For Quick Alerts
  ALLOW NOTIFICATIONS  
  For Daily Alerts

  ಮದುವೆ ಬಳಿಕ ಪ್ರಿಯಾಮಣಿ ಸಿನಿಮಾ ಮಾಡ್ತಾರ?

  By Bharath Kumar
  |

  ಬಹುಭಾಷಾ ತಾರೆ ಪ್ರಿಯಾಮಣಿ ನೂತನ ಬಾಳಿಗೆ ಕಾಲಿಡುತ್ತಿದ್ದು, ಇದೇ ತಿಂಗಳಲ್ಲಿ ಉದ್ಯಮಿ ಮುಸ್ತಫಾ ರಾಜ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಇಂತಹ ವಿಶೇಷ ಸಂದರ್ಭದಲ್ಲಿ ಎಲ್ಲ ನಟಿಯರಿಗೂ ಎದುರಾಗುವಂತಹ ಪ್ರಶ್ನೆ ಈಗ ಪ್ರಿಯಾಮಣಿಗೂ ಎದುರಾಗಿದೆ.

  ಮದುವೆ ನಂತರ ಸಿನಿಮಾ ಮಾಡ್ತೀರಾ? ಚಿತ್ರರಂಗದಲ್ಲಿ ಮುಂದುವರೆಯುತ್ತೀರಾ? ಎಂಬ ಪ್ರಶ್ನೆಗಳು ಪ್ರಿಯಾಮಣಿ ಮುಂದಿದೆ. ಈ ಪ್ರಶ್ನೆಗಳಿಗೆ ಉತ್ತರಿಸಿರುವ ನಟಿ, ''ಮದುವೆ ಬಳಿಕ ಬ್ರೇಕ್ ತೆಗೆದುಕೊಳ್ಳುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

  ಆಗಸ್ಟ್ 23 ರಂದು ಬೆಂಗಳೂರಿನ ರಿಜಿಸ್ಟಾರ್ ಆಫೀಸ್ ನಲ್ಲಿ ಸರಳವಾಗಿ ವಿವಾಹವಾಗುತ್ತಿರುವ ಪ್ರಿಯಾಮಣಿ, ನಂತರ ಆಪ್ತರಿಗಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಿದ್ದಾರೆ.

  ''ನಾವಿಬ್ಬರು ಪ್ರತ್ಯೇಕ ಧರ್ಮಗಳಿಗೆ ಸೇರಿದವರಾಗಿರುವುದರಿಂದ ನಾವು ರಿಜಿಸ್ಟಾರ್ ಮದುವೆಯಾಗುತ್ತಿದ್ದೇವೆ, ಇಬ್ಬರು ಪರಸ್ಪರ ಚರ್ಚಿಸಿ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ'' ಎಂದು ಪ್ರಿಯಾಮಣಿ ಹೇಳಿದ್ದಾರೆ.

  ''ವಿವಾಹವಾದ ಎರಡನೇ ದಿನದ ನಂತರ ನನ್ನ ಕೆಲಸಕ್ಕೆ ಮರಳುವ ಪ್ಲಾನ್ ಇದೆ. ಎರಡು ಸಿನಿಮಾಗಳ ಶೂಟಿಂಗ್ ಬಾಕಿಯಿರುವ ಕಾರಣ ನಾನು ಬ್ರೇಕ್ ತೆಗೆದುಕೊಳ್ಳುತ್ತಿಲ್ಲ'' ಎಂದು ಪ್ರಿಯಾಮಣಿ ತಿಳಿಸಿದ್ದಾರೆ.

  English summary
  Southern film actress Priyamani, who is set to enter wedlock with Mustafa Raj on August 23, says she has no plans of taking a break from work and will return to face the arc lights two days after her marriage

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X