For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ವಿವಾದದ ಬಗ್ಗೆ ಮೌನ ಮುರಿದ ಪ್ರೇಮ್

  By Pavithra
  |
  TheVillain : ದಿ ವಿಲನ್ ವಿವಾದದ ಬಗ್ಗೆ ಮೌನ ಮುರಿದ ಪ್ರೇಮ್..!! | Filmibeat Kannada

  'ದಿ ವಿಲನ್' ಸಿನಿಮಾ ಆರಂಭದಲ್ಲಿ ಅದೆಷ್ಟು ಖುಷಿಯಿಂದ ಆರಂಭವಾಯ್ತೋ ಅದ್ಯಾಕೋ ಇತ್ತೀಚಿಗೆ ವಿವಾದದಿಂದಲೇ ಸುದ್ದಿ ಆಗುತ್ತಿದೆ. ಗಿಮಿಕ್ ಮಾಡ್ತಾರೆ, ಟ್ರಿಕ್ಸ್ ಮಾಡುತ್ತಾರೆ ಎನ್ನುವ ಎಲ್ಲಾ ಹಣೆ ಪಟ್ಟಿಯನ್ನು ಕಿತ್ತು ಎಸೆದು ಹೊರಬರಬೇಕು ಎನ್ನುವ ಪ್ರೇಮ್ ಅವರ ಪಯತ್ನ ಯಾಕೋ ಸಕ್ಸಸ್ ಆಗುತ್ತಲೇ ಇಲ್ಲ.

  ಬೇಡ..ಬೇಡ ಎಂದರೂ ಕೂಡ ಪ್ರೇಮ್ ಸಿನಿಮಾ ಮತ್ತೆ ಮತ್ತೆ ವಿವಾದ ಆಗುತ್ತಲೇ ಇದೆ. ಶಿವರಾಜ್ ಕುಮಾರ್ ಅವರ ಕೆಲವು ಅಭಿಮಾನಿಗಳು 'ದಿ ವಿಲನ್' ಚಿತ್ರವನ್ನು ಬಾಯ್ ಕಟ್ ಮಾಡುವುದಾಗಿ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

  ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.! ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.!

  ನೀವು ನಮ್ಮ ಏಳು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಇಲ್ಲವಾದರೆ ಚಿತ್ರ ನೋಡುವುದಿಲ್ಲ ಎನ್ನುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗಳ ಮಧ್ಯೆ ಪ್ರೇಮ್ ಮೌನ ಮುರಿದಿದ್ದಾರೆ. ಆಗುತ್ತಿರುವ ವಿವಾದದ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅಭಿಮಾನಿಗಳಿಗೆ ಪ್ರೇಮ್ ಹೇಳಿದ್ದೇನೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಆಯ್ದ ಅಭಿಮಾನಿಗಳಿಂದ ವಿವಾದ

  ಆಯ್ದ ಅಭಿಮಾನಿಗಳಿಂದ ವಿವಾದ

  'ದಿ ವಿಲನ್' ಟೀಸರ್ ಬಿಡುಗಡೆ ಆಗುತ್ತಿದಂತೆ ವಿವಾದ ಹೆಚ್ಚಾಗಿದೆ. ಶಿವರಾಜ್ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ 'ದಿ ವಿಲನ್' ಸಿನಿಮಾವನ್ನು ನೋಡುವುದಿಲ್ಲ ಎನ್ನುವ ಸ್ಟೇಟಸ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ ನೀಡಿದ್ದು ಕೆಲ ಅಭಿಮಾನಿಗಳು ಮಾತ್ರ ಈ ರೀತಿ ಮಾಡುತ್ತಿದ್ದಾರೆ. 5 ಮಿಲಿಯನ್ ಜನರು ಶಿವರಾಜ್ ಕುಮಾರ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ ಎಂದಿದ್ದಾರೆ.

  ಈ ಹಿಂದೆಯೂ ಹೀಗೆ ಆಗಿತ್ತು

  ಈ ಹಿಂದೆಯೂ ಹೀಗೆ ಆಗಿತ್ತು

  ನಿರ್ದೇಶನ ಪ್ರೇಮ್ ಅವರ ವೃತ್ತಿ ಜೀವನದಲ್ಲಿ ಇಂತಹ ಸಾಕಷ್ಟು ವಿವಾದಗಳನ್ನು ಎದುರಿಸಿದ್ದಾರಂತೆ. ನಾವು ಸಿನಿಮಾ ಮಾಡಿದರೆ ಬೇರೆ ಚಿತ್ರರಂಗದವರು ನಮ್ಮ ಸಿನಿಮಾ ನೋಡಿ ಸಂತೋಷ ಪಡಬೇಕು. ಆದರೆ ನಮ್ಮ ನಮ್ಮಲ್ಲೇ ಇಂತಹ ಜಗಳಗಳು ಆಗುತ್ತಿದ್ದರೆ ಹೇಗೆ ಎನ್ನುವುದು ಪ್ರೇಮ್ ಅವರ ಮಾತು.

  ಶಿವರಾಜ್ ಕುಮಾರ್ ಅವರೇ ಸ್ಪೂರ್ತಿ

  ಶಿವರಾಜ್ ಕುಮಾರ್ ಅವರೇ ಸ್ಪೂರ್ತಿ

  ನಾನು ಶಿವರಾಜ್ ಕುಮಾರ್ ಅವರ ಅಭಿಮಾನಿ. ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತೇನೆ. ಹಾಗೇ ಇಂತಹ ವಿವಾದಗಳಿಗೆ ಕಿವಿ ಕೊಡದೆ ಅವರಂತೆಯೇ ಇರುತ್ತೇನೆ. ಇದರಿಂದ ಶಿವಣ್ಣನ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗುವುದಿಲ್ಲ. ಎಂದು ಪ್ರೇಮ್ ಹೇಳಿದ್ದಾರೆ.

  ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ

  ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ

  'ದಿ ವಿಲನ್' ಸಿನಿಮಾ 40ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರ. ಟೀಸರ್ ಬಿಡುಗಡೆ ಮಾಡಿರುವ ನಿರ್ದೇಶಕರು ಇದೇ ವಾರದಲ್ಲಿ ಹಾಡನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರಂತೆ. ಆಗಸ್ಟ್ 24 ರಂದು ಚಿತ್ರವನ್ನು ರಿಲೀಸ್ ಮಾಡಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ.

  English summary
  Director Prem has responded to the controversy surrounding Kannada film The Villain. The Villain movie will release In August,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X