ರಥಮ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗನ ಈ ಪರಿಸ್ಥಿತಿ ತಿಳಿದ ತಕ್ಷಣ ಪ್ರಥಮ್ ತಂದೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಥಮ್ ತಂದೆ ಮಲ್ಲಣ್ಣ

ಮಗ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಸುದ್ದಿ ತಿಳಿದ ಕೂಡಲೆ ಪ್ರಥಮ್ ತಂದೆ ಮಲ್ಲಣ್ಣ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿದರು.[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ದುಃಖತಪ್ತರಾದ ತಂದೆ ಮಲ್ಲಣ್ಣ

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಥಮ್ ರವರನ್ನ ನೋಡಿ ತಂದೆ ಮಲ್ಲಣ್ಣ ದುಃಖತಪ್ತರಾದರು.[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಫೋಟಕ ಸುದ್ದಿ!]

ತಂದೆ ಮಲ್ಲಣ್ಣ ಹೇಳಿದ್ದೇನು.?

''ವಿಷಯ ಗೊತ್ತಾದ ತಕ್ಷಣ ನನ್ನ ಕೈಯಲ್ಲಿ ನಂಬಲು ಆಗಲಿಲ್ಲ. ಯಾಕಂದ್ರೆ, ಪ್ರಥಮ್ ಆ ತರಹ ಸ್ವಭಾವದವನಲ್ಲ'' ಅಂತ ಆಸ್ಪತ್ರೆಯಿಂದ ಹೊರಬಂದ ಮೇಲೆ ಮಾಧ್ಯಮಗಳ ಜೊತೆ ಮಲ್ಲಣ್ಣ ಮಾತನಾಡಿದರು.[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಮಗನ ಸ್ಥಿತಿ ಕಂಡು ನೋವಾಗಿದೆ

''ಮಾತನಾಡುವ ಸ್ಥಿತಿಯಲ್ಲಿ ಪ್ರಥಮ್ ಇಲ್ಲ. ಮಗ ಎಷ್ಟೊತ್ತಿಗೆ ಕಣ್ಣು ಬಿಟ್ಟು ನನ್ನ ಜೊತೆ ಮಾತನಾಡುತ್ತಾನೋ ಅಂತ ಕಾಯುತ್ತಿದ್ದೇನೆ. ಮಗನ ಸ್ಥಿತಿ ನೋಡಿ ನೋವಾಗಿದೆ'' ಎಂದು ಹೇಳಿ ಮಲ್ಲಣ್ಣ ದುಃಖತಪ್ತರಾದರು.[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ನಿನ್ನೆ ಸಂಜೆ ಮಗನೊಂದಿಗೆ ಮಾತನಾಡಿದ್ದೆ

''ಬಿಗ್ ಅಮೌಂಟ್ ರಿಲೀಸ್ ಮಾಡಿಸುವ ಸಲುವಾಗಿ ಪ್ಯಾನ್ ಕಾರ್ಡ್ ಗಾಗಿ ಊರಿಗೆ ಹೋಗಿದ್ದೆ. ನಿನ್ನೆ ಸಂಜೆ ಮಗನೊಂದಿಗೆ ಮಾತನಾಡಿದ್ದೆ. ಎರಡ್ಮೂರು ದಿನಗಳಲ್ಲಿ ಪ್ರಧಾನಿ ರವರನ್ನ ಭೇಟಿ ಮಾಡಿ ಯೋಧರಿಗೆ ಚೆಕ್ ನೀಡುವ ಬಗ್ಗೆ ಮಾತನಾಡಿದ್ದ. ನಂತರ ಹೀಗೆ ಮಾಡಿಕೊಂಡಿದ್ದಾನೆ'' - ಮಲ್ಲಣ್ಣ, ಪ್ರಥಮ್ ತಂದೆ.['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಪ್ರಥಮ್ ಆರೋಗ್ಯ ಸ್ಥಿತಿ ಈಗ ಹೇಗಿದೆ.?

ಪ್ರಥಮ್ ಆರೋಗ್ಯ ಸುಧಾರಿಸುತ್ತಿದೆ ಅಂತ ವೈದ್ಯರು ಹೇಳಿದ್ದಾರೆ ಎಂದು ಮಲ್ಲಣ್ಣ ಇದೇ ವೇಳೆ ನುಡಿದರು.

English summary
Bigg Boss Kannada 4 Winner Pratham admitted to Fortis Hospital, Bengaluru after attempting to commit suicide. Pratham's Father Mallanna visited Fortis Hospital, Bengaluru today (April 5th)
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada