Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಂಟಿ ಅಂದ್ರು, ಬಣ್ಣ ಕಪ್ಪು ಅಂದ್ರು, ಡುಮ್ಮಿ ಅಂದ್ರು: ಕೆಟ್ಟ ಅನುಭವ ಬಿಚ್ಚಿಟ್ಟ ಪ್ರಿಯಾಮಣಿ
ಮನೋಜ್ ಬಾಜಪೇಯಿ ಮತ್ತು ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ನಟಿಸಿರುವ 'ಫ್ಯಾಮಿಲಿ ಮ್ಯಾನ್ 2' ಸಿನಿಮಾದ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ, ಮನೋಜ್ ಬಾಜಪೇಯಿ ಪತ್ನಿ ಪಾತ್ರ ನಿರ್ವಹಿಸಿದ್ದು ಮೊದಲನೇ ಆವೃತ್ತಿಯಲ್ಲೂ ಗಮನ ಸೆಳೆದಿದ್ದರು.
ಫ್ಯಾಮಿಲಿ ಮ್ಯಾನ್ ಎರಡನೇ ಆವೃತ್ತಿಯಲ್ಲೂ ಪ್ರಿಯಮಾಣಿ ಪಾತ್ರ ಮೆಚ್ಚುಗೆ ಗಳಿಸಿಕೊಂಡಿದೆ. ಮದುವೆ ಆದ್ಮೇಲೆ ಒಳ್ಳೊಳ್ಳೆ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಿರುವ ಪ್ರಿಯಾಮಣಿ, ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರ ಪ್ರಶಸ್ತಿ ವಿಜೇತೆ ''ನನ್ನ ಆಂಟಿ ಅಂದ್ರು, ಕಪ್ಪು ಆಗಿ ಕಾಣ್ತಿಯಾ ಅಂದ್ರು, ಡುಮ್ಮಿ ಅಂದ್ರು'' ಎಂದು ಬೇಸರ ಹೊರಹಾಕಿದ್ದಾರೆ. ಮುಂದೆ ಓದಿ...

ನೀನು ತುಂಬಾ ದಪ್ಪ ಕಾಣ್ತಿದ್ದೀರಾ
'ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ತೂಕ 65 ಕೆಜಿವರೆಗೂ ಏರಿಕೆಯಾಗಿತ್ತು. ಈಗ ಇರುವುದಕ್ಕಿಂತ ದಪ್ಪ ಕಾಣುತ್ತಿದ್ದೆ. ಆ ಸಂದರ್ಭದಲ್ಲಿ ಬಹಳಷ್ಟು ಜನರು, 'ಹೇ ನೀವು ತುಂಬಾ ದಪ್ಪ ಕಾಣುತ್ತೀರಿ, ಏಕೆ ಇಷ್ಟು ದಪ್ಪ ಆದ್ರಿ' ಎಂದು ಹೇಳಿದ್ದರು. ಆದ್ರೀಗ, ''ನೀವು ಏಕೆ ತೆಳ್ಳಗೆ ಆಗಿದ್ದೀರಾ, ನೀವು ದಪ್ಪ ಇದ್ದಾಗಲೇ ತುಂಬಾ ಸುಂದರವಾಗಿ ಕಾಣ್ತಿದ್ರಿ' ಅಂತಾರೆ. ಸಣ್ಣ ಇದ್ದಾಗಲೂ ಮಾತಾಡ್ತಾರೆ, ದಪ್ಪ ಆದರೂ ಮಾತಾಡ್ತಾರೆ. ಮೊದಲು ನೀವು ನನ್ನ ಯಾವ ರೀತಿ ಇಷ್ಟಪಡ್ತೀರಾ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದು ಹೇಳಿದ್ದೇನೆ' ಎಂದು ಪ್ರಿಯಾಮಣಿ ಹೇಳಿಕೊಂಡಿದ್ದಾರೆ.
ಪತಿ
ಮುಸ್ತಾಫಾ
ಜೊತೆ
ರಂಜಾನ್
ಆಚರಣೆ
ಹೇಗಿದೆ?
ಪ್ರಿಯಾಮಣಿ
ಉತ್ತರ

ನೀನು ಕಪ್ಪು ಅಂದ್ರು
''ಬಹಳಷ್ಟು ಜನ ನನ್ನನ್ನು ಕಪ್ಪು ಎಂದರು. ನಿನ್ನ ಬಣ್ಣ ಕಪ್ಪು ಎಂದು ಟೀಕಿಸಿದರು. ಚರ್ಮ ಕಪ್ಪಾಗಿದ್ದರೆ ತಪ್ಪೇನಿದೆ? ಕಪ್ಪು ಎಂದು ಯಾರನ್ನು ನಿಂದಿಸಬೇಡಿ. ಅದರಲ್ಲಿಯೂ ಸುಂದರತೆ ಇದೆ'' ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.

ಆಂಟಿ ಥರ ಕಾಣ್ತಿಯಾ ಅಂದ್ರು
ನಾನು ಮೇಕಪ್ ಮಾಡದಿರುವ ಫೋಟೋ ಹಾಕಿದ್ರೆ ತುಂಬಾ ಜನರೂ ಅದರಲ್ಲಿಯೂ ಟೀಕೆ ಮಾಡ್ತಾರೆ. ಓಹ್ ನೀನು ಮೇಕಪ್ ಇದ್ದರೆ ಚೆನ್ನಾಗಿ ಕಾಣ್ತಿಯಾ, ಮೇಕಪ್ ಇಲ್ಲಂದ್ರೆ ಆಂಟಿ ಥರ ಇದ್ದೀಯಾ ಎಂದು ಹೇಳ್ತಾರೆ. ನಾಳೆ ನೀವು ಆಂಟಿ-ಅಂಕಲ್ ಆಗಲೇಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಮಣಿ
ಬಿಕಿನಿ
ಪುರಾಣ:
ನಿರ್ಮಾಪಕರು
ಹೇಳಿದ್ದೇನು?
Recommended Video

2017ರಲ್ಲಿ ಮುಸ್ತಾಫ್ ರಾಜ್ ಜೊತೆ ಮದುವೆ
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಮಾಣಿ 'ಪರುತ್ತೀವೀರನ್' ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 2017ರಲ್ಲಿ ಮುಸ್ತಾಫ್ ರಾಜ್ ಜೊತೆ ಬೆಂಗಳೂರಿನಲ್ಲಿ ವಿವಾಹವಾದರು. ಪ್ರಸ್ತುತ, ವಿರಾಟ ಪರ್ವ, ನಾರಪ್ಪ, ಮೈದಾನ್, ಸೈನೈಡ್, ಖೈಮೆರಾ ಅಂತಹ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.