Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನಮುಟ್ಟುವ ಚಿತ್ರಕ್ಕಾಗಿ ಸಂಭಾವನೆ ಪಡೆಯದೆ ನಟಿಸಿದ ಪ್ರಿಯಾಮಣಿ
ಪ್ರಿಯಾಮಣಿ ಕನ್ನಡ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನಲ್ಲಿಯೂ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಕಲಾವಿದೆ. ಎಂಥದ್ದೇ ಪಾತ್ರವಾದರೂ ನೀರು ಕುಡಿದಂತೆ ನಿಭಾಯಿಸೋ ಪ್ರಿಯಾಮಣಿ ಇತ್ತೀಚಿಗಷ್ಟೇ ಕಿರುಚಿತ್ರವೊಂದರಲ್ಲಿ ಅಭಿನಯ ಮಾಡಿದ್ದಾರೆ.
ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಕಿರುಚಿತ್ರದಲ್ಲಿ ಅಭಿನಯಿಸಲು ಪ್ರಿಯಾಮಣಿ ಸಂಭಾವನೆಯೇ ಪಡೆದಿಲ್ಲ ಎನ್ನುವುದು ವಿಶೇಷ. ಹೌದು ಕಥೆ ಕೇಳಿ ಇಂಪ್ರೇಸ್ ಆದ ಪ್ರಿಯಾ ಜನರಿಗೆ ಉತ್ತಮ ಸಂದೇಶ ಸಾರುವ ಕಿರುಚಿತ್ರದಲ್ಲಿ ಅಭಿನಯಿಸುವ ಮನಸ್ಸು ಮಾಡಿದ್ದಾರೆ.
5 ವರ್ಷದ ನಂತರ ತಮಿಳಿಗೆ ಹೊರಟ ಪ್ರಿಯಾಮಣಿ
ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋ ನಲ್ಲಿಯೂ ಬ್ಯುಸಿ ಆಗಿರುವ ಪ್ರಿಯಾಮಣಿ ಬಿಡುವು ಮಾಡಿಕೊಂಡು ಈ ಕಿರುಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಹಾಗಾದರೆ ಪ್ರಿಯಾಮಣಿ ಅಭಿನಯದ ಕಿರುಚಿತ್ರ ಯಾವುದು? ಅದರ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಕಿರುಚಿತ್ರದಲ್ಲಿ ಪ್ರಿಯಾಮಣಿ
'ವೈಟ್' ಎನ್ನುವ ಶೀರ್ಷಿಕೆಯಲ್ಲಿ ನಿರ್ಮಾಣವಾಗಿರುವ ಕಿರುಚಿತ್ರದಲ್ಲಿ ನಟಿ ಪ್ರಿಯಾಮಣಿ ಅಭಿನಯ ಮಾಡಿದ್ದಾರೆ. ನೇತ್ರದಾನದ ಬಗ್ಗೆ ಸಂದೇಶ ಸಾರುವಂತಹ ಚಿತ್ರ ಇದಾಗಿದ್ದು ಕಥೆಯನ್ನ ಕೇಳಿ ಇಷ್ಟ ಪಟ್ಟು ಸಂಭಾವನೆ ಪಡೆಯದೆ ಅಭಿನಯಿಸಿದ್ದಾರೆ.

ಯೋಗರಾಜ್ ಭಟ್ ಶಿಷ್ಯನ ಸಿನಿಮಾ
ಯೋಗರಾಜ್ ಭಟ್ ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡಿದ್ದ ಮನು ನಾಗ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿಕ್ಕಮಂಗಳೂರಿನಲ್ಲಿ 'ವೈಟ್' ಕಿರುಚಿತ್ರದ ಶೂಟಿಂಗ್ ಮಾಡಿದ್ದು ಲೈಫ್ 360 ಸಿನಿಮಾ ನಿರ್ಮಾಣ ಮಾಡಿದ್ದ ರಾಜಶೇಖರ್ ಶಾರ್ಟ್ ಫಿಲ್ಮಂ ಗೆ ಬಂಡವಾಳ ಹಾಕಿದ್ದಾರೆ.

ಐದು ಭಾಷೆಯಲ್ಲಿ ಬಿಡುಗಡೆ
ಸಾಕಷ್ಟು ವಿಶೇಷತೆಗಳು ಕಿರುಚಿತ್ರದಲ್ಲಿದ್ದು ಶಾರ್ಟ್ ಮೂವಿನಲ್ಲಿ ಎಲ್ಲಿಯೂ ಸಂಭಾಷಣೆ ಇರುವುದಿಲ್ಲ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಐದು ಭಾಷೆಯಲ್ಲಿ ಚಿತ್ರ ಬಿಡುಗಡೆ ಆಗಲಿದ್ದು ಐದು ಭಾಷೆಯ ಬಿಗ್ ಸ್ಟಾರ್ ನಟರಿಂದ ಕಿರುಚಿತ್ರಕ್ಕೆ ಹಿನ್ನಲೆ ಧ್ವನಿ ಕೊಡಿಸಲು ನಿರ್ದೇಶಕರು ಮುಂದಾಗಿದ್ದಾರೆ.

ಶ್ವಾನದ ಜೊತೆ ಅಭಿನಯ
'ನನ್ನ ಪ್ರಕಾರ' ಸಿನಿಮಾದಲ್ಲಿ ಪ್ರಿಯಾಮಣಿ ಜೊತೆ ಅಭಿನಯ ಮಾಡಿದ್ದ ರಾಕಿ ಎನ್ನುವ ಶ್ವಾನವೇ 'ವೈಟ್' ಕಿರುಚಿತ್ರದಲ್ಲಿ ಪ್ರಿಯಾ ಜೊತೆ ತೆರೆ ಹಂಚಿಕೊಂಡಿದೆ. ಇನ್ನು ಶಾರ್ಟ್ ಫಿಲ್ಮಂ ಗೆ ಲವ್ ಮೆಹ್ತಾ ಸಂಗೀತ ನಿರ್ದೇಶನ ಮಾಡಿದ್ದು ಸಿಜಿಜಯದೇವನ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸದ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ.