Just In
Don't Miss!
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- News
100 ದಿನ ಅಲ್ಲ, 100 ತಿಂಗಳಾದರೂ ರೈತರಿಗೆ ಕಾಂಗ್ರೆಸ್ ಬೆಂಬಲ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಪ್ರೇಮ್-ರಕ್ಷಿತಾ ದಂಪತಿ
ಸ್ಯಾಂಡಲ್‌ವುಡ್ ತಾರಾ ದಂಪತಿ ನಿರ್ದೇಶಕ ಪ್ರೇಮ್ ಮತ್ತು ರಕ್ಷಿತಾ ದಂಪತಿ ಸುಗ್ಗಿ ಹಬ್ಬವನ್ನು ತಮ್ಮ ತೋಟದ ಮನೆಯಲ್ಲಿ ಆಚರಿಸಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಕ್ಷಿತಾ ''ಈ ಹಬ್ಬ ಬಹಳ ಖುಷಿ ತಂದಿದೆ'' ಎಂದಿದ್ದಾರೆ.
ತಮ್ಮ ತೋಟ ಮನೆಯಲ್ಲಿರುವ ಹಸು, ಕರು, ಕುರಿ ಹಾಗೂ ಇನ್ನಿತರ ಪ್ರಾಣಿಗಳ ಜೊತೆ ಸೇರಿ ಪ್ರೇಮ್ ಕುಟುಂಬ ಸಂಕ್ರಾಂತಿ ಸೆಲೆಬ್ರೆಟ್ ಮಾಡಿದ್ದಾರೆ.
ಪ್ರೇಮ್, ರಕ್ಷಿತಾ ಹಾಗೂ ತಮ್ಮ ಮಗ ಸೂರ್ಯ ಸೇರಿದಂತೆ ಸಂಬಂಧಿಕರು, ತೋಟದ ಮನೆಯಲ್ಲಿ ಕೆಲಸ ಮಾಡುವವರು ಹೀಗೆ ಎಲ್ಲರೂ ಈ ಸಂಭ್ರಮದಲ್ಲಿ ಒಟ್ಟುಗೂಡಿದ್ದರು.
ಕಳೆದ ನವೆಂಬರ್ ತಿಂಗಳಲ್ಲಿ 'ಎಕ್ ಲವ್ ಯಾ' ಸಿನಿಮಾದ ಶೂಟಿಂಗ್‌ಗಾಗಿ ಲೋಕೇಶನ್ ನೋಡಲು ಗುಜರಾತ್‌ಗೆ ತೆರಳಿದ್ದ ಪ್ರೇಮ್, ಅಲ್ಲಿಂದ ಎರಡು ಎಮ್ಮಿ ಮರಿಗಳನ್ನು ಖರೀದಿ ಮಾಡಿಕೊಂಡು ಬಂದಿದ್ದರು. ಆ ಮರಿ ಎಮ್ಮೆಗಳನ್ನು ತೋಟದಲ್ಲಿ ಮನೆಯಲ್ಲಿ ಸಾಕಲಾಗುತ್ತದೆ.
ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಏಕ್ ಲವ್ ಯಾ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದಾಗಿ ಪ್ರಕಟಿಸಿದ್ದರು. ನಾಲ್ಕು ಭಾಷೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದರು.
ಈ ಸಿನಿಮಾ ಮುಗಿದ ಮೇಲೆ ಕಿಚ್ಚ ಸುದೀಪ್ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್. ಮತ್ತೊಂದೆಡೆ ನಟಿ ರಕ್ಷಿತಾ ಪ್ರೇಮ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಡ್ಯಾನ್ಸ್ ಹಾಗೂ ಕಾಮಿಡಿ ಕಾರ್ಯಕ್ರಮಗಳ ತೀರ್ಪುಗಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.