»   » ಸಿಂಪಲ್ ಆಗಿ ನೆರವೇರಿತು ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ

ಸಿಂಪಲ್ ಆಗಿ ನೆರವೇರಿತು ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ

Posted By:
Subscribe to Filmibeat Kannada

ಪಂಚಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ವಿವಾಹ ಇಂದು(ಆಗಸ್ಟ್ 23) ಸರಳವಾಗಿ ನಡೆಯಿತು. ಬೆಂಗಳೂರಿನ ಜಯನಗರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬನಶಂಕರಿಯ ತಮ್ಮ ನಿವಾಸದಿಂದ ಜಯನಗರಕ್ಕೆ ಬಂದ ಪ್ರಿಯಾಮಣಿ-ಮುಸ್ತಫಾ ಜೋಡಿ ಮಧ್ಯಾಹ್ನ 3.30ರ ವೇಳೆಗೆ ವಿವಾಹವಾದರು. ಕೇರಳ ಸಂಪ್ರದಾಯದಂತೆ ಸೀರೆಯುಟ್ಟ ಪ್ರಿಯಾಮಣಿ ಮದುಮಗಳಾಗಿ ಮಿಂಚಿದ್ದರು. ಪ್ರಿಯಾಮಣಿ ಜೀವನದ ಅದ್ಭುತ ಕ್ಷಣಗಳನ್ನು ಅವರ ಕುಟುಂಬದವರು ಕಣ್ತುಂಬಿಕೊಂಡರು. ಮುಂದೆ ಓದಿ....

ಪ್ರಿಯಾಮಣಿ - ಮುಸ್ತಫಾ ವಿವಾಹ

ನಟಿ ಪ್ರಿಯಾಮಣಿ ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಬೆಂಗಳೂರಿನ ಜಯನಗರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಪ್ರಿಯಾಮಣಿ - ಮುಸ್ತಫಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕೇರಳ ಶೈಲಿ ಉಡುಗೆ

ಸಂಪ್ರದಾಯದಂತೆ ಹಸಿರು ಮತ್ತು ಹಳದಿ ಸೀರೆಯುಟ್ಟು ನಟಿ ಪ್ರಿಯಾಮಣಿ ಮಿಂಚಿದ್ದರು. ಮದುಮಗ ಮುಸ್ತಫಾ ಬಿಳಿ ಬಣ್ಣದ ಕುರ್ತಾ ಧರಿಸಿದ್ದರು.

ಪ್ರಿಯಾ ತಂದೆ ಭಾಗಿ

ಪ್ರಿಯಾಮಣಿ ವಿವಾಹ ಕಾರ್ಯಕ್ರಮದಲ್ಲಿ ಅವರ ತಂದೆ ವಾಸುದೇವ್ ಮಣಿ ಅಯ್ಯರ್ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು.

ಕಳೆದ ತಿಂಗಳು ಅರ್ಜಿ

ರಿಜಿಸ್ಟರ್ ಮ್ಯಾರೇಜ್ ಆಗಲು ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದ ಪ್ರಿಯಾ - ಮುಸ್ತಫಾ ಜೋಡಿ ಇಂದು ಕೆಲ ಸರ್ಕಾರಿ ದಾಖಲೆ ನೀಡಿ ವಿವಾಹವಾದರು. ಈ ವೇಳೆ ಮೂರು ಜನ ಸಾಕ್ಷಿ ನೀಡಿದರು.

ನಾಳೆ ರಿಸೆಪ್ಶನ್

ಇಂದು ಸರಳವಾಗಿ ಮದುವೆ ಆಗುತ್ತಿರುವ ನಟಿ ಪ್ರಿಯಾಮಣಿ ಅವರು ನಾಳೆ ಚಿತ್ರರಂಗದ ಗಣ್ಯರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಸೆಪ್ಶನ್ ಏರ್ಪಡಿಸಿದ್ದಾರೆ.

ಮೇ ತಿಂಗಳಲ್ಲಿ ನಿಶ್ಚಿತಾರ್ಥ ಆಗಿತ್ತು

ಮುಸ್ತಫಾ ರಾಜ್ ಅವರೊಂದಿಗೆ 2016ರ ಮೇ ತಿಂಗಳಲ್ಲಿ ಪ್ರಿಯಾಮಣಿ ಉಂಗುರ ಬದಲಿಸಿಕೊಂಡಿದ್ದರು.

ಮದುವೆಯಾದ ನಂತರ ಸಿನಿಮಾ ಮಾಡ್ತಾರೆ

ಪ್ರಿಯಾಮಣಿ ಮದುವೆ ನಂತರವೂ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಸಿನಿಮಾದ ಶೂಟಿಂಗ್ ನಲ್ಲಿ ಅವರು ಭಾಗಿಯಾಗಲಿದ್ದಾರಂತೆ.

Priyamani Marraige Date Fixed | Watch Video For Complete Details | Filmibeat Kannada

ಮುಸ್ತಫಾ ರಾಜ್ ಬಗ್ಗೆ...

ಮುಸ್ತಫಾ ರಾಜ್ ಮೂಲತಃ ಮುಂಬೈ ನವರು. ದೊಡ್ಡ ಉದ್ಯಮಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿ.ಸಿ.ಎಲ್) ಹಿಂದಿನ ಪ್ರಮುಖ ವ್ಯಕ್ತಿ ಮುಸ್ತಫಾ ರಾಜ್. 'ಸಿನಿಮಾ ತಾರೆಯರು ಕ್ರಿಕೆಟ್ ಆಡಿದರೆ ಹೇಗೆ?' ಎಂಬ ಕಾನ್ಸೆಪ್ಟ್ ರೂಪುಗೊಳಿಸಿದವರ ಪೈಕಿ ಮುಸ್ತಫಾ ರಾಜ್ ಕೂಡ ಒಬ್ಬರು.

English summary
Actress Priyamani and Mustafa Raj got married in Jayanagar (Bangalore) registrar office Today (August 23rd).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada