Don't Miss!
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ ಅಸಿಂಧು; ಮೊದಲ ಪತ್ನಿಯಿಂದ ಗಂಭೀರ ಆರೋಪ
ಬಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ದಾಂಪತ್ಯದ ಬಗ್ಗೆ ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ ತಕರಾರು ತೆಗೆದಿದ್ದಾರೆ. ಕಾನೂನಿನ ಪ್ರಕಾರ ಮುಸ್ತಫಾ ಜೊತೆಗಿನ ಮದುವೆ ಕೊನೆಗೊಂಡಿಲ್ಲ, ತಾನಿನ್ನು ಮುಸ್ತಫಾ ಅವರ ಪತ್ನಿ ಎಂದು ಅಯೆಷಾ ಗಂಭೀರ ಆರೋಪ ಮಾಡಿದ್ದಾರೆ.
Recommended Video
ಮುಸ್ತಫಾ ಮತ್ತು ಆಯೆಷಾ ಇಬ್ಬರು 2013ರಲ್ಲಿ ಬೇರೆ ಬೇರೆಯಾಗಿದ್ದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಮುಸ್ತಫಾ ನಟಿ ಪ್ರಿಯಾಮಣಿ ಅವರನ್ನು 2017ರಲ್ಲಿ ಮದುವೆಯಾದರು. ಇದೀಗ ಮುಸ್ತಫಾ ಮೊದಲ ಪತ್ನಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮಕ್ಕಳಿಗೆ ನಾನು ಬೆಂಬಲ ನೀಡುತ್ತಿರುವುದರಿಂದ, ಇದು ತನ್ನಿಂದ ಹಣ ವಸೂಲಿಮಾಡುವ ಪ್ರಯತ್ನ ಎಂದು ಹೇಳಿದ್ದಾರೆ.
ಈ ಬಗ್ಗೆ ದಿನ ಪತ್ರಿಕೆ ಪ್ರತಿಕ್ರಿಯೆ ನೀಡಿರುವ ಮುಸ್ತಫಾ, "ನನ್ನ ವಿರುದ್ಧದ ಆರೋಪಗಳು ಸುಳ್ಳು. ನಾನು ಮಕ್ಕಳಿಗಾಗಿ ಆಯೆಷಾಗೆ ಹಣವನ್ನು ನೀಡುತ್ತಿದ್ದೀನಿ. ನನ್ನಿಂದ ಹಣ ವಸೂಲಿ ಮಾಡಲು ಹೀಗೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ. ಜೊತೆಗೆ ಕೌಟುಂಬಿಕ ಹಿಂಸಾಚಾರ ಸೇರಿದಂತೆ ನನ್ನ ವಿರುದ್ಧ ಆರೋಪ ಮಾಡಲು ಯಾಕಿಷ್ಟು ದಿನ ಕಾಯುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಮುಸ್ತಫಾ ಮೊದಲ ಪತ್ನಿ ಮಾತನಾಡಿ, "ಮುಸ್ತಾಫಾ ಇನ್ನು ನನ್ನನ್ನು ಮದುವೆಯಾಗಿದ್ದಾರೆ. ನಾನಿನ್ನು ಅವರ ಪತ್ನಿಯಾಗಿ ಇದ್ದೀನಿ. ಮುಸ್ತಫಾ ಮತ್ತು ಪ್ರಿಯಾಮಣಿ ಮದುವೆ ಅಸಿಂಧು. ನಾವು ವಿಚ್ಛೇದನಕ್ಕೆ ಸಹ ಅರ್ಜಿ ಸಲ್ಲಿಸಿಲ್ಲ. ಪ್ರಿಯಾಮಣಿಯನ್ನು ಮದುವೆಯಾಗುವಾಗ ಅವರು ಬ್ಯಾಚುಲರ್ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ" ಎಂದು ಆರೋಪ ಮಾಡಿದ್ದಾರೆ.
"ಇಬ್ಬರು ಮಕ್ಕಳ ತಾಯಿಯಾಗಿ ನಾನೇನು ಮಾಡಲು ಸಾಧ್ಯ ಹೇಳಿ? ಸರಿಯಾದ ದಾರಿಯಲ್ಲಿ ಇದನ್ನು ಸರಿದೂಗೀಸಲು ಪ್ರಯತ್ನ ಪಟ್ಟೆ. ಆದರೆ ಅದು ಕಾರ್ಯರೂಪಕ್ಕೆ ಬರದಿದ್ದಾಗ, ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಈಗ ಅವರು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಪತಿಯ ಮೇಲೆ ನಟಿ ಪ್ರಿಯಾಮಣಿ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನವೊದರಲ್ಲಿ ಮಾತನಾಡಿದ್ದ ಪ್ರಿಯಾಮಣಿ, "ವೈಯಕ್ತಿಕವಾಗಿ ನನಗೆ, ನಾನು ಮದುವೆ ಬಳಿಕ ತುಂಬಾ ಬ್ಯುಸಿಯಾಗಿದ್ದೀನಿ. ಹಾಗಾಗಿ ಮುಸ್ತಫಾ ನನಗೆ ಲಕ್ಕಿ ಚಾರ್ಮ್ ಎಂದು ನಾನು ಯಾವಾಗಲು ಹೇಳುತ್ತೇನೆ. ನನ್ನ ಕೆಲಸಕ್ಕೆ ಬೆಂಬಲಿಸುವ ಅದ್ಭುತ ಸಂಗಾತಿಯನ್ನು ನಾನು ಪಡೆದಿದ್ದೇನೆ. ಧನ್ಯವಾದ ಹೇಳುತ್ತೇನೆ" ಎಂದಿದ್ದರು.
ನಟಿ ಪ್ರಿಯಾಮಣಿ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಮೂಲಕ ಪ್ರಿಯಾಮಣಿ ದೇಶದಾದ್ಯಂತ ಸದ್ದು ಮಾಡಿದ್ದರು. ವೆಬ್‌ಸಿರೀಸ್‌ನಲ್ಲಿ ಪ್ರಿಯಾಮಣಿ ನಟ ಮನೋಜ್ ಬಾಜಪೇಯಿ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು.
ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಇಬ್ಬರು 2018ರಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು. ಮದುವೆ ಬಳಿಕ ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಇಟ್ಟುಕೊಂಡಿದ್ದರು. ಆರತಕ್ಷತೆ ಸಮಾರಂಭಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಜರಾಗಿದ್ದರು.