»   » ಪ್ರಿಯಾ ವಾರಿಯರ್ ಕಣ್ಣಿನ ನೋಟಕ್ಕೆ ಹಿಂದೆ ಬಿದ್ದ ಹುಡುಗರ ಸಂಖ್ಯೆ ಅಪಾರ

ಪ್ರಿಯಾ ವಾರಿಯರ್ ಕಣ್ಣಿನ ನೋಟಕ್ಕೆ ಹಿಂದೆ ಬಿದ್ದ ಹುಡುಗರ ಸಂಖ್ಯೆ ಅಪಾರ

Posted By:
Subscribe to Filmibeat Kannada

ಪ್ರಿಯಾ ವಾರಿಯರ್ ಎರಡು ದಿನಗಳ ಹಿಂದೆ ಈಕೆ ಯಾರು ಅನ್ನೋದು ಅದೆಷ್ಟೋ ಜನರಿಗೆ ಗೊತ್ತಿರಲಿಲ್ಲ. ಆದರೆ ಇಂದು ನ್ಯಾಷನಲ್ ಕ್ರಶ್ ಅಂತಾನೇ ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತಿ ಪಡೆದುಕೊಂಡಿರುವ ನಟಿ.

ಪ್ರತಿಯೊಬ್ಬರ ಫೇಸ್ ಬುಕ್ , ವಾಟ್ಸ್ ಆಪ್ ಸ್ಟೇಟಸ್ ಗಳಲ್ಲಿ ಪ್ರಿಯಾ ವಾರಿಯರ್ ಅವರದ್ದೇ ಸದ್ದು . ಟ್ರೋಲ್ ಪೇಜ್ ಗಳು ಪ್ರಿಯಾ ಬಗ್ಗೆ ಇಂಟರ್ ನ್ಯಾಷನಲ್ ನಲ್ಲಿ ಚರ್ಚೆ ಆಗುತ್ತಿರುವಂತೆ ಟ್ರೋಲ್ ಮಾಡುತ್ತಿದ್ದಾರೆ.

ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾ ಮಲೆಯಾಳಂ ಚಿತ್ರರಂಗಕ್ಕೆ ಮಾತ್ರ ಪರಿಚಿತರಾಗಿದ್ದರು. ಇಪ್ಪತ್ತು ಸೆಕೆಂಡ್ ಗಳಿರುವ ವಿಡಿಯೋ ನೋಡಿ ಮಲೆಯಾಳಂ ಚಿತ್ರರಂಗ ಮಾತ್ರವಲ್ಲದೇ ಇಡೀ ಸೌತ್ ಇಂಡಸ್ಟ್ರಿ ಪ್ರಿಯಾ ಅಭಿನಯಕ್ಕೆ ಫಿದಾ ಆಗಿದ್ದಾರೆ. ಒಂದೇ ದಿನಕ್ಕೆ ಪ್ರಿಯಾ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಗಗನಕ್ಕೇರಿದೆ. ಹಾಗಾದ್ರೆ ಸದ್ಯ ಪ್ರಿಯಾ ಇನ್‌ಸ್ಟಾಗ್ರಾಂ ಫಾಲೋವರ್ಸ್ ಎಷ್ಟು ಜನ. ಸೋಷಿಯಲ್ ನೆಟ್‌ವರ್ಕ್ ನಲ್ಲಿ ಪ್ರಿಯಾ ಬಗ್ಗೆ ಆಗುತ್ತಿರುವ ಚರ್ಚೆ ಏನು, ಟ್ರೋಲ್ ಪೇಜ್ ಗಳಲ್ಲಿ ಪ್ರಿಯಾ ವಾರಿಯರ್ ಬಗ್ಗೆ ಏನಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಕಣ್ಣಿನ ನೋಟಕ್ಕೆ ಕೋಟಿ ಫ್ಯಾನ್ಸ್

ಪ್ರಿಯಾ ವಾರಿಯರ್ ಈಗ ನ್ಯಾಷನಲ್ ಕ್ರಶ್ ಆಗಿರುವ ನಾಯಕಿ. 96 ಸಾವಿರ ಫಾಲೋವರ್ಸ್ ಗಳನ್ನ ಹೊಂದಿದ್ದ ಪ್ರಿಯಾ ಅವರ ಈಗಿನ ಅಭಿಮಾನಿಗಳ ಸಂಖ್ಯೆ 1.7 ಮಿಲಿಯನ್. ಒಂದೇ ದಿನಕ್ಕೆ ಇಷ್ಟು ಫ್ಯಾನ್ಸ್ ಗಳನ್ನ ಸಂಪಾದನೆ ಮಾಡಿದ್ದಾರೆ.

ಸಂಗೀತಕ್ಕೂ ಮನಸೋತ ಅಭಿಮಾನಿಗಳು

ಪ್ರಿಯಾ 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಚಿತ್ರದ ಹಾಡಿನ ದೃಶ್ಯವೇ ಈಗ ಸಖತ್ ಫೇಮಸ್ ಆಗುತ್ತಿರುವುದು. ವಿಶೇಷ ಎಂದರೆ 'ಒರು ಅಡಾರ್ ಲವ್' ಚಿತ್ರದ ಮ್ಯೂಸಿಕ್ ಗಿಂತಲೂ ಪ್ರಿಯಾ ಅಭಿನಯಕ್ಕೆ ಧನುಷ್ ಅವರ ಥ್ರೀ ಸಿನಿಮಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸೇರಿಸಲಾಗಿದೆ ಅದನ್ನೇ ಜನರು ಹೆಚ್ಚು ಇಷ್ಟ ಪಟ್ಟಿದ್ದು.

ಅಭಿಮಾನಿಗಳ ಬಳಿ ಇದೆ ಸಂಪೂರ್ಣ ಮಾಹಿತಿ

ಎರಡು ದಿನಗಳಿಂದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಿಯಾ ಅಭಿನಯಕ್ಕೆ ಮನಸೋತಿರುವ ಅಭಿಮಾನಿಗಳು ಪ್ರಿಯಾ ವಾರಿಯರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಹುಡುಕಿ ತೆಗೆದಿದ್ದಾರೆ. ಯಾವ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಏನು ಮಾಡುತ್ತಿದ್ದಾರೆ ಎಲ್ಲಾ ವಿವರಗಳನ್ನ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದಾರೆ.

ಉಳಿದ ಕಲಾವಿದರ ಬಗ್ಗೆ ಹುಡುಕಾಟ

'ಒರು ಅಡಾರ್ ಲವ್' ಹಾಡಿನಲ್ಲಿ ಪ್ರಿಯಾ ವಾರಿಯರ್ ಜೊತೆಯಲ್ಲಿ ಇನ್ನೂ ಮೂರು ಹುಡುಗಿಯರು ಅಭಿನಯಿಸಿದ್ದಾರೆ. ಶಾಲೆಯಲ್ಲಿ ನಡೆಯುವ ಲವ್ ಸ್ಟೋರಿ ಹಾಡಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಹಾಡಿನಲ್ಲಿ ಬರುವ ಮಿಕ್ಕ ನಾಯಕಿಯರ ಬಗ್ಗೆಯೂ ಮಾಹಿತಿ ಹುಡುಕುತ್ತಿದ್ದಾರೆ ಸಿಬಿಮಾ ಪ್ರೇಕ್ಷಕರು

English summary
Malayalam actres Priya Warrier is got 1.3 million people followers in Instagram. Priya Warrier is the 'Oru Adar Love' heroine of the movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada