For Quick Alerts
  ALLOW NOTIFICATIONS  
  For Daily Alerts

  ಮಚ್ಚು ಕೆಳಗಿಟ್ಟು 'ದಾಸವಾಳ' ಕೈಹಿಡಿದ ಪ್ರೇಮ್

  By Rajendra
  |
  'ಜೋಗಯ್ಯ' ಖ್ಯಾತಿಯ ಪ್ರೇಮ್ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರೇಮ್ ಅಡ್ಡ ಚಿತ್ರದ ಬಳಿಕ ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ. ಈ ಬಾರಿ ಅವರದು ಟೂರಿಸ್ಟ್ ಗೈಡ್ ಪಾತ್ರ. ಚಿತ್ರದ ಹೆಸರು 'ದಾಸವಾಳ'.

  ಆದರೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಎಂ.ಎಸ್.ರಮೇಶ್ ಹಾಗೂ ನಿರ್ಮಾಣ ಅಣಜಿ ನಾಗರಾಜ್. ಇತ್ತೀಚೆಗಷ್ಟೇ ಚಿತ್ರದ ಹಾಡುಗಳ ರೆಕಾರ್ಡಿಂಗ್ ನಡೆಯಿತು. ಚಿತ್ರೀಕರಣ ಮಾರ್ಚ್ 28ರಿಂದ ಆರಂಭವಾಗಲಿದೆ.

  ಚಿತ್ರದಲ್ಲಿ ಪ್ರೇಮ್ ಅವರದು ಕಾಮಿಡಿ ರೋಲ್ ಅಂತೆ. ನೈಜತೆಗೆ ಹತ್ತಿರವಾದ ಪಾತ್ರ. ನನಗಷ್ಟೇ ಅಲ್ಲ ಎಲ್ಲರಿಗೂ. ತಮ್ಮ ವೃತ್ತಿಜೀವನದಲ್ಲಿ ಈ ರೀತಿಯ ಪಾತ್ರ ಸಿಕ್ಕಿರುವುದು ನಿಜಕ್ಕೂ ಖುಷಿ ತಂದಿದೆಎನ್ನುತ್ತಾರೆ ಪ್ರೇಮ್. ರಂಗಾಯಣ ರಘು ಅವರು ಚಿತ್ರದಲ್ಲಿದ್ದು ಪ್ರೇಮ್ ಅವರಿಗೆ ಸೋದರಮಾವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಟೂರಿಸ್ಟ್ ಗೈಡ್ ಎಂದರೆ ಮೇಲೆ ಚಿತ್ರೀಕರಣವೂ ಅಷ್ಟೇ ರಮಣೀಯ ಸ್ಥಳಗಳಲ್ಲಿ ನಡೆಯಲಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಗುರುಕಿರಣ್ ಅವರ ಸಂಗೀತ, ದಾಸರಿ ಸೀನು ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಅಂದಹಾಗೆ ಈ ಚಿತ್ರದ ಅಡಿಬರಹ 'ನಿನಗೊಂದು ನನಗೊಂದು'. (ಏಜೆನ್ಸೀಸ್)

  English summary
  Actor cum director Prem upcoming film titled as Dasvala (Hibiscus), he plays a tourist guide in 'Dasvala' to be directed by writer-director M S Ramesh and produced by Anaji Nagaraj. The film is likely to be launched 28th of March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X