»   » ಆಡಿಕೊಂಡವರ ಬಾಯಿಗೆ ಗೋದ್ರೆಜ್ ಬೀಗ ಜಡಿದ ನಟಿ ಪ್ರಿಯಾಮಣಿ.!

ಆಡಿಕೊಂಡವರ ಬಾಯಿಗೆ ಗೋದ್ರೆಜ್ ಬೀಗ ಜಡಿದ ನಟಿ ಪ್ರಿಯಾಮಣಿ.!

Posted By:
Subscribe to Filmibeat Kannada

ಕಳೆದ ವಾರವಷ್ಟೇ ಪಡ್ಡೆ ಹುಡುಗರಿಗೆ ನಟಿ ಪ್ರಿಯಾಮಣಿ ಹಾರ್ಟ್ ಬ್ರೇಕಿಂಗ್ ನ್ಯೂಸ್ ನೀಡಿದ್ದರು. ಮೇ 27 ರಂದು (ಶುಕ್ರವಾರ) ಬೆಂಗಳೂರಿನ ತಮ್ಮ ಮನೆಯಲ್ಲೇ, ಇನಿಯ ಮುಸ್ತಫಾ ರಾಜ್ ಜೊತೆಗೆ ನಟಿ ಪ್ರಿಯಾಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ಸಂತಸದ ವಿಚಾರವನ್ನ ಮಾರನೇ ದಿನ ಅಂದ್ರೆ ಮೇ 28 ರಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಪ್ರಿಯಾಮಣಿ ಹಂಚಿಕೊಂಡಿದ್ದರು. [ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ]

ಹೊಸ ಜೀವನದ ಹೊಸ್ತಿಲಲಿ ಇರುವ ಪ್ರಿಯಾಮಣಿಗೆ ಶುಭ ಹಾರೈಸುವ ಬದಲು, ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಕೊಂಕು ಮಾತನಾಡಿದವರೇ ಹೆಚ್ಚು. ಮುಂದೆ ಓದಿ.....

ಅಂತರ್-ಧರ್ಮೀಯ ವಿವಾಹ.!

ನಟಿ ಪ್ರಿಯಾಮಣಿ ಹಿಂದು ಹಾಗೂ ಮುಸ್ತಫಾ ರಾಜ್ ಮುಸ್ಲಿಂ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಿಯಾಮಣಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ.

ಲವ್ ಜಿಹಾದ್ ಅಂತೆ.!

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವರು, 'ಲವ್ ಜಿಹಾದ್' ಹಣೆಪಟ್ಟಿ ಹೊರೆಸುತ್ತಿದ್ದಾರೆ.

ಬೇಸರ ವ್ಯಕ್ತಪಡಿಸಿರುವ ಪ್ರಿಯಾಮಣಿ.!

ಜನರಿಂದ ವ್ಯಕ್ತವಾಗಿರುವ ನೆಗೆಟಿವ್ ಕಾಮೆಂಟ್ಸ್ ಓದಿ ನಟಿ ಪ್ರಿಯಾಮಣಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಿಯಾಮಣಿ ಏನಂತಾರೆ.?

''ನನ್ನ ನಿಶ್ಚಿತಾರ್ಥದ ಕುರಿತು ವ್ಯಕ್ತವಾಗಿರುವ ಟೀಕೆಗಳ ಬಗ್ಗೆ ನನಗೆ ಬೇಸರವಾಗಿದೆ. ನನ್ನ ಬದುಕಿನ ಹೊಸ ಪಯಣಕ್ಕೆ ನೀವೆಲ್ಲಾ ಆಶೀರ್ವಾದ ಮಾಡುತ್ತೀರಿ ಎಂದು ಭಾವಿಸಿದ್ದೆ. ಆದರೆ, ನೆಗೆಟಿವ್ ಪ್ರತಿಕ್ರಿಯೆ ನೋಡಿ ನೋವಾಗಿದೆ. ನಾನು ನನ್ನ ಹೆತ್ತವರು ಮತ್ತು ಭಾವಿ ಪತಿಯನ್ನು ಹೊರತು ಪಡಿಸಿ, ಯಾರಿಗೂ ಸ್ಪಷ್ಟೀಕರಣ ನೀಡಬೇಕಾದ ಅಗತ್ಯವಿಲ್ಲ'' ಎಂದು ಸ್ಟೇಟಸ್ ಪೋಸ್ಟ್ ಮಾಡುವ ಮೂಲಕ ಆಡಿಕೊಂಡವರ ಬಾಯಿಗೆ ಬೀಗ ಜಡಿದಿದ್ದಾರೆ ನಟಿ ಪ್ರಿಯಾಮಣಿ.

ಮದುವೆ ಯಾವಾಗ.?

ಮೂಲಗಳ ಪ್ರಕಾರ, ಈ ವರ್ಷದ ಕೊನೆಗೆ ನಟಿ ಪ್ರಿಯಾಮಣಿ ವಿವಾಹವಾಗಲಿದ್ದಾರೆ.

English summary
Kannada Actress Priyamani hits back after being trolled for her engagement with long-time-boyfriend Mustafa Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada