»   » ಫೇಸ್ ಬುಕ್ ಮಾಲೀಕನನ್ನೇ ಹಿಂದಿಕ್ಕಿದ್ದ ಪ್ರಿಯಾ ವಾರಿಯರ್

ಫೇಸ್ ಬುಕ್ ಮಾಲೀಕನನ್ನೇ ಹಿಂದಿಕ್ಕಿದ್ದ ಪ್ರಿಯಾ ವಾರಿಯರ್

Written By:
Subscribe to Filmibeat Kannada
ಫೇಸ್ ಬುಕ್ ಮಾಲೀಕನನ್ನೇ ಹಿಂದಿಕ್ಕಿದ್ದ ಪ್ರಿಯಾ ವಾರಿಯರ್ | Filmibeat Kannada

ಕಣ್ಣಿನ ನೋಟದಲ್ಲೇ ಅಪಾರ ಅಭಿಮಾನಿಗಳನ್ನ ಗಿಟ್ಟಿಸಿಕೊಂಡ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಬಳಗ ಹೆಚ್ಚಾಗುತ್ತಿದೆ. ಒಂದೇ ದಿನದಲ್ಲೇ ಇನ್‌ಸ್ಟಾಗ್ರಾಂ ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನ ಪಡೆದುಕೊಂಡಿದ್ದ ನಟ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ.

ಮೊದ ಮೊದಲಿಗೆ ಪ್ರಿಯಾ ಅಭಿನಯದಕ್ಕೆ ಮನಸೋತಿದ್ದ ಜನರು ಈಗ ಪ್ರಿಯಾ ವಾರಿಯರ್ ಧ್ವನಿಗೆ ಮರುಳಾಗಿದ್ದಾರೆ. ಕೇವಲ ಆಕ್ಟಿಂಗ್ ನಲ್ಲಿ ಮಾತ್ರವಲ್ಲದೆ ಪ್ರಿಯಾ ಅದ್ಬುತವಾಗಿ ಹಾಡುತ್ತಾರೆ ಎನ್ನುವುದನ್ನ ತಿಳಿದ ನಂತರ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ.

ಇತ್ತೀಚಿಗಷ್ಟೆ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನೇ ಇನ್‌ಸ್ಟಾಗ್ರಾಂ ನಲ್ಲಿ ಹಿಂದಿಕ್ಕಿದ್ದ ನಟಿ ಈಗ ಫೇಸ್ ಬುಕ್ ಮಾಲಿಕನಿಗಿಂತಲೂ ಫೇಮಸ್ ಆಗಿದ್ದಾರೆ. ಪ್ರಿಯಾ ಮಾರ್ಕ್ ಜುಕರ್ಬರ್ಗ್(Mark Zuckerberg) ಗಿಂತಲೂ ಪ್ರಖ್ಯಾತಿ ಪಡೆದಿದ್ದು ಹೇಗೆ ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಇನ್‌ಸ್ಟಾಗ್ರಾಂ ನಲ್ಲಿ ಪ್ರಿಯಾ ಪ್ರಖ್ಯಾತಿ

ಇರು ಅಡಾರ್ ಲವ್ ಸಿನಿಮಾದ ಒಂದೇ ಒಂದು ದೃಶ್ಯದ ಮೂಲಕ ಬಾರಿ ಪ್ರಖ್ಯಾತಿ ಪಡೆದುಕೊಂಡಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಪ್ರಖ್ಯಾತಿ ಮತ್ತಷ್ಟು ಹೆಚ್ಚಾಗಿದೆ.

ಕ್ರಿಸ್ಟಿಯಾನೋ ರೊನಾಲ್ಡೊ ಹಿಂದಿಕ್ಕಿದ ನಟಿ

ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ಇನ್‌ಸ್ಟಾಗ್ರಾಂ ನಲ್ಲಿ ಅತೀ ಹೆಚ್ಚು ಅಭಿಮಾನಿಗಳು ಹುಟ್ಟುಕೊಳ್ಳುತ್ತಿದ್ದಾರೆ . ಸಿನಿಮಾ ದೃಶ್ಯ ಬಿಡುಗಡೆ ಆದ ಒಂದೇ ದಿನದಲ್ಲಿ ಮಿಲಿಯನ್ ಲೆಕ್ಕದಲ್ಲಿ ಫಾಲೋವರ್ಸ್ ಪ್ರಿಯಾ ಅವರ ಹಿಂದೆ ಬಿದಿದ್ದಾರೆ. ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗಿಂತಲೂ ಹೆಚ್ಚು ಫಾಲೋವರ್ಸ್ ಪ್ರಿಯಾ ಹೊಂದಿದ್ದಾರೆ.

ನಾಲ್ಕು ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್

ಫೇಸ್ ಬುಕ್ ನ ಕೋ ಫೌಂಡರ್ ಆಗಿರುವ ಮಾರ್ಕ್ ಜುಕರ್ಬರ್ಗ್ ಅವರಿಗಿಂತಲೂ ಪ್ರಿಯಾ ಪ್ರಕಾಶ್ ಅವರಿಗೆ ಹೆಚ್ಚು ಫಾಲೋವರ್ಸ್ ಇದ್ದಾರೆ. ಸದ್ಯ ಪ್ರಯಾ ಇನ್‌ಸ್ಟಾಗ್ರಾಂ ನಲ್ಲಿ ೪ ಮಿಲಿಯನ್ ಹೆಚ್ಚು ಫಾಲೋವರ್ಸ್ ಇದ್ದಾರೆ.

ಅದ್ಬುತ ಧ್ವನಿಗೆ ಮನಸೋತರು

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದಲ್ಲಿ ಮಾತ್ರವಲ್ಲದೆ ಅದ್ಬುತವಾಗಿ ಹಾಡುತ್ತಾರೆ ಎನ್ನುವ ವಿಚಾರ ತಿಳಿದು ಬಂದಿಗೆ ಇತ್ತೀಚಿಗಷ್ಟೇ ಪ್ರಿಯಾ ಹಾಡಿರುವ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

English summary
After coming close to beating Cristiano Ronaldo record by clocking in more than 600k followers on Instagram in a day, internet sensation Priya Prakash Varrier has more Instagram followers than Mark Zuckerberg.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada