»   » ಪ್ರಿಯಾ ತರಹ ಕಣ್ಸನ್ನೆ ಮಾಡಿದ್ರೆ ಕಾಲೇಜ್ ನಿಂದ ಡಿಬಾರ್.! ಹುಷಾರ್.!

ಪ್ರಿಯಾ ತರಹ ಕಣ್ಸನ್ನೆ ಮಾಡಿದ್ರೆ ಕಾಲೇಜ್ ನಿಂದ ಡಿಬಾರ್.! ಹುಷಾರ್.!

Posted By:
Subscribe to Filmibeat Kannada
ಪ್ರಿಯಾ ತರಹ ಕಣ್ಸನ್ನೆ ಮಾಡಿದ್ರೆ ಕಾಲೇಜ್ ನಿಂದ ಡಿಬಾರ್.! | Filmibeat Kannada

ಪ್ರಿಯಾ ಪ್ರಕಾಶ್ ವಾರಿಯರ್ ಯಾರಪ್ಪಾ ಅಂದ್ರೆ, ಚಿಕ್ಕ ಮಕ್ಕಳು ಕೂಡ 'ಕೆಣಕುವ ಕಣ್ಣೋಟದ ಹುಡುಗಿ' ಅಂತ ಉದ್ಗಾರ ಮಾಡ್ತಾರೆ. ಸಾಲದಕ್ಕೆ ಥೇಟ್ ಪ್ರಿಯಾ ಪ್ರಕಾಶ್ ವಾರಿಯರ್ ಸ್ಟೈಲ್ ನಲ್ಲೇ 'ಕಣ್ಸನ್ನೆ' ಕೂಡ ಮಾಡಿ ತೋರಿಸ್ತಾರೆ. ಅಷ್ಟರಮಟ್ಟಿಗೆ ನ್ಯಾಷನಲ್ ಲೆವೆಲ್ ನಲ್ಲಿ ಫೇಮಸ್ ಆಗಿರುವ ಹುಡುಗಿ... ಮಲ್ಲು ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್.

'ಒರು ಅಡಾರ್ ಲವ್' ನಲ್ಲಿ ಪ್ರಿಯಾ ಹೇಗೆ ಕಣ್ಣಲ್ಲೇ ಕೊಲ್ತಾರೋ, ಅದೇ ತರಹ ಸಾವಿರಾರು ಹುಡುಗಿಯರು ಅನುಕರಣೆ ಮಾಡಿರುವ ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕಣ್ಸನ್ನೆ ಅನುಕರಣೆ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಮೀಸಲು ಆಗಿದ್ದರೆ ಪರ್ವಾಗಿಲ್ಲ. ಸ್ಕೂಲ್ ಹಾಗೂ ಕಾಲೇಜ್ ಗಳಲ್ಲಿ ಕ್ಲಾಸ್ ನಡೆಯುತ್ತಿರುವ ಸಂದರ್ಭದಲ್ಲಿ ಹುಡುಗರು ಹಾಗೂ ಹುಡುಗಿಯರ ಮಧ್ಯೆ 'ಕಣ್ಸನ್ನೆ' ಆಗುತ್ತಿದ್ದರೆ, ಮೇಷ್ಟ್ರು ಹೇಗೆ ತಾನೆ ಸಹಿಸಿಕೊಳ್ಳಬೇಕು.?

ಒಂದ್ಸಲಿ ಆದರೆ ಓಕೆ, ಎರಡನೇ ಸಲಿ ಆದರೂ ಪರ್ವಾಗಿಲ್ಲ ಅನ್ಬಹುದು. ಆದರೆ ಪದೇ ಪದೇ ಹುಡುಗರತ್ತ ನೋಡುತ್ತ ಹುಡುಗಿಯರು ಕ್ಲಾಸ್ ನಲ್ಲಿ ಕಣ್ ಹೊಡೆಯುತ್ತಿದ್ದರೆ ಕ್ಲಾಸ್ ಟೀಚರ್ ಸುಮ್ನಿರ್ತಾರಾ.? ಖಂಡಿತ ಇಲ್ಲ.! ಅದಕ್ಕೊಂದು ಉತ್ತಮ ನಿದರ್ಶನ ಇಲ್ಲಿದೆ ಓದಿರಿ....

ಕಣ್ಸನ್ನೆ ಮಾಡಿದ್ರೆ ಡಿಬಾರ್.!

ಕ್ಲಾಸ್ ನಲ್ಲಿ ಕೂತುಕೊಂಡು ಕಣ್ ಹೊಡೆಯುವವರನ್ನ ಕಾಲೇಜ್ ನಿಂದ ಒಂದು ವರ್ಷ ಡಿಬಾರ್ ಮಾಡುವ ಕಠಿಣ ನಿಯಮವನ್ನು ಕೊಯಮತ್ತೂರಿನ ಕಾಲೇಜ್ ವೊಂದು ಜಾರಿಗೆ ತಂದಿದೆ. ಕಣ್ಸನ್ನೆಗಳಿಂದ ತರಗತಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಕೆಲ ಪ್ರಾಧ್ಯಾಪಕರು ದೂರು ನೀಡಿದ್ರಿಂದಾಗಿ, ಕಾಲೇಜಿನ ಪ್ರಿನ್ಸಿಪಾಲ್ ಈ ರೀತಿ ಕ್ರಮ ಕೈಗೊಂಡಿದ್ದಾರೆ.

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

ಯಾವ ಕಾಲೇಜ್.?

ಕೊಯಮತ್ತೂರಿನಲ್ಲಿರುವ ವಿ.ಎಲ್.ಬಿ ಜಾನಕಿ ಅಮ್ಮಾಳ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್ ನಲ್ಲಿ ಕಣ್ಸನ್ನೆ ಮಾಡುವ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಪ್ರಿಯಾ ವಾರಿಯರ್ ಕಣ್ಣಿನ ನೋಟಕ್ಕೆ ಹಿಂದೆ ಬಿದ್ದ ಹುಡುಗರ ಸಂಖ್ಯೆ ಅಪಾರ

ಎಲ್ಲೆಡೆ ಸಿಸಿಟಿವಿ ಕಣ್ಗಾವಲು

''ಪ್ರಿಯಾ ಪ್ರಕಾಶ್ ವಾರಿಯರ್ ಅವರ 'ಕಣ್ಸನ್ನೆ' ವಿಡಿಯೋ ನೋಡಿ ಕೆಲ ವಿದ್ಯಾರ್ಥಿನಿಯರು ಕ್ಲಾಸ್ ರೂಮ್ ನಲ್ಲಿ ಅನುಕರಣೆ ಮಾಡುತ್ತಿರುವುದನ್ನ ಗಮನಿಸಿ ಪ್ರಾಧ್ಯಾಪಕರು ದೂರಿದ್ದಾರೆ. ಹೀಗಾಗಿ, ಕ್ಲಾಸ್ ರೂಮ್ ನಲ್ಲಿ ಅಂತಹ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಿ.ಸಿ.ಟಿ.ವಿ ಅಳವಡಿಸಲಾಗಿದೆ. ಅಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಂದ ಕಂಡುಬಂದಲ್ಲಿ ಒಂದು ವರ್ಷ ಕಾಲೇಜ್ ನಿಂದ ಡಿಬಾರ್ ಮಾಡಲಾಗುವುದು'' ಎಂದು ಸರ್ಕ್ಯುಲರ್ ನಲ್ಲಿ ಕಾಲೇಜ್ ಆಡಳಿತ ಮಂಡಳಿ ತಿಳಿಸಿದೆ.

ಇದು ಸತ್ಯವೋ, ಸುಳ್ಳೋ.?

ಕಣ್ಸನ್ನೆ ಮಾಡುವವರನ್ನ ಕಾಲೇಜ್ ನಿಂದ ಡಿಬಾರ್ ಮಾಡಲಾಗುವುದು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. ಯಾರೋ ಕಿಡಿಗೇಡಿಗಳು ನಕಲಿ ಸುತ್ತೋಲೆ ಮುದ್ರಿಸಿ ಕಾಲೇಜ್ ಗೋಡೆಗಳ ಮೇಲೆ ಅಂಟಿಸಿದ್ದಾರೆ ಎನ್ನಲಾಗಿದೆ. ಆದರೂ, ಒಂದು 'ಕಣ್ಸನ್ನೆ'ಯಿಂದ ಏನೇನ್ನೆಲ್ಲಾ ಆಗಿದೆ ನೋಡಿ...

English summary
As per the circular, which is circulating in Social Media Platform, If Priya Prakash Varrier's viral eye wink is imitated in Classroom, The guilty will be debarred for one year from VLB Janakiammal Arts and Science college.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X