twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣ ಅಭಿಮಾನಿಗಳ ಬೇಡಿಕೆ ಒಪ್ಪದ ಪ್ರೇಮ್: ಸಂದರ್ಭ ವಿವರಿಸಿದ ನಿರ್ದೇಶಕ

    |

    ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಬಿಡುಗಡೆಯ ನಂತರ, ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿಗಳು ಚಿತ್ರದ ನಿರ್ದೇಶಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

    ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಗೆ ಹೊಡೆಯುತ್ತಾರೆ. ಅಲ್ಲಿ ಹೊಡೆಯ ಅವಶ್ಯಕತೆ ಇರಲಿಲ್ಲ. ಆದ್ರೂ ಹೊಡೆಸಿರುವುದು ಖಂಡನೀಯ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.

    ವಿವಾದದ ನಡುವೆಯೂ ಕಲೆಕ್ಷನ್ ನಲ್ಲಿ 'ದಿ ವಿಲನ್' ದಾಖಲೆ! ವಿವಾದದ ನಡುವೆಯೂ ಕಲೆಕ್ಷನ್ ನಲ್ಲಿ 'ದಿ ವಿಲನ್' ದಾಖಲೆ!

    ಕೂಡಲೇ ಆ ದೃಶ್ಯವನ್ನ ಚಿತ್ರದಿಂದ ತೆಗೆದುಹಾಕಬೇಕು ಎಂದು ಒತ್ತಾಯ ಮಾಡಿದ್ದರು. ಆದ್ರೆ, ಇದಕ್ಕೆ ನಿರ್ದೇಶಕ ಪ್ರೇಮ್ ಸ್ಪಷ್ಟನೆ ನೀಡಿದ್ದು, ದೃಶ್ಯ ತೆಗೆದರೇ ಸಿನಿಮಾಗೆ ಅನ್ಯಾಯವಾಗುತ್ತೆ ಎಂದಿದ್ದಾರೆ. ಈ ಬಗ್ಗೆ ಅಭಿಮಾನಿಗಳಲ್ಲಿ ಪೂರ್ತಿ ವಿವರಣೆ ಕೂಡ ನೀಡಿದ್ದಾರೆ. ಹಾಗಿದ್ರೆ, ಪ್ರೇಮ್ ಏನಂದ್ರು.?

    ಸಿನಿಮಾನಾ ಸಿನಿಮಾ ರೀತಿ ನೋಡಿ

    ಸಿನಿಮಾನಾ ಸಿನಿಮಾ ರೀತಿ ನೋಡಿ

    ''ದಿ ವಿಲನ್' ಸಿನಿಮಾವನ್ನ ನೀವು ಅದ್ಧೂರಿಯಾಗಿ ಗೆಲ್ಲಿಸಿದ್ದೀರಾ. ಇತರೆ ಚಿತ್ರರಂಗಗಳೂ ಕನ್ನಡದತ್ತ ನೋಡುವಂತೆ ಮಾಡಿದ್ದೀರಿ. ಬಾಹುಬಲಿ ಅಂತಹ ಚಿತ್ರದ ಮಟ್ಟಿಗೆ ನಮ್ಮ ಸಿನಿಮಾನೂ ಕಲೆಕ್ಷನ್ ಮಾಡಿದೆ. ಇದೆಲ್ಲವೂ ನಿಮ್ಮಂದ ಸಾಧ್ಯವಾಗಿದೆ. ಸಿನಿಮಾನ ಸಿನಿಮಾ ರೀತಿ ನೋಡಿದಾಗ ಖಂಡಿತ ಇಷ್ಟವಾಗುತ್ತೆ'' - ಪ್ರೇಮ್

    ಶಿವಣ್ಣ ಏನ್ ದಡ್ಡರಾ? : ಅಭಿಮಾನಿಗಳ ಆಕ್ರೋಶಕ್ಕೆ ಸುದೀಪ್ ಪ್ರತಿಕ್ರಿಯೆ! ಶಿವಣ್ಣ ಏನ್ ದಡ್ಡರಾ? : ಅಭಿಮಾನಿಗಳ ಆಕ್ರೋಶಕ್ಕೆ ಸುದೀಪ್ ಪ್ರತಿಕ್ರಿಯೆ!

    ದೃಶ್ಯ ತೆಗೆದರೇ ಪಾತ್ರಕ್ಕೆ ಜೀವ ಇರಲ್ಲ

    ದೃಶ್ಯ ತೆಗೆದರೇ ಪಾತ್ರಕ್ಕೆ ಜೀವ ಇರಲ್ಲ

    'ಕ್ಲೈಮ್ಯಾಕ್ಸ್ ನಲ್ಲಿ ಶಿವಣ್ಣಗೆ, ಸುದೀಪ್ ಎರಡೇಟು ಹೊಡೆದಿದ್ದಾರೆ, ತಿರುಗಿ ಅವರು ಹೊಡೆದಿಲ್ಲ ಅಂತ. ಒಂದು ವೇಳೆ ಶಿವಣ್ಣ ವಾಪಸ್ ಹೊಡೆದರೇ ಆ ಪಾತ್ರ ಬಿದ್ದೋಗುತ್ತೆ. ತನ್ನ ತಾಯಿಗಾಗಿ, ತನ್ನ ತಮ್ಮನನ್ನ ಕರೆದುಕೊಂಡು ಹೋಗಬೇಕು ಎಂಬ ಆ ಪ್ರೀತಿ, ಶಿವಣ್ಣನ ಆ ಮುಗ್ದತೆ ಬಿದ್ದೋಗುತ್ತೆ. ಅವರನ್ನು ರಾಕ್ಷಸ ರೀತಿ ತೋರಿಸಿದ್ರೆ, ಯಾರೂ ಪಾತ್ರವನ್ನ ಇಷ್ಟಪಡ್ತಾರೆ, ಎಲ್ಲಿ ಪಾತ್ರ ಗೆಲ್ಲುತ್ತೆ. ಅದಕ್ಕೆ ಆ ಪಾತ್ರವನ್ನ ಅಷ್ಟರ ಮಟ್ಟಿಗೆ ಕ್ರಿಯೇಟ್ ಮಾಡಿ ರೀಚ್ ಮಾಡಿದ್ದೀನಿ' - ಪ್ರೇಮ್

    ಶಿವಣ್ಣ ಏನ್ ದಡ್ಡರಾ? : ಅಭಿಮಾನಿಗಳ ಆಕ್ರೋಶಕ್ಕೆ ಸುದೀಪ್ ಪ್ರತಿಕ್ರಿಯೆ!ಶಿವಣ್ಣ ಏನ್ ದಡ್ಡರಾ? : ಅಭಿಮಾನಿಗಳ ಆಕ್ರೋಶಕ್ಕೆ ಸುದೀಪ್ ಪ್ರತಿಕ್ರಿಯೆ!

    ದಯವಿಟ್ಟು ಕ್ಷಮಿಸಿ

    ದಯವಿಟ್ಟು ಕ್ಷಮಿಸಿ

    'ಶಿವಣ್ಣ ಅವರ ವ್ಯಕ್ತಿತ್ವ ಮತ್ತು ಪಾತ್ರದ ಇಮೇಜ್ ಒಂದು ಕಡೆನೂ ಡ್ಯಾಮೇಜ್ ಆಗಿಲ್ಲ, ಮಾಡೋದಿಲ್ಲ. ಯಾಕಂದ್ರೆ, ಅವರು ಲೆಜೆಂಡ್. ಯಾವುದೇ ಪಾತ್ರ ಕೊಟ್ರು ಮಾಡ್ತೀನಿ ಅಂತಾರೆ. ಅವರ ಬಳಿ ಒಳ್ಳೊಳ್ಳೆ ಪಾತ್ರ ಮಾಡಿಸಬೇಕು ಅಂತ ನಾನು ಕಥೆ ಬರೆಯುತ್ತೇನೆ. ನಿಮಗೆ ಇದರಿಂದ ನೋವಾಗಿದ್ದರೇ ದಯವಿಟ್ಟು ನನ್ನು ಕ್ಷಮಿಸಿ'' ಎಂದು ವಿನಂತಿಸಿಕೊಂಡಿದ್ದಾರೆ.

    ಪ್ರೇಮ್ ವಿರುದ್ಧ ಪ್ರತಿಭಟನೆ : ಶಿವಣ್ಣನ ಅಭಿಮಾನಿಗಳ ಆರೋಪಗಳು ಏನು ?ಪ್ರೇಮ್ ವಿರುದ್ಧ ಪ್ರತಿಭಟನೆ : ಶಿವಣ್ಣನ ಅಭಿಮಾನಿಗಳ ಆರೋಪಗಳು ಏನು ?

    ಒಳ್ಳೆಯ ಪ್ರಯತ್ನ ಬಟ್, ಹೀಗೆ ಮಾಡಬಾರದಿತ್ತು

    ಒಳ್ಳೆಯ ಪ್ರಯತ್ನ ಬಟ್, ಹೀಗೆ ಮಾಡಬಾರದಿತ್ತು

    ಸಿನಿಮಾ ನೋಡಿದ ಬಹುತೇಕ ಮಂದಿ ಸಿನಿಮಾ ಚೆನ್ನಾಗಿದೆ, ಇಬ್ಬರು ಸ್ಟಾರ್ ನಟರ ಹಾಕ್ಕೊಂಡು ಮಾಡಿರುವುದು ಒಳ್ಳೆಯ ಪ್ರಯತ್ನ. ಆದ್ರೆ, ಶಿವಣ್ಣನ ಪಾತ್ರಕ್ಕೆ ತಕ್ಕ ನ್ಯಾಯ ಕೊಡಿಸುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ ಎಂಬ ಆರೋಪವನ್ನ ಅಭಿಮಾನಿಗಳು ಮಾಡ್ತಿದ್ದಾರೆ.

    ಸಿನಿಮಾದ ರಿವ್ಯೂ ಹೇಗಿದೆ.?

    ಸಿನಿಮಾದ ರಿವ್ಯೂ ಹೇಗಿದೆ.?

    ಇನ್ನು ದಿ ವಿಲನ್ ಸಿನಿಮಾ ಹೇಗಿದೆ ಎಂಬುದರ ರಿವ್ಯೂ ಫಿಲ್ಮಿಬೀಟ್ ನಲ್ಲಿ ಪ್ರಕಟವಾಗಿದೆ. 'ಅಪ್ಪನಿಗಾಗಿ ರಾಮ ಕಾಡಿಗೆ ಹೋದ, ಅಮ್ಮನಿಗಾಗಿ ರಾವಣ ಶಿವನಿಂದ ಆತ್ಮಲಿಂಗ ಪಡೆದುಕೊಂಡ.' ಚಿತ್ರದಲ್ಲಿ ಒಂದು ಕಡೆ ತಾಯಿ ರಾಮನಾಗಿ ನೀನು ಬದುಕು ಎಂದರೆ, ಮತ್ತೊಂದು ಕಡೆ ತಂದೆ ರಾವಣನಾಗಿ ಇದ್ದರೆ ಮಾತ್ರ ಇಂದಿನ ಜಗತ್ತಿನಲ್ಲಿ ಬದುಕಲು ಸಾಧ್ಯ ಎಂದು ಹೇಳುತ್ತಾನೆ. ಈ ಎರಡೂ ವಿಚಾರಗಳ ನಡುವೆ ಸಾಗುವ ಪಕ್ಕಾ ಮನರಂಜನೆಯ ಸಿನಿಮಾ 'ದಿ ವಿಲನ್'.

    'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

    English summary
    Director prem has clarified about the villain movie climax controversy .
    Saturday, October 20, 2018, 12:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X