»   » 'ಕೋಟಿಗೊಬ್ಬ-2' ರಿಲೀಸ್: ಕಿಚ್ಚ ಸುದೀಪ್ ಗೆ ಶುಭ ಕೋರಿದ ಪತ್ನಿ ಪ್ರಿಯಾ

'ಕೋಟಿಗೊಬ್ಬ-2' ರಿಲೀಸ್: ಕಿಚ್ಚ ಸುದೀಪ್ ಗೆ ಶುಭ ಕೋರಿದ ಪತ್ನಿ ಪ್ರಿಯಾ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ದಾಂಪತ್ಯ ಜೀವನ ಸರಿ ದಾರಿಗೆ ಮರಳುವ ಎಲ್ಲಾ ಲಕ್ಷಣಗಳು ಕಾಣ್ತಿವೆ.

ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಸುದೀಪ್-ಪ್ರಿಯಾ ಅರ್ಜಿ ಸಲ್ಲಿಸಿದ್ದರೂ, ವಿಚಾರಣೆಗೆ ಇಬ್ಬರೂ ಹಾಜರ್ ಆಗಿರಲಿಲ್ಲ. ಇನ್ನೂ ಕೌಟುಂಬಿಕ ಸಮಸ್ಯೆಯ ಕುರಿತು ಮನೆಯಲ್ಲೇ ಹಿರಿಯರ ಸಮ್ಮುಖದಲ್ಲಿ ದಂಪತಿ ಬಗೆಹರಿಸಿಕೊಳ್ಳುವ ಕುರಿತು ಮಾಹಿತಿ ಕೂಡ ಹೊರಬಿದ್ದಿತ್ತು.

Priya wishes Sudeep for 'Kotigobba-2' release

ಇದೇ ಗ್ಯಾಪ್ ನಲ್ಲಿ 'ಜಿಗರ್ ಥಂಡ' ಆಡಿಯೋ ರಿಲೀಸ್ ವೇಳೆ ಸುದೀಪ್ ಮತ್ತು ಪ್ರಿಯಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಕ್ಕ-ಪಕ್ಕ ಕುಳಿತಿದ್ದರು. ಈಗ ಇಬ್ಬರ ಟ್ವಿಟ್ಟರ್ ಸಂಭಾಷಣೆ ಶುರು ಆಗಿದೆ.

ನಾಳೆ (ಶುಕ್ರವಾರ, ಆಗಸ್ಟ್ 12) 'ಕೋಟಿಗೊಬ್ಬ-2' ಬಿಡುಗಡೆ ಆಗಲಿದೆ. ಈ ಹಿನ್ನಲೆಯಲ್ಲಿ ಪ್ರಿಯಾ, ಕಿಚ್ಚ ಸುದೀಪ್ ಗೆ ತಮ್ಮ ಟ್ವೀಟ್ ಮೂಲಕ 'ಗುಡ್ ಲಕ್' ಹೇಳಿದ್ದಾರೆ. [ಚಿತ್ರಗಳು; ಹುಟ್ಟುಹಬ್ಬದಂದು ಮಗಳನ್ನು ಕಂಡು ಅಪ್ಪಿ ಮುದ್ದಾಡಿದ ಸುದೀಪ್.!]

Priya wishes Sudeep for 'Kotigobba-2' release

ಪ್ರಿಯಾ ಮಾಡಿರುವ ಟ್ವೀಟ್ ಗೆ ಕಿಚ್ಚ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ. [ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?]

Priya wishes Sudeep for 'Kotigobba-2' release

ಮನಸ್ತಾಪ, ಭಿನ್ನಾಭಿಪ್ರಾಯ...ಏನೇ ಇದ್ದರೂ, ಈ ಜೋಡಿ ಹೀಗೆ ನಗುನಗುತ್ತಾ ಇದ್ದರೆ, ಕಿಚ್ಚನ ಅಭಿಮಾನಿಗಳ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಹಾಗೆ.

English summary
Kiccha Sudeep's wife Priya has taken her twitter account to wish Good Luck for her husband as 'Kotigobba-2' is releasing tomorrow (August 12th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada