»   » ನಟಿ ಪ್ರಿಯಾಮಣಿ ಮದುವೆ ದಿನಾಂಕ ನಿಗದಿ. ಯಾವಾಗ, ಎಲ್ಲಿ?

ನಟಿ ಪ್ರಿಯಾಮಣಿ ಮದುವೆ ದಿನಾಂಕ ನಿಗದಿ. ಯಾವಾಗ, ಎಲ್ಲಿ?

Posted By:
Subscribe to Filmibeat Kannada

ಬಹುಭಾಷಾ ನಟಿ ಪ್ರಿಯಾಮಣಿ ಕಳೆದ ವರ್ಷ ತಮ್ಮ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಬಗ್ಗೆ ಗೌಪ್ಯವಾಗಿಟ್ಟಿದ್ದ ಜೋಡಿಗಳು ಮುಂದಿನ ವರ್ಷದಲ್ಲಿ ಸಪ್ತಪದಿ ತುಳಿಯಲಿದ್ದೇವೆ ಎನ್ನುವುದಷ್ಟೇ ಹೇಳಿದ್ದರು.

ಈಗ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಅವರ ಮದುವೆ ದಿನಾಂಕ ನಿಗದಿಯಾಗಿದ್ದು, ಅಭಿಮಾನಿಗಳಿಗೆ ದಿಢೀರ್ ಅಂತ ಸರ್ಪ್ರೈಸ್ ಕೊಟ್ಟಿದ್ದಾರೆ. ಪ್ರಿಯಾಮಣಿ ಅವರ ಮದುವೆಯ ವಿಶೇಷ ಏನಪ್ಪಾ ಅಂದ್ರೆ, ಅದ್ಧೂರಿ ಮದುವೆ ಗುಡ್ ಬೈ ಹೇಳಿರುವ ಪ್ರಿಯಾ, ಅತ್ಯಂತ ಸರಳವಾಗಿ ವಿವಾಹವಾಗುತ್ತಿದ್ದಾರೆ.

ಹಾಗಿದ್ರೆ, ಪ್ರಿಯಾಮಣಿ ಅವರ ಮದುವೆ ಎಲ್ಲಿ? ಯಾವಾಗ? ಎಂಬ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ......

ರಿಜಿಸ್ಟಾರ್ ಮದುವೆ

ಜೀವನದ ಅತ್ಯಂತ ಮಧುರ ಕ್ಷಣ ಮದುವೆ. ಹೀಗಾಗಿ, ಮದುವೆಯನ್ನ ತುಂಬಾ ಗ್ರ್ಯಾಂಡ್ ಆಗಿ ಆಗಬೇಕು ಎನ್ನುವುದು ಬಹುತೇಕರ ಬಯಕೆ. ಆದ್ರೆ, ಅದ್ಧೂರಿ ಮದುವೆಗೆ ಗುಡ್ ಬೈ ಹೇಳಿರುವ ಪ್ರಿಯಾಮಣಿ ರಿಜಿಸ್ಟಾರ್ ಮದುವೆ ಆಗುತ್ತಿದ್ದಾರೆ.

ಆಡಿಕೊಂಡವರ ಬಾಯಿಗೆ ಗೋದ್ರೆಜ್ ಬೀಗ ಜಡಿದ ನಟಿ ಪ್ರಿಯಾಮಣಿ.!

ಆಗಸ್ಟ್ 23ಕ್ಕೆ ವಿವಾಹ

ಪ್ರಿಯಾಮಣಿ ಮದುವೆ ಎಂದಾಕ್ಷಣ ಇನ್ನು ಎಷ್ಟು ದಿನ ಇರಬಹುದು ಎಂದು ಲೆಕ್ಕಹಾಕಬೇಡಿ. ಪ್ರಿಯಾಮಣಿ ಅವರ ಮದುವೆ ಇದೇ ತಿಂಗಳು (ಆಗಸ್ಟ್) 23 ರಂದು ನೆರವೇರಲಿದೆ.

ಬೆಂಗಳೂರಿನಲ್ಲಿ ಆರತಕ್ಷತೆ

ಸರಳವಾಗಿ ರಿಜಿಸ್ಟಾರ್ ಮದುವೆ ಆಗಲಿರುವ ಪ್ರಿಯಾಮಣಿ ಅವರು, ಆಗಸ್ಟ್ 24 ರಂದು ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ.

ಮೇ ತಿಂಗಳಲ್ಲಿ ನಿಶ್ಚಿತಾರ್ಥ ಆಗಿತ್ತು

ಮುಸ್ತಫಾ ರಾಜ್ ಅವರೊಂದಿಗೆ ಸಂಪ್ರದಾಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಮಣಿ 2016ರ ಮೇ ತಿಂಗಳಲ್ಲಿ ಉಂಗುರು ಬದಲಿಸಿಕೊಂಡಿದ್ದರು.

ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ

ಪ್ರಿಯಾಮಣಿ ಬಾವಿ ಪತಿ ಬಗ್ಗೆ

ಮುಸ್ತಫಾ ರಾಜ್ ಮೂಲತಃ ಮುಂಬೈ ನವರು. ದೊಡ್ಡ ಉದ್ಯಮಿ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿ.ಸಿ.ಎಲ್) ಹಿಂದಿನ ಪ್ರಮುಖ ವ್ಯಕ್ತಿ ಮುಸ್ತಫಾ ರಾಜ್. 'ಸಿನಿಮಾ ತಾರೆಯರು ಕ್ರಿಕೆಟ್ ಆಡಿದರೆ ಹೇಗೆ?' ಎಂಬ ಕಾನ್ಸೆಪ್ಟ್ ರೂಪುಗೊಳಿಸಿದವರ ಪೈಕಿ ಮುಸ್ತಫಾ ರಾಜ್ ಕೂಡ ಒಬ್ಬರು.

ಪ್ರಿಯಾಮಣಿ ಕೈ ಹಿಡಿಯಲಿರುವ ಮುಸ್ತಫಾ ರಾಜ್ ಯಾರು.? ಅವರ ಹಿನ್ನಲೆ ಏನು.?

English summary
Priyamani got engaged with Mustafa Raj last year. They are now keen to take their relationship to the next level. Priyamani and Mustafa will be marrying in Registrar Office On August 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada