»   » ಸುದೀಪ್ Vs ಪ್ರೇಮ್ ಸ್ಯಾಂಡಲ್ ವುಡ್ 'ಹಿಟ್ಲರ್' ಯಾರು?

ಸುದೀಪ್ Vs ಪ್ರೇಮ್ ಸ್ಯಾಂಡಲ್ ವುಡ್ 'ಹಿಟ್ಲರ್' ಯಾರು?

Posted By:
Subscribe to Filmibeat Kannada

ಈ ವಿವಾದಗಳಿಗೂ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಗೂ ಬಿಡಿಸಲಾರದ ನಂಟು. ಪ್ರೇಮ್ ಅವರು ವಿವಾದಕ್ಕಾಗಿ ಚಿತ್ರ ಮಾಡುತ್ತಾರೋ ಅಥವಾ ಚಿತ್ರ ಮಾಡಿ ವಿವಾದಕ್ಕೆ ಗುರಿಯಾಗುತ್ತಾರೋ ಎಂಬುದು ಇನ್ನೂ ಚಿದಂಬರರಹಸ್ಯವಾಗಿಯೇ ಉಳಿದಿದೆ.

ಇದೀಗ ಅವರ ಮತ್ತೊಂದು ಚಿತ್ರ 'ಹಿಲ್ಟರ್' ಸೆಟ್ಟೇರುವುದಕ್ಕೂ ಮುನ್ನವೇ ವಿವಾದಕ್ಕೆ ನಾಂದಿ ಹಾಡಿದೆ. ಶೀರ್ಷಿಕೆ ಕಾರಣದಿಂದ ವಿವಾದ ಸುತ್ತಿಕೊಂಡಿದೆ. ರಘು ಹಾಸನ್ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದ ಟೈಟಲನ್ನು ಈಗಾಗಲೆ ಮತ್ತೊಬ್ಬ ನಿರ್ದೇಶಕ ಕಮ್ ನಿರ್ಮಾಪಕರಾದ ಟೇಶಿ ವೆಂಕಟೇಶ್ ಅವರ ಪಡೆದಿದ್ದಾರೆ. [ಕಿಚ್ಚ ಸುದೀಪ್ ಬೆಳ್ಳಿ ಕಿರೀಟ ನಿರಾಕರಿಸಿದ್ದು ಯಾಕೆ?]

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೆ 'ಹಿಟ್ಲರ್' ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿರುವ ಟೇಶಿ ವೆಂಕಟೇಶ್, ಆ ಶೀರ್ಷಿಕೆಯನ್ನು ಬೇರೆಯರಿಗೆ ಕೊಡಲ್ಲ ಎಂದು ಹೇಳಿದ್ದಾರೆ. ಈಗ ವಿಧಿಯಿಲ್ಲದೆ ತಮ್ಮ ಚಿತ್ರಕ್ಕೆ 'ಪ್ರೇಮ್ ಹಿಟ್ಲರ್' ಎಂದು ಹೆಸರಿಟ್ಟು ಪೋಸ್ಟರನ್ನು ಬಿಡುಗಡೆ ಮಾಡಿದ್ದಾರೆ ರಘು.

Prem's Hitler lands in title controversy

ಈ ಬಗ್ಗೆ ವೆಂಕಟೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ಸದ್ಯಕ್ಕೆ ಹಿಟ್ಲರ್ ಶೀರ್ಷಿಕೆ ವಿವಾದ ಫಿಲಂ ಚೇಂಬರ್ ಅಂಗಳದಲ್ಲಿದೆ. ಈ ಹಿಂದೆ 'ಲೀಡರ್' ಎಂಬ ಶೀರ್ಷಿಕೆಯೂ ವಿವಾದಕ್ಕೆ ಗುರಿಯಾಗಿತ್ತು. ಅದೇ ಶೀರ್ಷಿಕೆಯನ್ನು ಸ್ವಲ್ಪ ಬದಲಾಯಿಸಿ 'ದಿ ಲೀಡರ್ ಶಿವರಾಜ್ ಕುಮಾರ್' ಎಂದು ಹೆಸರಿಡಲಾಗಿತ್ತು.

ಈಗ ರಘು ಹಾಸನ್ ಅವರು ಅದನ್ನೇ ನಿದರ್ಶನವಾಗಿ ತೆಗೆದುಕೊಂಡು ತಾವು 'ಪ್ರೇಮ್ ಹಿಟ್ಲರ್' ಎಂದು ಹೆಸರಿಟ್ಟಿದ್ದಾರೆ. ವಿವಾದ ಈಗಷ್ಟೇ ಶುರುವಾಗಿದೆ. ಅದು ಮುಂದೆ ಇನ್ಯಾವ ಸ್ವರೂಪ ಪಡೆಯುತ್ತದೋ ಎಂಬುದನ್ನು ಕಾದುನೋಡಬೇಕಷ್ಟೆ.

ಅಂದಹಾಗೆ 'ಹಿಟ್ಲರ್' ಸಿನಿಮಾವನ್ನು ಟೇಶಿ ವೆಂಕಟೇಶ್ ಅವರು ಸುದೀಪ್ ನಾಯಕ ನಟನಾಗಿ ನಿರ್ಮಿಸುತ್ತಿದ್ದಾರೆ. ಇನ್ನು 'ಪ್ರೇಮ್ ಹಿಟ್ಲರ್' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಇದ್ದು ಕೃತಿ ಕರಬಂಧ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. (ಏಜೆನ್ಸೀಸ್)

English summary
Direrector cum actor 'Jogi' Prem's new film 'Hitler' lands in title controversy, The movie directed by Raghu Hassan. But another director-producer Teshi Venkatesh had already registered that same title and had refused to give the title to Raghu Hassan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada