Don't Miss!
- News
ಬೆಂಗಳೂರು ಏರ್ಪೋರ್ಟ್ನಲ್ಲಿ ವನ್ಯಜೀವಿಗಳ ಕಳ್ಳಸಾಗಣೆ; ಮಹಿಳೆ ಸೇರಿ ಏಳು ಮಂದಿ ಬಂಧನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಸ್ತಫಾ ಮತ್ತು ನನ್ನ ಸಂಬಂಧ ಗಟ್ಟಿಯಾಗಿದೆ; ವಿವಾದದ ಬಗ್ಗೆ ಪ್ರಿಯಾಮಣಿ ಪ್ರತಿಕ್ರಿಯೆ
ಮುಸ್ತಫಾ ರಾಜ್ ಜೊತೆಗಿನ ದಾಂಪತ್ಯ ಜೀವನ ತುಂಬಾ ಸುರಕ್ಷಿತವಾಗಿದೆ, ತಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಎಂದು ಪ್ರಿಯಾಮಣಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ದಾಂಪತ್ಯದ ಬಗ್ಗೆ ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ ತಕರಾರು ತೆಗೆದಿದ್ದು, ಇಬ್ಬರ ವಿವಾಹ ಅಸಿಂಧು ಎಂದು ಗಂಭೀರ ಆರೋಪ ಮಾಡಿದ್ದರು.
ಕಾನೂನಿನ ಪ್ರಕಾರ ಮುಸ್ತಫಾ ಜೊತೆಗಿನ ಮದುವೆ ಕೊನೆಗೊಂಡಿಲ್ಲ, ತಾನಿನ್ನು ಮುಸ್ತಫಾ ಅವರ ಪತ್ನಿ ಎಂದು ಅಯೆಷಾ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಮಣಿ, ಮುಸ್ತಫಾ ಸದ್ಯ ವಿದೇಶದಲ್ಲಿದ್ದಾರೆ. ಆದರೆ ಪ್ರತಿದಿನ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ, ಪ್ರತಿದಿನ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಮುಂದೆ ಓದಿ...

ಮುಸ್ತಫಾ ಸದ್ಯ ಅಮೆರಿಕದಲ್ಲಿದ್ದಾರೆ- ಪ್ರಿಯಾಮಣಿ
ಬಾಲಿವುಡ್ ಹಂಗಾಮ ವೆಬ್ ಪೋರ್ಟಲ್ ಜೊತೆ ಮಾತನಾಡಿದ ನಟಿ ಪ್ರಿಯಾಮಣಿ, "ಸಂವಹನ ತುಂಬಾ ಮುಖ್ಯ. ನನ್ನ ಮತ್ತು ಮುಸ್ತಫಾ ನಡುವಿನ ಸಂಬಂಧದ ಬಗ್ಗೆ ಕೇಳುತ್ತಿದ್ರೆ, ನಾವು ನಮ್ಮ ಸಂಬಂಧದಲ್ಲಿ ತುಂಬಾ ಸುರಕ್ಷಿತವಾಗಿದ್ದೇವೆ. ಇದೀಗ ಅವರು ಯುಎಸ್‌ನಲ್ಲಿದ್ದಾರೆ. ಅಲ್ಲೇ ಕೆಲಸ ಮಾಡುತ್ತಿದ್ದಾರೆ. ನಾವು ಪ್ರತಿದಿನ ಒಬ್ಬರಿಗೊಬ್ಬರು ಮಾತನಾಡುತ್ತೇವೆ. ಪ್ರತಿದಿನ ಏನ್ ಆಯ್ತು ಎಂದು ಮಾತನಾಡದಿದ್ದರೂ ಹಾಯ್..ಹೆಲೋ ಹೇಳಿ ಅವರು ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ. ಬ್ಯುಸಿ ಇದ್ದರೂ ಸಹ ಫೋನ್ ಮತ್ತು ಮೆಸೇಜ್ ಮಾಡುತ್ತಾರೆ. ನಾನು ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರೂ ಸಹ ಫೋನ್ ಮತ್ತು ಮೆಸೇಜ್ ಮಾಡುತ್ತೇನೆ" ಎಂದು ಪ್ರಿಯಾಮಣಿ ಹೇಳಿದ್ದಾರೆ.

ತಮ್ಮ ಸಂಬಂಧ ತುಂಬಾ ಸುರಕ್ಷಿತವಾಗಿದೆ-ಪ್ರಿಯಾಮಣಿ
"ನಾವು ಖಂಡಿತವಾಗಿಯೂ ಪ್ರತಿದಿನ ಮಾತನಾಡುತ್ತೇವೆ. ನಾವು ತುಂಬಾ ಸುರಕ್ಷಿತವಾಗಿದ್ದೇವೆ. ಪ್ರತಿ ವಿಚಾರವನ್ನು ಮಾತಾಡುತ್ತೇವೆ. ಅದು ಪ್ರತಿ ಸಂಬಂಧಕ್ಕೂ ಪ್ರಮುಖವಾಗುತ್ತದೆ" ಎಂದು ಪ್ರಿಯಾಮಣಿ ಹೇಳಿದ್ದಾರೆ.

ಮೊದಲ ಪತ್ನಿಯ ಆರೋಪ ತಳ್ಳಿ ಹಾಕಿದ ಮುಸ್ತಫಾ
ಇನ್ನು ಮೊದಲ ಪತ್ನಿಯ ಆರೋಪವನ್ನು ತಳ್ಳಿಹಾಕಿರುವ ಮುಸ್ತಫಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ನನ್ನ ವಿರುದ್ಧದ ಆರೋಪಗಳು ಸುಳ್ಳು. ನಾನು ಮಕ್ಕಳಿಗಾಗಿ ಆಯೆಷಾಗೆ ಹಣವನ್ನು ನೀಡುತ್ತಿದ್ದೀನಿ. ನನ್ನಿಂದ ಹಣ ವಸೂಲಿ ಮಾಡಲು ಹೀಗೆ ಮಾಡುತ್ತಿದ್ದಾರೆ" ಎಂದಿದ್ದಾರೆ. ಒಂದು ವೇಳೆ ಹಿಂಸಾಚಾರ ಮಾಡಿದ್ದರೆ ನನ್ನ ವಿರುದ್ಧ ಆರೋಪ ಮಾಡಲು ಯಾಕಿಷ್ಟು ದಿನ ಕಾಯುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ವಿಚ್ಛೇದನ ನೀಡಿಲ್ಲ ಎಂದ ಮುಸ್ತಫಾ ಮೊದಲ ಪತ್ನಿ
ಮುಸ್ತಫಾ ಮೊದಲ ಪತ್ನಿ ಆಯೆಷಾ ಆರೋಪ ಮಾಡಿ, "ಮುಸ್ತಾಫಾ ಇನ್ನು ನನ್ನನ್ನು ಮದುವೆಯಾಗಿದ್ದಾರೆ. ನಾನಿನ್ನು ಅವರ ಪತ್ನಿಯಾಗಿ ಇದ್ದೀನಿ. ಮುಸ್ತಫಾ ಮತ್ತು ಪ್ರಿಯಾಮಣಿ ಮದುವೆ ಅಸಿಂಧು. ನಾವು ವಿಚ್ಛೇದನಕ್ಕೆ ಸಹ ಅರ್ಜಿ ಸಲ್ಲಿಸಿಲ್ಲ. ಪ್ರಿಯಾಮಣಿಯನ್ನು ಮದುವೆಯಾಗುವಾಗ ಅವರು ಬ್ಯಾಚುಲರ್ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ" ಎಂದು ಹೇಳಿದ್ದಾರೆ.
Recommended Video

2018ರಲ್ಲಿ ಪ್ರಿಯಾಮಣಿ ಜೊತೆ ಮುಸ್ತಫಾ 2ನೇ ಮದುವೆ
ಮುಸ್ತಫಾ ಮತ್ತು ಆಯೆಷಾ ಇಬ್ಬರು 2013ರಲ್ಲಿ ಬೇರೆ ಬೇರೆಯಾಗಿದ್ದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಮುಸ್ತಫಾ ನಟಿ ಪ್ರಿಯಾಮಣಿ ಅವರನ್ನು 2018ರಲ್ಲಿ ಮದುವೆಯಾದರು. ಪ್ರಿಯಾಮಣಿ ಜೊತೆ ಮುಸ್ತಫಾ ಬೆಂಗಳೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಸಿನಿಮಾರಂಗದ ಅನೇಕ ಗಣ್ಯರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.