»   » 'ಹುಚ್ಚ ವೆಂಕಟ್'ಗೆ ಆಕ್ಷನ್ ಕಟ್ ಹೇಳ್ತಾರಂತೆ 'ಒಳ್ಳೆ ಹುಡುಗ ಪ್ರಥಮ್'!

'ಹುಚ್ಚ ವೆಂಕಟ್'ಗೆ ಆಕ್ಷನ್ ಕಟ್ ಹೇಳ್ತಾರಂತೆ 'ಒಳ್ಳೆ ಹುಡುಗ ಪ್ರಥಮ್'!

Posted By:
Subscribe to Filmibeat Kannada

ಒಳ್ಳೆ ಹುಡುಗ ಪ್ರಥಮ್ ಮತ್ತು ಹುಚ್ಚ ವೆಂಕಟ್ ಅವರ ಬಗ್ಗೆ ಬರಿ ಕಾಂಟ್ರವರ್ಸಿ ಸುದ್ದಿಗಳನ್ನೇ ಓದಿ ಬೇಜಾರಾಗಿದ್ದರೇ, ಇವರಿಬ್ಬರ ಬಗ್ಗೆ ಒಂದೊಳ್ಳೆ ಸುದ್ದಿ ನಿಮಗಾಗಿ ಬಂದಿದೆ.

ಒಂದು ಸಮಯದಲ್ಲಿ ಜಗಳ, ಗಲಾಟೆ ಮಾಡಿಕೊಂಡಿದ್ದ ಹುಚ್ಚ ವೆಂಕಟ್ ಮತ್ತು 'ಬಿಗ್ ಬಾಸ್ ಕನ್ನಡ 4'' ವಿನ್ನರ್ ಪ್ರಥಮ್ ಈಗ ಒಂದಾಗಿದ್ದಾರೆ.['ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!]

ಶತ್ರುಗಳಂತಿದ್ದ ಇಬ್ಬರು ಸ್ನೇಹಿತರಾಗಿದ್ದು, ಅದೇ ಖುಷಿಯಲ್ಲಿ ಬೆಳ್ಳಿತೆರೆಯಲ್ಲು ಒಂದಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಹೌದು, ಇಂತಹದೊಂದು ಬ್ರೇಕಿಂಗ್ ನ್ಯೂಸ್ ಗೆ ಕಾರಣವಾಗಿದ್ದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಜೋಡಿ-2' ಕಾರ್ಯಕ್ರಮ. ಮುಂದೆ ಓದಿ....

'ಹುಚ್ಚ ವೆಂಕಟ್'ಗೆ ಪ್ರಥಮ್ ಆಕ್ಷನ್ ಕಟ್!

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಗೆ ಒಳ್ಳೆ ಹುಡುಗ ಪ್ರಥಮ್ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈ ಸುದ್ದಿಯನ್ನ ಸ್ವತಃ ಇಬ್ಬರು ರಿಯಾಲಿಟಿ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

'ದೇವ್ರವ್ನೆ ಬುಡು ಗುರು' ಚಿತ್ರದಲ್ಲಿ ವೆಂಕಟ್!

ಪ್ರಥಮ್ ನಿರ್ದೇಶನ ಮಾಡುತ್ತಿರುವ 'ದೇವ್ರವ್ನೆ ಬುಡು ಗುರು' ಚಿತ್ರದಲ್ಲಿ ಹುಚ್ಚ ವೆಂಕಟ್ ಅಭಿನಯಿಸಲಿದ್ದಾರಂತೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ವೆಂಕಟ್ ಅವರನ್ನ ಆಕ್ಟ್ ಮಾಡಿಸುವ ಕುರಿತು ಈಗಾಗಲೇ ನಿರ್ಧಾರವಾಗಿದೆಯಂತೆ.

ಅಕುಲ್-ಪ್ರಥಮ್ ಕಾಂಬಿನೇಷನ್ ಚಿತ್ರ

ಅಂದ್ಹಾಗೆ, 'ದೇವ್ರವ್ನೆ ಬುಡು ಗುರು' ಟಿವಿ ನಿರೂಪಕ ಅಕುಲ್ ಬಾಲಾಜಿ ಅಭಿನಯಿಸುತ್ತಿರುವ ಚಿತ್ರ. ಈ ಚಿತ್ರವನ್ನ ಪ್ರಥಮ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ, ಈ ಚಿತ್ರದಲ್ಲಿ ಹುಚ್ಚ ವೆಂಕಟ್ ಅಭಿನಯಿಸಲು ಸಮ್ಮತಿ ಸೂಚಿಸಿದ್ದಾರೆ.

'ಸೂಪರ್ ಜೋಡಿ-2'ಗೆ ಅತಿಥಿಯಾಗಿದ್ದ ಪ್ರಥಮ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಜೋಡಿ-2' ಕಾರ್ಯಕ್ರಮಕ್ಕೆ, ಈ ವಾರ ಅತಿಥಿಯಾಗಿ ಆಗಮಿಸಿದ್ದ ಪ್ರಥಮ್ ಗೆ ಈ ವಿಷ್ಯವನ್ನ ಅಕುಲ್ ಬಾಲಜಿ ಸ್ವಷ್ಟಪಿಡಿಸಿದರು. ಇದಕ್ಕೆ ವೆಂಕಟ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿರುವುದಾಗಿ ಹೇಳಿದರು.[ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.! ]

ಇಬ್ಬರ ಜಗಳಕ್ಕೆ ಕಾರಣವಾಗಿತ್ತು 'ಆ' ಒಂದು ಚಿತ್ರ

ಈ ಹಿಂದೆ ಹುಚ್ಚ ವೆಂಕಟ್ ಅವರು, ಪ್ರಥಮ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಇದು ಬ್ರೇಕ್ ಅಪ್ ಆಗಿತ್ತು. ಅಲ್ಲಿಂದನೇ ಇವರಿಬ್ಬರ ಮಧ್ಯೆ ಜಗಳ ಶುರುವಾಗಲು ಕಾರಣವಾಗಿತ್ತು.['ಪ್ರಥಮ್ ನನ್ನ ಎಕ್ಕಡ': ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್]

English summary
Biggboss Winner Pratham Will Direct to Huccha Venkat, in his Next Film 'Devravne budu guru'. Akul Balaji Confirm the News in Super Jodi 2, Reality Show. Akul Balaji Hero for 'Devravne budu guru'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada