For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಪೋಸ್ಟರ್ ನೋಡಿ ಪತ್ನಿ ಪ್ರಿಯಾ ಏನ್ ಹೇಳಿದ್ರು

  |

  ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ.

  ನಟ ಸುದೀಪ್ ಪತ್ನಿ ಪ್ರಿಯಾ ಪೋಸ್ಟರ್ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬ್ರಿಲಿಯಂಟ್ ಪೋಸ್ಟರ್ ಎಂದ ಅವರು ಸುದೀಪ್ ರನ್ನು ನೋಡಿ ಹೆಮ್ಮೆ ಆಗುತ್ತದೆ ಎಂದಿದ್ದಾರೆ. ಸುದೀಪ್ ಏನು ಬೇಕಾದರೂ ಸಾಧನೆ ಮಾಡುವ ಮನಸ್ಸು ಹೊಂದಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.

  ಬಿಡುಗಡೆಗೂ ಮುಂಚೆ ಕಲೆಕ್ಷನ್ ಶುರು: 'ಪೈಲ್ವಾನ್' ಖಾತೆಗೆ 14 ಕೋಟಿ.!

  ಪತ್ನಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ಪತ್ನಿ ಹಾಗೂ ಮಗಳೇ ತನ್ನ ಸ್ಫೂರ್ತಿ ಎಂದಿದ್ದಾರೆ. ಈ ಪ್ರೋತ್ಸಾಹಕ್ಕೆ ಧನ್ಯವಾದ ತಿಳಿಸಿದ್ದಾರೆ.

  'ಪೈಲ್ವಾನ್' ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾವಾಗಿದೆ. ಕನ್ನಡ, ತಮಿಳು ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

  ನಟರಾದ ಚಿರಂಜೀವಿ, ಮೋಹನ್ ಲಾಲ್, ವಿಜಯ್ ಸೇತುಪತಿ, ಸುನೀಲ್ ಶೆಟ್ಟಿ ಹಾಗೂ ಸುದೀಪ್ ಪೈಲ್ವಾನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

  English summary
  Kiccha Sudeep's wife Priya Sudeep tweets about 'Pailwan' movie poster. The movie is directed by krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X