twitter
    For Quick Alerts
    ALLOW NOTIFICATIONS  
    For Daily Alerts

    ಸೈಜ್ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದೆ ಪ್ರೇಮ್ ಅಡ್ಡ

    |

    Prem
    ನಿರ್ದೇಶಕ ಪ್ರೇಮ್ ನಟಿಸಿರುವ 'ಪ್ರೇಮ್ ಅಡ್ಡ' ಒಂದಾದಮೇಲೊಂದು ವಿವಾದಕ್ಕೆ ಕಾರಣವಾಗುತ್ತಿದೆ. ಸೆಟ್ಟೇರುವ ಮೊದಲೇ ಟೈಟಲ್ ಜಟಾಪಟಿಗೆ ಬಿದ್ದಿದ್ದ ಚಿತ್ರತಂಡ ನಂತರ 'ಅಡ್ಡ'ಕ್ಕೆ ಬದಲು 'ಪ್ರೇಮ್ ಅಡ್ಡ' ಟೈಟಲ್ ಇಟ್ಟುಕೊಂಡು ಚಿತ್ರೀಕರಣ ಮುಗಿಸಿದೆ. ಬಿಡುಗಡೆ ಮಾಡಬೇಕಾದ ಹೊತ್ತಲ್ಲಿ ಈಗ ಮತ್ತೆ ಪ್ರೇಮ್ ಅಡ್ಡಕ್ಕೆ ಶೀರ್ಷಿಕೆ ವಿವಾದ ಅಂಟಿಕೊಂಡಿದೆ.

    ಚಿತ್ರದ ಶೀರ್ಷಿಕೆ ನೀಡುವಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ವಿಧಿಸಿದ್ದ ಷರತ್ತಿನ ಪ್ರಕಾರ, ಶೀರ್ಷಿಕೆಯಲ್ಲಿ 'ಪ್ರೇಮ್ ಅಡ್ಡ' ಎನ್ನುವುದು ಒಂದೇ ಗಾತ್ರದಲ್ಲಿ ಹಾಗೂ ಒಂದೇ ಶೈಲಿಯಲ್ಲಿ ಮುದ್ರಣಗೊಳ್ಳಬೇಕು. 'ಪ್ರೇಮ್' ಎನ್ನುವುದನ್ನು ಚಿಕ್ಕದಾಗಿ ಮತ್ತು 'ಅಡ್ಡ' ಎನ್ನುವುದನ್ನು ದೊಡ್ಡದಾಗಿ ಮುದ್ರಿಸಬಾರದು. ಆದರೆ, ಮೊದಲು ಷರತ್ತಿಗೆ ಒಪ್ಪಿದ್ದ ಚಿತ್ರತಂಡ ಈಗ ತಿರುಗಿಬಿದ್ದಿದೆ.

    ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಜಾಹೀರಾತುಗಳಲ್ಲಿ 'ಪ್ರೇಮ್ ಅಡ್ಡ' ಎನ್ನುವುದು ಬೇರೆ ಬೇರೆ ಸೈಜ್ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಇದು ಕೆಎಫ್‌ಸಿಸಿ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಣಿಜ್ಯ ಮಂಡಳಿ, ಪ್ರೇಮ್ ಅಡ್ಡ ಚಿತ್ರದ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದೆಂದು ಎಲ್ಲಾ ಮಾಧ್ಯಮಗಳಿಗೆ ಸೂಚನೆ ರವಾನಿಸಿದೆ. ಇದು ಪ್ರೇಮ್ ಅಡ್ಡಕ್ಕೆ ನುಂಗಲಾರದ ತುತ್ತಾಗಿದೆ.

    ಇದು ತಿಳಿಯುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿರುವ 'ಪ್ರೇಮ್ ಅಡ್ಡ' ಚಿತ್ರತಂಡ, "ನಾವು ಕೆಎಫ್‌ಸಿಸಿ ಸೂಚನೆಗಳಿಗೆ ಬಗ್ಗುವುದಿಲ್ಲ, ಶೀರ್ಷಿಕೆಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನಾವು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಮೊರೆ ಹೋಗಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಒಮ್ಮೆ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇವೆ" ಎಂದಿದೆ.

    "ನಮ್ಮ ಚಿತ್ರ ಪ್ರೇಮ್ ಅಡ್ಡ ಶೀರ್ಷಿಕೆ ಹೀಗೆಯೇ ಇರಬೇಕೆನ್ನುವುದು ಜ್ಯೋತಿಷಿಗಳು ನೀಡಿರುವ ಸಲಹೆ. ನಾವು ಅದನ್ನು ಧಿಕ್ಕರಿಸುವ ಮನಸ್ಥಿತಿ ಹೊಂದಿಲ್ಲ. ಚಿತ್ರರಂಗದಲ್ಲಿ ಕ್ರಿಯಾಶೀಲತೆಗೆ ಯಾವುದೇ ಷರತ್ತು, ಅಡ್ಡಿ-ಆತಂಕಗಳು ಇರಬಾರದು" ಎಂಬುದು ನಿರ್ಮಾಪಕ ಮುರಳಿಕೃಷ್ಣ ಹಾಗೂ ನಿರ್ದೇಶಕ ಮಹೇಶ್ ಬಾಬು ಪ್ರತಿಕ್ರಿಯೆ. ಈ ಚಿತ್ರದ ನಟ, ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ ಏನೋ!

    ಅಂದಹಾಗೆ, ಸದಾ ವಿವಾದಗಳಿಂದಲೇ ಪ್ರಚಾರದಲ್ಲಿರುವ ಈ ಪ್ರೇಮ್ ಅಡ್ಡ ಚಿತ್ರವು ತಮಿಳಿನ 'ಸುಬ್ರಮಣ್ಯಪುರಂ' ಚಿತ್ರದ ರಿಮೇಕ್. ನಿರ್ದೇಶಕ ಪ್ರೇಮ್ ನಾಯಕತ್ವದ ಈ ಚಿತ್ರಕ್ಕೆ ಕೃತಿ ಖರಬಂದ ನಾಯಕಿ. ಈ ಚಿತ್ರತಂಡಕ್ಕೆ ಬೇಕಾಗಿದ್ದ 'ಅಡ್ಡ' ಶೀರ್ಷಿಕೆ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ (ಬೆಂಕೋಶ್ರೀ) ವಶದಲ್ಲಿದೆ. ಈಗ ನೋಡಿದರೆ 'ಪ್ರೇಮ್ ಅಡ್ಡ' ಎಂಬ ಹೆಸರಿಗೂ ಕುತ್ತು ಬರುವ ಸಂಭವವಿದೆ. ಮುಂದೇನಾಗುತ್ತೋ..! (ಒನ್ ಇಂಡಿಯಾ ಕನ್ನಡ)

    English summary
    Prem Adda movie team again facing Controversy. As the KFCC Rules, the title size and font should be same from starting to end in Title. But, Prem Adda team neglected the rules, even it accepted before. Now, the KFCC ordered all print medias to don't publish its Adds.
    Thursday, June 21, 2012, 12:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X