»   » ಡೈರೆಕ್ಟರ್ ಪ್ರೇಮ್ ತ್ರಿಡಿ ಫಿಲಂ ಮಾಡ್ತಾರಂತೆ ಕಾಯ್ತಾ ಇರಿ

ಡೈರೆಕ್ಟರ್ ಪ್ರೇಮ್ ತ್ರಿಡಿ ಫಿಲಂ ಮಾಡ್ತಾರಂತೆ ಕಾಯ್ತಾ ಇರಿ

Posted By:
Subscribe to Filmibeat Kannada

ಈ ಹಿಂದೊಮ್ಮೆ ಪ್ರೇಮ್ ತ್ರಿಡಿ ಚಿತ್ರದ ಬಗ್ಗೆ ಮಾತನಾಡಿದ್ದರು. ಅದು ಜೋಗಯ್ಯ ಚಿತ್ರದಲ್ಲಿ ತ್ರಿಡಿ ಇರುತ್ತದೆ ಎಂದಿದ್ದರು. ಆದರೆ ತ್ರಿಡಿ ಎಂದು ಹೋದವರ ಕಿವಿಗೆ ಬೀಡಿ ಇಡಲಾಗಿತ್ತು. ಈ ಬಾರಿ ಮಾತ್ರ ಆ ರೀತಿ ಆಗಲ್ಲ ಎಂಬ ಭರವಸೆಯನ್ನು ಪ್ರೇಮ್ ನೀಡುತ್ತಿದ್ದಾರೆ.

ತಮ್ಮ ಮುಂದಿನ ಚಿತ್ರ ತ್ರಿಡಿ ಎಂದಿದ್ದಾರೆ. ಅಂದರೆ 'ದಾಸವಾಳ' ಚಿತ್ರದ ಬಳಿಕ ತ್ರಿಡಿ ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಗಾಗಿ ಈ ಚಿತ್ರವನ್ನು ಮಾಡಿಕೊಡುತ್ತಿದ್ದಾರೆ ಪ್ರೇಮ್.

Director Prem

ಸೌಂದರ್ಯಾ ಜಗದೀಶ್ ಅವರಿಗೆ ಸಿನಿಮಾ ಮಾಡಿಕೊಡುವುದಾಗಿ ಬಹಳ ಹಿಂದೆಯೇ ಪ್ರೇಮ್ ಕಮಿಟ್ ಆಗಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಆ ಚಿತ್ರವನ್ನು ಮಾಡುವುದಾಗಿ ಹೇಳಿದ್ದಾರೆ. ಅಂದಹಾಗೆ ಇದೊಂದು ತ್ರಿಡಿ ಮ್ಯೂಸಿಕಲ್ ಫಿಲಂ ಅಂತೆ.

ಸದ್ಯಕ್ಕೆ ಪ್ರೇಮ್ ಅವರ ಪತ್ನಿ ರಕ್ಷಿತಾ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚಾಮರಾಜನಗರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರೇಮ್ ಸಹ ತಮ್ಮ ಮಡದಿಗೆ ಹೆಲ್ಪ್ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ತ್ರಿಡಿ ಚಿತ್ರವಂತೆ. ಬಹುಶಃ ಜುಲೈ ಅಥವಾ ಆಗಸ್ಟ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

ದಾಸವಾಳ ಚಿತ್ರದಲ್ಲಿ ಪ್ರೇಮ್ ಅವರು ಟೂರಿಸ್ಟ್ ಗೈಡ್ ಪಾತ್ರ ಪೋಷಿಸುತ್ತಿದ್ದಾರೆ. ಆದರೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಎಂ.ಎಸ್.ರಮೇಶ್. ನಿರ್ಮಾಪಕ ಅಣಜಿ ನಾಗರಾಜ್. ಇತ್ತೀಚೆಗಷ್ಟೇ ಚಿತ್ರದ ಹಾಡುಗಳ ರೆಕಾರ್ಡಿಂಗ್ ನಡೆಯಿತು. ಚಿತ್ರೀಕರಣ ಮಾರ್ಚ್ 28ರಿಂದ ಆರಂಭವಾಗಿದೆ. (ಏಜೆನ್ಸೀಸ್)

English summary
Kannada films director Prem all set to direct 3D musical film which will be producing by Soundarya Jagadish. Prem has not revealed any details about the film. The film may launched in July or August.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada