»   » ಪ್ರೇಮ್ ಅಭಿನಯದ 'ಡಿಕೆ' ಚಿತ್ರದ ಮುನ್ನೋಟ

ಪ್ರೇಮ್ ಅಭಿನಯದ 'ಡಿಕೆ' ಚಿತ್ರದ ಮುನ್ನೋಟ

Posted By: ಉದಯರವಿ
Subscribe to Filmibeat Kannada

ಪ್ರೇಮ್ ಅಭಿನಯದ 'ಡಿಕೆ' ಚಿತ್ರ ಶುಕ್ರವಾರ (ಫೆ.12) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದ ಬಗೆಗಿನ ಕುತೂಹಲಕ್ಕೂ ತೆರೆಬೀಳುವ ಸಮಯ. ಈ ಬಾರಿ ಪ್ರೇಮ್ ಏನೆಲ್ಲಾ ಗಿಮಿಕ್ ಮಾಡಿದ್ದಾರೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

ಬೆಂಗಳೂರಿನ ಮೇನಕ ಪ್ರಮುಖ ಚಿತ್ರಮಂದಿರ ಸೇರಿದಂತೆ ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಶೀರ್ಷಿಕೆಯ ಅರ್ಥ ಏನಿರಬಹುದು, ಡಿಕೆ ಅಂದ್ರೆ ಯಾರು ಎಂಬುದಕ್ಕೆ ಉತ್ತರ ಸಿಗುವ ಸಮಯ ಬಂದೇ ಬಿಟ್ಟಿದೆ.

ಡಿಕೆ ಅಂದ್ರೆ ಏನು ಎಂಬ ಬಗ್ಗೆ ಪ್ರೇಮ್ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದಾರೆ. 'ಡಿಕೆ' ಅಂದ್ರೆ ದಿಲ್ ಖುಷ್ ಎಂದಷ್ಟೇ ಹೇಳಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ಸೆನ್ಸಾರ್ ನಲ್ಲಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವಿಜಯ್ ಕಂಪಳಿ (ಉದಯ ಪ್ರಕಾಶ್) ಅವರ ಆಕ್ಷನ್ ಕಟ್ ನಲ್ಲಿ ಮೂಡಿಬಂದಿರುವ ಚಿತ್ರ ಇದು.

ಸೆಕ್ಸಿ ಕ್ವೀನ್ ಸನ್ನಿ ಲಿಯೋನ್ ಐಟಂ ಸಾಂಗ್

ಈ ಚಿತ್ರವನ್ನು ಪ್ರೇಮ್ ಅವರ ಬಾಳಸಂಗಾತಿ ರಕ್ಷಿತಾ ಅವರು ನಿರ್ಮಿಸಿದ್ದಾರೆ. ಪ್ರೇಮ್ ಜೊತೆ ಚೈತ್ರಾ ಚಂದ್ರನಾಥ್ ಅಭಿನಯಿಸಿದ್ದು ವಿಶೇಷ ಹಾಡಿನಲ್ಲಿ ಬಾಲಿವುಡ್ ನ ಸೆಕ್ಸಿ ಕ್ವೀನ್ ಸನ್ನಿ ಲಿಯೋನ್ ಅಭಿನಯಿಸಿದ್ದಾರೆ. "ಬಾಗಿಲು ತೆಗೆಯೇ ಸೇಸಮ್ಮ..." ಎಂಬ ಹಾಡು ಈಗಾಗಲೆ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಿದೆ.

ಚಿತ್ರದಲ್ಲಿ ಕಾಳಿ ಮಠದ ಋಷಿಕುಮಾರ

ವಿವಾದಾತ್ಮಕ ಸ್ವಾಮೀಜಿ ಕಾಳಿ ಮಠದ ಋಷಿಕುಮಾರ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಹಾಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕಥೆ ಇರಬಹುದೇ ಎಂಬ ಸಣ್ಣ ಅನುಮಾನವೂ ಸ್ಯಾಂಡಲ್ ವುಡ್ ನಲ್ಲಿದೆ. ಆದರೆ ಆ ಮಾತನ್ನು ಪ್ರೇಮ್ ತಳ್ಳಿಹಾಕುತ್ತಾರೆ.

ಮೋದಿ, ಕರುಣಾನಿಧಿ, ಸೋನಿಯಾ

ಚಿತ್ರದ ಇನ್ನೊಂದು ಹಾಡಿನಲ್ಲಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಎಂ ಕರುಣಾನಿಧಿ ಹಾಗೂ ಜಯಲಲಿತಾ ಹೆಸರುಗಳನ್ನು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಈ ಹಾಡನ್ನು ಹಾಡಲು ನಾಲ್ಕು ಮಂದಿ ಗಾಯಕರು ನಿರಾಕರಿಸಿದ ಬಳಿಕ ಕಡೆಯದಾಗಿ ಗಾಯಕ ಹೇಮಂತ್ ಅವರು ಒಪ್ಪಿಕೊಂಡು ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ.

ರಾ ಲವ್ ಸ್ಟೋರಿ

ಡಿ ಕೆ ಸಿನಿಮಾದ ಟ್ಯಾಗ್ ಲೈನ್ ಆಗಿರೋದು ರಾ ಲವ್ ಸ್ಟೋರಿ ಅಂತ. ಇದು ಯಾಕೆ Raw ಅಂದ್ರೆ ರಕ್ಷಿತಾ ಪ್ರೇಮ್ ಲವ್ ಸ್ಟೋರಿ ಆಗಿರ್ಬಾರ್ದು ಅನ್ನೋ ಕುತೂಹಲ ನಮ್ಮದು.
ಡಿ ಕೆ ಶಿವಕುಮಾರನ್ನು ಆಹ್ವಾನಿಸಿರೋದು ನೋಡಿದ್ರೆ ಇದು ರಾಧಿಕಾ ಕುಮಾರಸ್ವಾಮಿಯವರ ಪ್ರೇಮಕಥೆನಾ ಅನ್ನೋ ಮತ್ತೊಂದು ಕುತೂಹಲವೂ ಮೂಡ್ತಿದೆ.

ಅಬ್ ಕಿ ಬಾರ್ ಮೇರಾ ಸರ್ಕಾರ್

ಡಿ ಕೆ ಟ್ಯಾಗ್ ಲೈನ್ ರಾ ಲವ್ ಸ್ಟೋರಿಯಾದ್ರೆ ಟಾಪ್ ಲೈನ್ "ಅಬ್ ಕಿ ಬಾರ್ ಮೇರಾ ಸರ್ಕಾರ್" ಅಂತ. ಇದು ರಾಜಕೀಯಕ್ಕೂ ಲಿಂಕ್ ಇರೋ ಸ್ಟೋರಿ. ಹಾಗಾಗೀನೇ ಹಿಂದಿನ ಎರಡೂ ಲವ್ ಸ್ಟೋರಿಗಳಿಗೆ ಲಿಂಕ್ ಸಿಗ್ತಿದೆ. ಅತ್ಯಾಧುನಿಕ 7.1 ಸರೌಂಡ್ ಸೌಂಡ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಆನಂದಿಸಿ, ಚಿತ್ರ ವಿಮರ್ಶೆಯನ್ನು ನಿರೀಕ್ಷಿಸಿ.

English summary
Kannada movie DK preview, the Kannada Satirical film directed by Vijay Kampali. Produced by actress Rakshita, the film stars Prem and Chaitra Chandranath in the lead roles. Actress Sunny Leone features in a special item song Sesamma. The film is the first Kannada film to feature 7.1 surround sound.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada