For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ, ರಾಷ್ಟ್ರಪತಿಗೂ ತಂದರು ಆತಂಕ!

  |

  ಭಾರತದಲ್ಲಿ ಈವರೆಗೆ (ಮಾರ್ಚ್ 20) 223 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇಂದು ಬಾಲಿವುಡ್ ಸೆಲೆಬ್ರಿಟಿ ಒಬ್ಬರಿಗೂ ಸಹ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

  ಬಾಲಿವುಡ್‌ ನ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ಅವರಿಗೆ ಕೊರೊನಾ ವೈರಸ್ ಇರುವುದು ಇಂದು ಧೃಢವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

  ಆದರೆ ಈ ಬಾಲಿವುಡ್ ಗಾಯಕಿ ಕೊರೊನಾ ವೈರಸ್ ಪಾಸಿಟಿವ್ ಆಗಿ ಪತ್ತೆಯಾಗಿರುವುದು ಸ್ವತಃ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸಹ ಆತಂಕ ಪಡುವಂತೆ ಮಾಡಿದೆ. ರಾಷ್ಟ್ರಪತಿ ಮಾತ್ರವಲ್ಲದೆ, ಸಂಸದರು, ಮಾಜಿ ಸಿಎಂಗಳೂ ಸಹ ಆತಂಕಕ್ಕೆ ತುತ್ತಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್.

  ಲಖನೌದಲ್ಲಿ ಪಾರ್ಟಿ ಮಾಡಿದ್ದ ಕನ್ನಿಕಾ ಕಪೂರ್

  ಲಖನೌದಲ್ಲಿ ಪಾರ್ಟಿ ಮಾಡಿದ್ದ ಕನ್ನಿಕಾ ಕಪೂರ್

  ಹೌದು, ಲಂಡನ್‌ನಿಂದ ಕಳೆದ ವಾರ ಬಂದಿದ್ದ ಕನ್ನಿಕಾ ಕಪೂರ್ ಲಕ್ನೋದಲ್ಲಿ ಪಾರ್ಟಿಯೊಂದನ್ನು ನೀಡಿದ್ದರು. ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಸಿಎಂ ಬಿಜೆಪಿಯ ವಸುಂದರಾ ರಾಜೆ, ಸಂಸದ ದುಷ್ಯಂತ್ ಸಿಂಗ್ ಸಹ ಭಾಗವಹಿಸಿದ್ದರು. ಕನ್ನಿಕಾ ಗೆ ಕೊರೊನಾ ಇರುವುದು ಧೃಡವಾದ ಮೇಲೆ ಅವರೂ ಈಗ ಹೋಂ ಕ್ವಾರಂಟೈನ್‌ ನಲ್ಲಿದ್ದಾರೆ.

  ರಾಷ್ಟ್ರಪತಿಯನ್ನು ಭೇಟಿ ಮಾಡಿದ್ದ ದುಷ್ಯಂತ್ ಸಿಂಗ್

  ರಾಷ್ಟ್ರಪತಿಯನ್ನು ಭೇಟಿ ಮಾಡಿದ್ದ ದುಷ್ಯಂತ್ ಸಿಂಗ್

  ಆತಂಕದ ವಿಷಯವೆಂದರೆ ಲಕ್ನೋದ ಆ ಪಾರ್ಟಿ ಮುಗಿಸಿಕೊಂಡು ದುಷ್ಯಂತ್ ಸಿಂಗ್ ಲೋಕಸಭೆಗೆ ಹೋಗಿದ್ದರು. ಅಲ್ಲಿ ಹಲವಾರು ಸಂಸದರು, ಸಚಿವರನ್ನು ಭೇಟಿ ಮಾಡಿದ್ದರು. ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರನ್ನೂ ಭೇಟಿ ಮಾಡಿದ್ದರು. ಸಂಸದ ಡೆರೆಕ್ ಓ ಬ್ರಿಯನ್ ಪಕ್ಕವೇ ಎರಡು ಗಂಟೆ ಕೂತಿದ್ದರು.

  ವಸುಂಧರಾ ರಾಜೆ ಸಹ ಹೋಂ ಕ್ಯಾರೆಂಟೈನ್‌ನಲ್ಲಿ

  ವಸುಂಧರಾ ರಾಜೆ ಸಹ ಹೋಂ ಕ್ಯಾರೆಂಟೈನ್‌ನಲ್ಲಿ

  ಪ್ರಸ್ತುತ ವಸುಂಧರಾ ರಾಜೆ ಮತ್ತು ದುಷ್ಯಂತ್ ಸಿಂಗ್ ಮನೆಯಲ್ಲಿ ಒಬ್ಬರೇ ಇದ್ದಾರೆ. ಒಂದೊಮ್ಮೆ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾದರೆ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಗೂ ಸೋಂಕು ಹತ್ತಿದೆಯೇ ಎಂಬ ಪರೀಕ್ಷೆ ಮಾಡಲೇಬೇಕಾಗುತ್ತದೆ. ಕೆಲ ಕ್ಷಣದ್ದಷ್ಟೆ ಆಗಿದ್ದ ಈ ಭೇಟಿಯಲ್ಲಿ ವೈರಸ್ ಹರಿಡಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

  ತಮ್ಮ ಪ್ರವಾಸದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರಾ ಗಾಯಕಿ

  ತಮ್ಮ ಪ್ರವಾಸದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರಾ ಗಾಯಕಿ

  ಇನ್ನು ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಅವರು ತಮ್ಮ ಪ್ರವಾಸ ಹಿಸ್ಟರಿಯನ್ನು ಮುಚ್ಚಿಟ್ಟು ಪಾರ್ಟಿಗೆ ಹೋಗಿದ್ದರು ಎಂಬ ದೂರುಗಳು ಕೇಳಿ ಬಂದಿದೆ. ಆದರೆ ಕನ್ನಿಕಾ ಕಪೂರ್ ಇದನ್ನು ಒಪ್ಪಿಲ್ಲ.

  ಆರೋಗ್ಯಾಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ: ಕನ್ನಿಕಾ

  ಆರೋಗ್ಯಾಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ: ಕನ್ನಿಕಾ

  ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮೂರು ದಿನದಿಂದಲೂ ನನಗೆ ಜ್ವರ ಬಂದಿರುವ ಬಗ್ಗೆ ಹೇಳುತ್ತಲೇ ಇದ್ದೆ. ಆದರೆ ಆರೋಗ್ಯಾಧಿಕಾರಿಗಳು ಉಸಿರಾಟದ ತೊಂದರೆ ಇದ್ದರೆ ಮಾತ್ರವೇ ತಿಳಿಸಿ ಎಂದರು. ಆದರೆ ನಾನು ಸತತ ಪ್ರಯತ್ನದ ಬಳಿಕ ಖಾಸಗಿಯಾಗಿ ಪರೀಕ್ಷೆ ಮಾಡಿಸಿದೆ. ಆಗ ನನಗೆ ಕೋವಿಡ್ 19 ಇರುವುದು ಗೊತ್ತಾಯಿತು ಎಂದು ಹೇಳಿದ್ದಾರೆ.

  English summary
  President Ram Nath Kovind also in scare of Ramnath Kovind. MP Dushyant Singh met president Ram Nath Kovind who present in Kannika Kapoor's party. She tested coronavirus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X