»   » ಸಲ್ಮಾನ್ ಖಾನ್ ಗೆ ಸೆಡ್ಡು ಹೊಡೆದ ಅರ್ಜುನ್ ಸರ್ಜಾ.!

ಸಲ್ಮಾನ್ ಖಾನ್ ಗೆ ಸೆಡ್ಡು ಹೊಡೆದ ಅರ್ಜುನ್ ಸರ್ಜಾ.!

Posted By:
Subscribe to Filmibeat Kannada

ಯಾವುದೇ ಸಿನಿಮಾ ಆಗಲಿ ಅದನ್ನ ಜನರಿಗೆ ತಲುಪಿಸುವುದು ತುಂಬಾನೇ ಮುಖ್ಯವಾಗುತ್ತೆ. ಸಿನಿಮಾ ನಿರ್ಮಾಣ ಮಾಡೋದಷ್ಟೇ ಮುಖ್ಯ ಚಿತ್ರವನ್ನ ಪ್ರಚಾರ ಮಾಡೋದು. ಈ ಐಡಿಯಾದಲ್ಲಿ ನಟ ಅರ್ಜುನ್ ಸರ್ಜಾ ಈಗ ಮುಂದಿದ್ದಾರೆ.

ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಪ್ರೇಮ ಬರಹ' ಸಿನಿಮಾವನ್ನ ಅರ್ಜುನ್ ತನ್ನದೇ ಸ್ಟೈಲ್ ನಲ್ಲಿ ಪ್ರಚಾರ ಮಾಡಿದ್ದರು. ಮುಖ್ಯವಾದ ವ್ಯಕ್ತಿ ಬರ್ತಾರೆ ಎಂಬ ಸುಳಿವು ಕೊಟ್ಟಿದ್ದ ಹಾಗೆ ಸಿನಿಮಾರಂಗ ಹಾಗೂ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟಿದ್ದರು. ಪ್ರಚಾರದಿಂದ ಸಕ್ಸಸ್ ಆದ ಅರ್ಜುನ್ ಈಗ ಸಲ್ಮಾನ್ ಖಾನ್ ಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಮುಂದೆ ಓದಿ......

ಅರ್ಜುನ್ ಮುಂದೆ ಸಲ್ಲು ಡಲ್ಲು

ಇತ್ತೀಚೆಗಷ್ಟೇ ರಿಲೀಸ್ ಆದ 'ಪ್ರೇಮ ಬರಹ' ಸಿನಿಮಾದ ಟೀಸರ್ ಸೂಪರ್ ಹಿಟ್ ಆಗಿದೆ. ಚಂದನ್ ಹಾಗೂ ಐಶ್ವರ್ಯ ಅರ್ಜುನ್ ಸರ್ಜಾ ಅಭಿನಯದ ಈ ಚಿತ್ರದ ಟೀಸರ್ ಜನರು ಮೆಚ್ಚಿಕೊಳ್ಳುವುದರ ಜೊತೆಗೆ ಸ್ಯಾಂಡಲ್ ವುಡ್ ನ ಪ್ರತಿ ಕಲಾವಿದರು ಅದರ ಬಗ್ಗೆ ಮಾತನಾಡಿದ್ದಾರೆ.

'ಐಶ್ವರ್ಯ'ಗೆ ಸಿಕ್ತು ಭರ್ಜರಿ ಸ್ವಾಗತ

'ಪ್ರೇಮ ಬರಹ' ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ಟ್ರೇಲರ್ ನಷ್ಟೇ ಸದ್ದು ಮಾಡ್ತಿದೆ ಪ್ರೇಮಬರಹ ಟೀಸರ್. ಮೊದಲ ಸಿನಿಮಾದಲ್ಲೇ ನಟಿ ಐಶ್ವರ್ಯ ಸರ್ಜಾಗೆ ಕನ್ನಡಿಗರಿಂದ ಭರ್ಜರಿ ಸ್ವಾಗತ ಸಿಗುತ್ತಿದೆ.

ಗಡಿ ಕಾಯೋ ಸೈನಿಕನೇ ರಿಯಲ್ ಹೀರೋ

ಒಂದು ವಾರಗಳಿಂದ ಟೀಸರ್ ಲಾಂಚ್ ಗಾಗಿ ವಿಶೇಷ ಅತಿಥಿ ಬರ್ತಾರೆ ಅಂತ ಪ್ರಚಾರ ಮಾಡಿದ ನಿರ್ದೇಶಕರು ಕೊನೆಯಲ್ಲಿ ಸೈನಿಕನಿಗಾಗಿ ಈ ಟೀಸರ್ ಅನ್ನ ಅರ್ಪಣೆ ಮಾಡಿದ್ದಾರೆ. ವೀರಮರಣ ಹೊಂದಿದ ಹನುಂತಪ್ಪ ಕೊಪ್ಪದ್ ಅವರ ಪತ್ನಿ 'ಪ್ರೇಮ ಬರಹ' ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

ಆಡಿಯೋ ಬಿಡುಗಡೆಗೆ ಸಿದ್ದತೆ

ಟ್ಯೂನ್ ಸ್ಮಾಷ್ ಸ್ವರ್ಧೆಯಲ್ಲಿ ಹಾಡನ್ನ ಆಯ್ಕೆ ಮಾಡಿದ ಚಿತ್ರತಂಡ, ಈಗ ಆಡಿಯೋ ಬಿಡುಗಡೆಗೆ ತಯಾರಿ ನಡೆಸಿದೆ. ಸದ್ಯ, ಚಿತ್ರೀಕರಣವನ್ನೂ ಮುಗಿಸಿರುವ ನಿರ್ದೇಶಕ ಸರ್ಜಾ ವರ್ಷಾಂತ್ಯಕ್ಕೆ ಸಿನಿಮಾವನ್ನ ತೆರೆ ಮೇಲೆ ತರುವ ಸಾಧ್ಯತೆಗಳಿವೆ.

English summary
prema baraha kannada movie teaser going to be viral on youtube,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X