ಇಂದು ನಡೆಯಲಿದೆ ಬಹುಭಾಷಾ ನಟಿ ಪ್ರಿಯಾಮಣಿ ಮದುವೆ
ಸೌತ್ ಸಿನಿಮಾ ರಂಗದ ಸ್ಟಾರ್ ನಟಿ ಪ್ರಿಯಾಮಣಿ ಅವರ ಮದುವೆ ಇಂದು ನಡೆಯಲಿದೆ. ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಜೋಡಿ ಇಂದು ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.
ಪ್ರಿಯಾಮಣಿ ವಿವಾಹ ಇಂದು ಬೆಂಗಳೂರಿನಲ್ಲಿ ನಡೆಯಲಿದ್ದು, ನಾಳೆ ಅದ್ದೂರಿಯಾಗಿ ರಿಸೆಪ್ಶನ್ ಏರ್ಪಡಿಸಲಾಗಿದೆ. ಇನ್ನು ಪ್ರಿಯಾಮಣಿ ತಮ್ಮ ಮದುವೆಯ ವಿವರವನ್ನು ಅದಷ್ಟು ಗೌಪ್ಯವಾಗಿ ಇಟ್ಟಿದ್ದು, ಮೂಲಗಳ ಪ್ರಕಾರ ಅವರು ಶಿವಾಜಿನಗರದ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ಆಗಲಿದ್ದಾರೆ.
ಅಂದಹಾಗೆ, ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಅವರ ಮದುವೆಯ ಒಂದಷ್ಟು ವಿವರ ಮುಂದಿದೆ ಓದಿ...

ಇಂದು ಮದುವೆ
ನಟಿ ಪ್ರಿಯಾಮಣಿ ಇಂದು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ.

ನಾಳೆ ರಿಸೆಪ್ಶನ್
ಇಂದು ಸರಳವಾಗಿ ಮದುವೆ ಆಗುತ್ತಿರುವ ನಟಿ ಪ್ರಿಯಾಮಣಿ ಅವರು ನಾಳೆ
ಚಿತ್ರರಂಗದ ಗಣ್ಯರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಸೆಪ್ಶನ್ ಏರ್ಪಡಿಸಿದ್ದಾರೆ.

ಮೇ ತಿಂಗಳಲ್ಲಿ ನಿಶ್ಚಿತಾರ್ಥ ಆಗಿತ್ತು
ಮುಸ್ತಫಾ ರಾಜ್ ಅವರೊಂದಿಗೆ ಸಂಪ್ರದಾಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಮಣಿ 2016ರ ಮೇ ತಿಂಗಳಲ್ಲಿ ಉಂಗುರು ಬದಲಿಸಿಕೊಂಡಿದ್ದರು.

ಮದುವೆಯಾದ ನಂತರ ಸಿನಿಮಾ ಮಾಡ್ತಾರೆ
ಪ್ರಿಯಾಮಣಿ ಮದುವೆ ನಂತರವೂ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಸಿನಿಮಾದ ಶೂಟಿಂಗ್ ನಲ್ಲಿ ಅವರು ಭಾಗಿಯಾಗಲಿದ್ದಾರಂತೆ.

ಮುಸ್ತಫಾ ರಾಜ್ ಬಗ್ಗೆ
ಮುಸ್ತಫಾ ರಾಜ್ ಮೂಲತಃ ಮುಂಬೈ ನವರು. ದೊಡ್ಡ ಉದ್ಯಮಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿ.ಸಿ.ಎಲ್) ಹಿಂದಿನ ಪ್ರಮುಖ ವ್ಯಕ್ತಿ ಮುಸ್ತಫಾ ರಾಜ್. 'ಸಿನಿಮಾ ತಾರೆಯರು ಕ್ರಿಕೆಟ್ ಆಡಿದರೆ ಹೇಗೆ?' ಎಂಬ ಕಾನ್ಸೆಪ್ಟ್ ರೂಪುಗೊಳಿಸಿದವರ ಪೈಕಿ ಮುಸ್ತಫಾ ರಾಜ್ ಕೂಡ ಒಬ್ಬರು.


Click it and Unblock the Notifications











