For Quick Alerts
  ALLOW NOTIFICATIONS  
  For Daily Alerts

  ಗುಜರಾತ್, ರಾಜಸ್ಥಾನ, ಕಾಶ್ಮೀರದಲ್ಲಿ ನಿರ್ದೇಶಕ ಪ್ರೇಮ್ ಅಲೆದಾಟ

  |

  ನಿರ್ದೇಶಕ-ನಟ ಪ್ರೇಮ್ ಕೊರೊನಾ ಲಾಕ್‌ಡೌನ್ ಅಂತ್ಯವಾಗಿದ್ದೆ ತಡ ತಮ್ಮ ಪ್ರೀತಿಯ ಕಾರ್ಯ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

  ಯುವ ಪ್ರೇಮಕತೆಯೊಂದಿಗೆ ಬೆಳ್ಳಿತೆರೆಗೆ ಸಜ್ಜಾಗಿರುವ ಪ್ರೇಮ್, 'ಏಕ್‌ ಲವ್ ಯಾ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಪ್ರೇಮ್. ಇತ್ತೀಚೆಗಷ್ಟೆ ಊಟಿಯಲ್ಲಿ ಚಿತ್ರೀಕರಣದ ಒಂದು ಹಂತವನ್ನು ಮುಗಿಸಿದ್ದಾರೆ ಪ್ರೇಮ್.

  ನಟಿ ರಾಗಿಣಿ ಅರೆಸ್ಟ್: 'ಗಾಂಧಿಗಿರಿ'ಗೆ ಹೆಚ್ಚಿದ ತಲೆನೋವುನಟಿ ರಾಗಿಣಿ ಅರೆಸ್ಟ್: 'ಗಾಂಧಿಗಿರಿ'ಗೆ ಹೆಚ್ಚಿದ ತಲೆನೋವು

  ನವೆಂಬರ್ 3 ರಂದು ಪ್ರೇಮ್-ರಕ್ಷಿತಾ ಮುದ್ದು ಮಗ ಸೂರ್ಯಾ ಗೌಡ ಹುಟ್ಟುಹಬ್ಬವಿತ್ತು. ಆದರೆ ಮಗನ ಹುಟ್ಟುಹಬ್ಬಕ್ಕೂ ಪ್ರೇಮ್ ಮನೆಯಲ್ಲಿರಲಿಲ್ಲ, ಕಾರಣ ಪ್ರೇಮ್ ಅವರು ತಮ್ಮ ಸಿನಿಮಾಕ್ಕಾಗಿ ಅಲೆಮಾರಿಯಾಗಿದ್ದಾರೆ!

  ಚಿತ್ರೀಕರಣಕ್ಕಾಗಿ ಲೊಕೇಶನ್ ಹುಡುಕಾಟ

  ಚಿತ್ರೀಕರಣಕ್ಕಾಗಿ ಲೊಕೇಶನ್ ಹುಡುಕಾಟ

  ನಿರ್ದೇಶಕ ಪ್ರೇಮ್, ಏಕ್‌ ಲವ್ ಯಾ ಸಿನಿಮಾದ ಚಿತ್ರೀಕರಣಕ್ಕೆಂದು ಲೊಕೇಶನ್‌ ಹುಡುಕಾಟದಲ್ಲಿದ್ದಾರೆ. ಊಟಿಯಲ್ಲಿ ಒಂದು ಚಿತ್ರೀಕರಣ ಮುಗಿಸಿರುವ ಪ್ರೇಮ್, ಮುಂದಿನ ಚಿತ್ರೀಕರಣಕ್ಕಾಗಿ ಜಮ್ಮು ಕಾಶ್ಮೀರದಲ್ಲಿ ಲೊಕೇಶನ್ ಹುಡುಕಾಟದಲ್ಲಿದ್ದಾರೆ.

  ಗುಜರಾತ್-ರಾಜಸ್ಥಾನಗಳಲ್ಲಿ ಸಹ ಸುತ್ತಾಟ

  ಗುಜರಾತ್-ರಾಜಸ್ಥಾನಗಳಲ್ಲಿ ಸಹ ಸುತ್ತಾಟ

  ಜಮ್ಮು ಕಾಶ್ಮೀರ ಮಾತ್ರವಲ್ಲದೆ, ಗುಜರಾತ್, ರಾಜಸ್ಥಾನಗಳಲ್ಲಿಯೂ ಲೋಕೇಶನ್‌ ಹುಡುಕುಕೊಂಡು ಅಲೆದಾಡಿದ್ದಾರೆ ಪ್ರೇಮ್. ಲೇಹ್, ಲದಾಕ್‌ಗಳಲ್ಲಿಯೂ ಸುತ್ತು ಹೊಡೆಯಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಪ್ರೇಮ್.

  ರಾಣಾ-ರಚಿತಾ ರಾಮ್ ನಾಕಯ-ನಾಯಕಿ

  ರಾಣಾ-ರಚಿತಾ ರಾಮ್ ನಾಕಯ-ನಾಯಕಿ

  ಪ್ರೇಮ್ ನಿರ್ದೇಶಿಸುತ್ತಿರುವ 'ಏಕ್‌ ಲವ್ ಯಾ' ಸಿನಿಮಾದಲ್ಲಿ ಹೊಸ ನಟ ರಾಣಾ ನಾಯಕರಾಗಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಕ್ಷಿತಾ ಸಹ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವು ನಿಜ ಘಟನೆ ಆಧರಿಸಿದೆ ಎನ್ನಲಾಗುತ್ತಿದೆ.

  Recommended Video

  Ibbara Naduvina Muddina Rani | ನಂಗೆ ಬೇಕು ಅಂದ್ರೆ ಬೇಕು, ಬೇಡ ಅಂದ್ರೆ ಬೇಡ ಅಷ್ಟೆ | Filmibeat Kannada
  ಗಾಂಧಿಗಿರಿ ಸಿನಿಮಾದಲ್ಲಿ ಪ್ರೇಮ್ ನಾಯಕ

  ಗಾಂಧಿಗಿರಿ ಸಿನಿಮಾದಲ್ಲಿ ಪ್ರೇಮ್ ನಾಯಕ

  ಇನ್ನು ಪ್ರೇಮ್, ಗಾಂಧಿಗಿರಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಗಿಣಿ ನಾಯಕಿ. ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿ ನಟಿ ರಾಗಿಣಿ ಜೈಲು ಪಾಲಾಗಿರುವ ಕಾರಣ ಗಾಂಧಿ ಗಿರಿ ಸಿನಿಮಾದ ಚಿತ್ರೀಕರಣ ತಡವಾಗುತ್ತಿದೆ.

  English summary
  Director Prem is roaming in Kashmir, Rajastan, Gujrat and many more places in search of location for his movie Ek Love Ya.
  Thursday, November 5, 2020, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X